Site icon Vistara News

ICC World Cup 2023 : ವಿಶ್ವಕಪ್ ಲೋಗೋದಲ್ಲಿರುವ 9 ಚಿಹ್ನೆಗಳಿಗೂ ಒಂದೊಂದು ಅರ್ಥವಿದೆ

ICC World cup 2023

ಬೆಂಗಳೂರು: ಕ್ರಿಕೆಟ್ ಜಗತ್ತಿನ ಅತಿದೊಡ್ಡ ಪಂದ್ಯಾವಳಿಯಾದ ಏಕದಿನ ವಿಶ್ವಕಪ್ (ICC World Cup 2023) ಭಾರತದ ಆತಿಥ್ಯದಲ್ಲಿ ನಡೆಯುತ್ತಿದೆ. 1975 ರಲ್ಲಿ ಪ್ರಾರಂಭವಾದ ಮೆಗಾ ಈವೆಂಟ್ ಸಂಪದ್ಭರಿತ ಇತಿಹಾಸವನ್ನು ಹೊಂದಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ಟೂರ್ನಿ ಸಾಕಷ್ಟು ಮಹತ್ವ ಹೊಂದಿದೆ. ಅದೇನೆಂದರೆ 2007ರ ಬಳಿಕ ಇದೇ ಮೊದಲ ಬಾರಿಗೆ ಒಂದೇ ರಾಷ್ಟ್ರ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿದೆ. ಇದರ ಮಹತ್ವವನ್ನು ಗುರುತಿಸಲು, ಐಸಿಸಿ 2023 ರ ವಿಶ್ವಕಪ್ಗಾಗಿ ವಿಶಿಷ್ಟ ಲೋಗೋವನ್ನು ಹೊರತಂದಿದೆ. ಕ್ರಿಕೆಟ್ ಸನ್ನಿವೇಶದಲ್ಲಿ ‘ಒಂಬತ್ತು ಭಾವನೆಗಳನ್ನು’ ಚಿತ್ರಿಸಲು ಭಾರತೀಯ ರಂಗಭೂಮಿಯಲ್ಲಿ ಬಳಸುವ ‘ನವರಸ’ ಎಂಬ ಪದವನ್ನು ಐಸಿಸಿ ಬಳಸಿಕೊಂಡಿದೆ.

ಐಸಿಸಿ ವಿಶ್ವಕಪ್ 2023 ಲೋಗೋಗಾಗಿ ಬಳಸಲಾಗುವ ಈ 9 ಚಿಹ್ನೆಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ಪ್ರತಿ ಚಿಹ್ನೆಯು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಈ ಸುದ್ದಿಗಳನ್ನೂ ಓದಿ
ICC World Cup 2023 : ಚಾಂಪಿಯನ್​ ಇಂಗ್ಲೆಂಡ್ ವಿರುದ್ಧ ದ. ಆಫ್ರಿಕಾಗೆ ದಾಖಲೆಯ 229 ರನ್ ಜಯ
Ind vs NZ : ಟೀಮ್ ಇಂಡಿಯಾಗೆ ಆಘಾತ; ಸೂರ್ಯನ ಕೈಗೆ ಪೆಟ್ಟು, ಇಶಾನ್​ಗೆ ಜೇನು ಕಡಿತ
ICC World Cup 2023 : ದ. ಆಫ್ರಿಕಾ- ಇಂಗ್ಲೆಂಡ್ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವಣೆಯೇನು?

ಸಂತೋಷ

ಈ ಚಿಹ್ನೆಯು ಅಭಿಮಾನಿಗಳು ತಾವು ಹುರಿದುಂಬಿಸುವ ತಂಡ ಅಥವಾ ಅವರು ಆರಾಧಿಸುವ ಅಥವಾ ಮೆಚ್ಚುವ ಆಟಗಾರ ನಿರ್ಣಾಯಕ ಗೆಲುವನ್ನು ಪಡೆದಾಗ ಅಥವಾ ಶತಕವನ್ನು ಗಳಿಸಿದಾಗ ಅನುಭವಿಸುವ ಸಂತೋಷವನ್ನು ಪ್ರತಿನಿಧಿಸುತ್ತದೆ.

ಶಕ್ತಿ

ಈ ಚಿಹ್ನೆಯು ಆಟಗಾರನ ಶಕ್ತಿಯನ್ನು ಒತ್ತಿಹೇಳುತ್ತದೆ. ಆಟಗಾರನು ಸಿಕ್ಸರ್ ಅಥವಾ ಗರಿಷ್ಠ ಸ್ಕೋರ್​ ಹೊಡೆದಾಗಲೆಲ್ಲಾ ಪಂದ್ಯಾವಳಿಯಲ್ಲಿ ಈ ಲೋಗೋವನ್ನು ತೋರಿಸಲಾಗುತ್ತದೆ.

ಗೌರವ

ಈ ಚಿಹ್ನೆಯು ಅಭಿಮಾನಿಗಳು ಮತ್ತು ಆಟಗಾರರು ಸಹ ತಂಡಕ್ಕಾಗಿ ಮತ್ತು ಅವರು ಪ್ರತಿನಿಧಿಸುವ ರಾಷ್ಟ್ರಕ್ಕೆ ಸಲ್ಲಿಸುವ ಗೌರವವಾಗಿದೆ. ತನ್ನ ಸರ್ವಸ್ವವನ್ನೂ ನೀಡುವ ಆಟಗಾರನ ಬಗ್ಗೆ ಹೊಂದಿರುವ ಗೌರವದ ಸಾಮಾನ್ಯ ಭಾವನೆಯನ್ನು ಈ ಚಿಹ್ನೆ ಪ್ರತಿನಿಧಿಸುತ್ತದೆ.

ಹೆಮ್ಮೆ

ಹೆಮ್ಮೆಯ ಭಾವನೆ ಪ್ರತಿಯೊಬ್ಬರೂ ಅನುಭವಿಸುತ್ತಾರೆ. ಸಾಮಾನ್ಯವಾಗಿ ತಮ್ಮ ದೇಶದ ರಾಷ್ಟ್ರಗೀತೆಯ ಸಮಯದಲ್ಲಿ ಈ ಭಾವನೆಯನ್ನು ಹೊಂದುತ್ತಾರೆ.

ಶೌರ್ಯ

ದೈಹಿಕವಾಗಿ ಅಡಚಣೆಗೊಳಗಾದರೂ ತನ್ನ ತಂಡಕ್ಕಾಗಿ ಆಡುವ ಆಟಗಾರನ ಶೌರ್ಯವನ್ನು ಪ್ರತಿನಿಧಿಸಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಮುರಿದ ದವಡೆಯೊಂದಿಗೆ ಬೌಲಿಂಗ್ ಮಾಡಿದ್ದರು. ಇಂಥ ಸಂಗತಿಗಳನ್ನೂ ಈ ಚಿಹ್ನೆ ಪ್ರತಿನಿಧಿಸುತ್ತದೆ.

ವೈಭವ

ಈ ಭಾವನೆಯ ಪರಿಪೂರ್ಣ ಉದಾಹರಣೆಯೆಂದರೆ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವುದು ಮತ್ತು ಅಂತಿಮ ವೈಭವವನ್ನು ಅನುಭವಿಸುವುದು.

ಆಶ್ಚರ್ಯ

ವಿಶ್ವಕಪ್ ನಲ್ಲಿ ಸಂಭವಿಸುವ ಅದ್ಭುತ ಮತ್ತು ಅನಿರೀಕ್ಷಿತ ವಿಷಯಗಳು ಈ ಚಿಹ್ನೆಯ ಪರಿಪೂರ್ಣ ಪ್ರಾತಿನಿಧ್ಯವಾಗಿದೆ. ಅಚ್ಚರಿ ನೀಡುವ ಫಲಿತಾಂಶಗಳು, ಬೌಂಡರಿ ಸಿಕ್ಸರ್​ಗಳು, ಅನಿರೀಕ್ಷಿತ ವಿಕೆಟ್​ಗಳು ಈ ಭಾವನೆಗೆ ಪೂರಕವಾಗಿದೆ.

ಉತ್ಸಾಹ

ಈ ಚಿಹ್ನೆಯು ಕ್ರೀಡೆಯ ಪ್ರತಿಯೊಬ್ಬ ಅಭಿಮಾನಿ, ಆಟಗಾರ ಮತ್ತು ಕ್ರೀಡಾ ಪ್ರೇಮಿಯಲ್ಲಿ ಇರುತ್ತದೆ. ಕ್ರೀಡೆಯೆಂದರೆ ಉತ್ಸಾಹ. ಕ್ರಿಕೆಟ್​ನಲ್ಲೂ ಆಟಗಾರರು ಉತ್ಸಾಹದಲ್ಲಿ ಅಡುತ್ತಾರೆ. ಅಭಿಮಾನಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ದುಃಖ

ಕೊನೆಯ ಮತ್ತು ಅತ್ಯಂತ ದುರದೃಷ್ಟಕರ ಸಂಕೇತವೆಂದರೆ ದುಃಖ. ತಂಡವೊಂದು ಸೋತಾಗ ಆಟಗಾರರು ಹಾಗೂ ಆ ದೇಶದ ಅಭಿಮಾನಿಗಳು ಅನುಭವಿಸುವ ಭಾವನೆಯನ್ನು ಈ ಚಿಹ್ನೆ ಪ್ರತಿನಿಧಿಸುತ್ತದೆ.

Exit mobile version