Site icon Vistara News

IND vs SA | ಒಂದೇ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಸಾಧಿಸಿದ ಎರಡೆರಡು ದಾಖಲೆಗಳೇನು?

ind vs sa

ತಿರುವನಂತಪುರ : ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿ ಮೊದಲ ಪಂದ್ಯದಲ್ಲಿ ಅಜೇಯ ೫೦ ರನ್‌ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡಿರುವ ಸೂರ್ಯಕುಮಾರ್‌ ಯಾದವ್ ಅವರು ಇದೊಂದೇ ಪಂದ್ಯದಲ್ಲಿ ಎರಡೆರಡು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಅವರು ಟಿ೨೦ ಮಾದರಿಯಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಸೂರ್ಯಕುಮಾರ್‌ ಅವರು ಬುಧವಾರದ ಪಂದ್ಯದಲ್ಲಿ ೩೩ ಎಸೆತಗಳಲ್ಲಿ ಅಜೇಯ ೫೦ ರನ್‌ ಬಾರಿಸಿದ್ದಾರೆ . ಈ ಮೂಲಕ ಹಾಲಿ ವರ್ಷದಲ್ಲಿ ಒಟ್ಟಾರೆ ೭೩೨ ರನ್‌ ಬಾರಿಸಿದಂತಾಗಿದೆ. ಈ ಮೂಲಕ ಇದುವರೆಗೆ ಅತಿ ಹೆಚ್ಚು ರನ್‌ ಬಾರಿಸಿದ ಖ್ಯಾತಿ ತಮ್ಮದಾಗಿಸಿಕೊಂಡರು. ಪಾಕಿಸ್ತಾನ ತಂಡದ ಬ್ಯಾಟರ್ ಮೊಹಮ್ಮದ್‌ ರಿಜ್ವಾನ್‌ ೬೧೯ ರನ್‌ ಬಾರಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ವೆಸ್ಟ್‌ ಇಂಡೀಸ್‌ನ ನಿಕೋಲಸ್‌ ಪೂರನ್‌ ೫೫೩ ರನ್‌ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಸಿಕ್ಸರ್‌ಗಳ ಸಾಧನೆ

ಸೂರ್ಯ ಕುಮಾರ್ ಅವರ ಮಾಡಿದ ಎರಡನೇ ದಾಖಲೆ ಸಿಕ್ಸರ್‌ಗಳದ್ದು. ಅವರು ಹಾಲಿ ಕ್ರಿಕೆಟ್‌ ಋತುವಿನಲ್ಲಿ ಒಟ್ಟಾರೆ ೪೫ ಸಿಕ್ಸರ್‌ಗಳನ್ನು ಎತ್ತಿದ್ದು, ಟಿ೨೦ ಮಾದರಿಯಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ್ದಾರೆ. ಮೊಹಮ್ಮದ್‌ ರಿಜ್ವಾನ್‌ ೨೦೨೧ರಲ್ಲಿ ೪೨ ಸಿಕ್ಸರ್ ಬಾರಿಸಿದ್ದರೆ, ಕೆವಿನ್‌ ಒಬ್ರಿಯಾನ್‌ ೨೦೧೯ರಲ್ಲಿ ೩೬ ಸಿಕ್ಸರ್ ಬಾರಿಸಿದ್ದಾರೆ. ೨೦೧೮ರಲ್ಲಿ ನ್ಯೂಜಿಲೆಂಡ್‌ನ ಕಾಲಿನ್ ಮನ್ರೊ ೩೫ ಸಿಕ್ಸರ್ ಬಾರಿಸಿದರೆ, ೨೦೧೨ರಲ್ಲಿ ಆಸ್ಟ್ರೇಲಿಯಾದ ಶೇನ್‌ ವಾಟ್ಸನ್‌ ೨೮ ಸಿಕ್ಸರ್‌ ಬಾರಿಸಿದ್ದರು.

ಇದನ್ನೂ ಓದಿ | ICC Ranking | ದಕ್ಷಿಣ ಆಫ್ರಿಕಾದ ಆಟಗಾರನನ್ನೂ ಓವರ್‌ಟೇಕ್‌ ಮಾಡಿದ ಸೂರ್ಯಕುಮಾರ್‌ ಯಾದವ್‌

Exit mobile version