Site icon Vistara News

IPL 2023 : ವಿರಾಟ್​ , ಗಂಭೀರ್​ ಗಲಾಟೆಯ ಬಗ್ಗೆ ಹಿರಿಯ ಕ್ರಿಕೆಟಿಗರು ಏನಂತಾರೆ?

What do the senior cricketers have to say about Virat, Gambhir's tussle?

#image_title

ಲಖನೌ: ಐಪಿಎಲ್ 16ನೇ ಆವೃತ್ತಿಯ 43ನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಆಟಗಾರ ವಿರಾಟ್​ ಕೊಹ್ಲಿ ಹಾಗೂ ಲಕ್ನೊ ತಂಡದ ಕೋಚ್​ ಗೌತಮ್ ಗಂಭೀರ್ ಜಗಳವಾಡಿಕೊಂಡಿದ್ದಾರೆ. ಈ ವಿಷಯ ಕ್ರಿಕೆಟ್​ ಕಾರಿಡಾರ್​ನಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಕೆಲವರು ಗೌತಮ್​ ಗಂಭೀರ್ ಮಾಡಿದ್ದು ಸರಿ ಎಂದರೆ ಇನ್ನೂ ಕೆಲವರು ವಿರಾಟ್ ಕೊಹ್ಲಿ ಮಾಡಿದ್ದ ಸರಿ ಎಂದು ವಾದ ಮಾಡುತ್ತಿದ್ದಾರೆ. ಘಟನೆ ಬಗ್ಗೆ ಇದೀಗ ಹಿರಿಯ ಆಟಗಾರರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಹಿರಿಯ ಆಟಗಾರರು ಏನೆಂದರು ಎಂಬುದನ್ನೂ ನೋಡೋಣ.

ಅನಿಲ್ ಕುಂಬ್ಳೆ

ಆಟದ ವೇಳೆ ಭಾವನೆಗಳು ವ್ಯಕ್ತಗೊಳ್ಳುವುದು ನಿಜ. ಆದರೆ, ಮೈದಾನದಲ್ಲಿ ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸಲು ಮುಂದಾಗಬಾರದು. ಆಟದಲ್ಲಿ ಪ್ರತಿಸ್ಪರ್ಧಿಗಳು ಮಾತ್ರ ಇರುತ್ತಾರೆ. ನಿಮಗೆ ಅವರ ಬಗ್ಗೆ ಒಲವು ಇಲ್ಲದೆ ಇರಬಹುದು. ಆದರೆ, ಗಲಾಟೆ ಮಾಡಬಾರದು. ಒಂದು ಬಾರಿ ಆಟ ಮುಗಿದ ಬಳಿಕ ಕೈ ಕುಲುಕಿ ಎಲ್ಲವನ್ನೂ ಮುಗಿಸಬೇಕು. ಎಲ್ಲರಿಗೂ ಗೌರವ ಕೊಡಲೇಬೇಕು. ಅವರು ಏನೆಂದರು ಎಂಬುದು ಗೊತ್ತಿಲ್ಲ. ಆದರೆ, ಕ್ರಿಕೆಟ್​ ಫೀಲ್ಡ್​​ನಲ್ಲಿ ಅವೆಲ್ಲವೂ ಅಗತ್ಯವಿಲ್ಲ. ಗಲಾಟೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಯಾರಿಗೂ ಅದು ಶೋಭೆ ತರುವುದಿಲ್ಲ ಎಂದು ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ರಾಬಿನ್​ ಉತ್ತಪ್ಪ

ಇಂಥ ಪ್ರಸಂಗಳನ್ನು ನೋಡುವುದೇ ಕಷ್ಟ ಹಾಗೂ ಇಂಥದ್ದು ಸಂಭವಿಸಬಾರದು. ಇಬ್ಬರೂ ಒಳ್ಳೆಯವರೇ. ಕ್ರಿಕೆಟ್​ ಬಗ್ಗೆ ಪ್ರೀತಿ ಹೊಂದಿದವರು ಹಾಗೂ ಹೃದಯವಂತರು ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿಕೆ ಕೊಟ್ಟಿದ್ದಾರೆ.

ಮುರಳಿ ಕಾರ್ತಿಕ್​

ಕಳೆದ ಹತ್ತು ವರ್ಷಗಳಿಂದ ಅವರಿಬ್ಬರ ನಡುಗೆ ಜಿದ್ದಿನ ಜ್ವಾಲೆಯಿದೆ. ಇದನ್ನು ಮುಂದುವರಿಸಲು ಬಿಡಬಾರದು. ಆದಷ್ಟು ಬೇಗ ಈ ಕೋಪವನ್ನು ತಣಿಸಬೇಕು. ಮೈದಾನದಲ್ಲಿ ಏನು ನಡೆಯಿತೋ ಅದ್ಯಾವುದೂ ಕ್ರಿಕೆಟ್​ಗೆ ಒಳಿತು ಮಾಡುವುದಿಲ್ಲ.

ಮನೋಜ್ ತಿವಾರಿ

ಇಂಥ ಪ್ರಸಂಗಗಳು ನಡೆದಾದ ಬಿಸಿಸಿಐ ಕ್ರಮ ಕೈಗೊಳ್ಳಬೇಕು. ಬಿಸಿಸಿಐ ಭಾರತೀಯ ಕ್ರಿಕೆಟ್​ನ ಅಂಬಾಸಿಡರ್ ಇದ್ದ ಹಾಗೆ. ಅತ್ಯಂತ ಶ್ರೀಮಂತ ಟೂರ್ನಿಯಾಗಿರುವ ಐಪಿಎಲ್​ ಅನ್ನು ಎಲ್ಲರೂ ಗಮನಿಸುತ್ತಿರುತ್ತಾರೆ. ವಿಶೇಷವಾಗಿ ಯುವ ಆಟಗಾರರ ಗಮನಿಸುತ್ತಾರೆ. ಹೀಗಾಗಿ ಬಿಸಿಸಿಐ ಇದಕ್ಕೆ ಸ್ಪಷ್ಟ ಉತ್ತರ ಕೊಡಬೇಕು.

ಇದನ್ನೂ ಓದಿ : IPL 2023: ಮೈದಾನದಲ್ಲಿ ಜಗಳವಾಡಿದ್ದಕ್ಕೆ ಕೊಹ್ಲಿಗೆ 1 ಕೋಟಿ, ಗಂಭೀರ್​ಗೆ 25 ಲಕ್ಷ ರೂ ದಂಡ!

ಫಾಫ್​ಡು ಪ್ಲೆಸಿಸ್​ (ಆರ್​​ಸಿಬಿ ನಾಯಕ)

ಇದು ವಿರಾಟ್​ ಕೊಹ್ಲಿಯ ಅತ್ಯುತ್ತಮ ಮಾದರಿ. ಅವರು ಸರಿಯಾದುದನ್ನೇ ಮಾಡಿದ್ದಾರೆ. ಎಲ್ಲವನ್ನೂ ತಹಬಂದಿಗೆ ತರುವುದೇ ನನ್ನ ಕೆಲಸವಾಗಿತ್ತು. ಈ ವಿಚಾರದಲ್ಲಿ ಹೇಳುವುದಾದರೆ ನಾವು ಸರಿಯಾದುದನ್ನೇ ಮಾಡಿದ್ದೇವೆ.

ಮೈಕ್​ ಹೆಸ್ಸಾನ್​ (ಆರ್​​ಸಿಬಿ ನಿರ್ದೇಶಕ)

ಬೆಂಗಳೂರಿನಲ್ಲಿ ನಾವು ಲಕ್ನೊ ವಿರುದ್ಧ ಸೋತಾಗ ಈ ಪಂದ್ಯದಲ್ಲಿ ಗೆಲ್ಲಲೇಬೇಕು ಎಂದು ಅಂದುಕೊಂಡಿದ್ಧೆವು. ಆದರೆ, ಸ್ವಲ್ಪ ಮಟ್ಟಿಗೆ ಇದು ಇನ್ನಷ್ಟು ಕಾವು ಪಡೆದುಕೊಂಡಿತು.

ಹರ್ಭಜನ್​ ಸಿಂಗ್​

2008ರಲ್ಲಿ ನಾನು ಶ್ರೀಶಾಂತ್​ ಕಪಾಳಕ್ಕೆ ಹೊಡೆದ ಘಟನೆ ನೆನಪಿಸುವಾಗ ನನಗೆ ಈಗಲೂ ನಾಚಿಕೆಯಾಗುತ್ತಿದೆ. ವಿರಾಟ್ ಕೊಹ್ಲಿ ಕ್ರಿಕೆಟ್ ಲೆಜೆಂಡ್​. ಅವರು ಇಂಥದ್ದರಲ್ಲಿ ಭಾಗಿಯಾಗಬಾರದು. ಇವೆಲ್ಲರು ಕ್ರಿಕೆಟ್​ಗೆ ಸೂಕ್ತವಾದುದದಲ್ಲ.

Exit mobile version