Site icon Vistara News

ICC World Cup 2023 : ದ. ಆಫ್ರಿಕಾ ವಿರುದ್ಧ ಭಾರತದ ಭರ್ಜರಿ ಜಯದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವಣೆಯೇನು?

Mohammed siraj

ಕೋಲ್ಕೊತಾ: ವಿಶ್ವ ಕಪ್​ನಲ್ಲಿ (ICC World Cup 2023 ) ರೋಹಿತ್ ಬಳಗದ ಪಾರಮ್ಯ ಮುಂದವರಿದಿದೆ. ಐತಿಹಾಸಿಕ ಈಡನ್​ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭರ್ಜರಿ 243 ರನ್​ಗಳ ಗೆಲುವು ದಾಖಲಿಸಿದೆ. ಈ ಪಂದ್ಯದ ಫಲಿತಾಂಶದ ಬಳಿಕ ಅಂಕಪಟ್ಟಿಯಲ್ಲಿ ಯಾವುದೇ ಸ್ಥಾನ ಪಲ್ಲಟಗಳು ಆಗಿಲ್ಲ. ಭಾರತ ತಂಡ ತನ್ನ ಮೊದಲ ಸ್ಥಾನವನ್ನು ಹಾಗೆಯೇ ಕಾಪಾಡಿಕೊಂಡಿದೆ. ಆದರೆ ಬೃಹತ್ ಅಂತರದ ವಿಜಯದೊಂದಿಗೆ ಭಾರತ ತಂಡ ಅಂಕಪಟ್ಟಿಯಲ್ಲಿ ನೆಟ್​ರನ್​ರೇಟ್ ಅನ್ನು ಭರ್ಜರಿಯಾಗಿ ಏರಿಸಿಕೊಂಡಿದೆ.

ಭಾರತ ತಂಡಕ್ಕೆ ಇದು ವಿಶ್ವ ಕಪ್​ ಟೂರ್ನಿಯಲ್ಲಿ ಸತತ ಎಂಟನೇ ಗೆಲುವಾಗಿದ್ದು, ಒಟ್ಟು 16 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮುಂದುವರಿಸಿದೆ. ಅಲ್ಲದೆ, ಭಾರತವೀಗ ಗರಿಷ್ಠ +2.456 ನೆಟ್​ರನ್ ರೇನ್​ ಪಡೆದುಕೊಂಡಿದೆ. ಅತ್ತ ದಕ್ಷಿಣ ಆಫ್ರಿಕಾ ತಂಡ 12 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಅದರೆ, ಬೃಹತ್​ ಅಂತರದ ಸೋಲಿನೊಂದಿಗೆ ನೆಟ್​ರನ್​ರೇಟ್ ಕಳೆದುಕೊಂಡಿದೆ. ಪಂದ್ಯಕ್ಕೆ ಮೊದಲು +2.290 ನೆಟ್​ರನ್​ರೇಟ್​ ಹೊಂದಿದ್ದ ಹರಿಣಗಳ ಪಡೆ +1.376 ರನ್​ರೇಟ್​ಗೆ ಇಳಿದಿದೆ. ಈ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಭಾರತ ತಂಡ ಲೀಗ್ ಹಂತದ ಮುಕ್ತಾಯದ ವೇಳೆಗೆ ಅಗ್ರ ಕ್ರಮಾಂಕವನ್ನು ಕಾಪಾಡಿಕೊಳ್ಳುವುದು ಬಹುತೇಕ ನಿಶ್ಚಿತ.

ಆಸ್ಟ್ರೇಲಿಯಾ ತಂಡ 5 ಗೆಲುವುಗಳ ಸಮೇತ 10 ಅಂಕಗಳನ್ನು ಸಂಪಾದಿಸಿದೆ. +0.924 ನೆಟ್​ ರನ್​ರೇಟ್ ಸಮೇತ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್​ ತಂಡ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಅಷ್ಟೇ ಅಂಕ ಹೊಂದಿದ ಪಾಕಿಸ್ತಾನ (+0.036) ನ್ಯೂಜಿಲ್ಯಾಂಡ್​ಗಿಂತ (+0.398) ಕಡಿಮೆ ನೆಟ್​ರನ್​ರೇಟ್​ನೊಂದಿಗೆ ಐದನೇ ಸ್ಥಾನದಲ್ಲಿದೆ. ಈ ಎರಡೂ ತಂಡಕ್ಕೆ ಇನ್ನು ತಲಾ ಒಂದು ಪಂದ್ಯ ಬಾಕಿ ಇದೆ. ಏಳನೇ ಸ್ಥಾನದಲ್ಲಿರುವ ಅಫಘಾನಿಸ್ತಾನವೂ 8 ಅಂಕಗಳನ್ನು ಹೊಂದಿದೆ. ಆದರೆ, ರನ್​ರೇಟ್​ (-0.330) ಕಡಿಮೆ ಇದೆ. ಹೀಗಾಗಿ ಸೆಮೀಸ್​ ರೇಸ್​ನಲ್ಲಿ ಈ ಮೂರು ತಂಡಗಳಿವೆ.

ಈ ಸುದ್ದಿಯನ್ನೂ ಓದಿ: Virat Kohli : ವಿರಾಟ್ ಕೊಹ್ಲಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಹೇಳಿದ ಸಚಿನ್ ತೆಂಡೂಲ್ಕರ್​

ಶ್ರೀಲಂಕಾ, ನೆದರ್ಲ್ಯಾಂಡ್ಸ್​, ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್​ ಅನುಕ್ರಮವಾಗಿ ಅಂತಿಮ ನಾಲ್ಕು ಸ್ಥಾನಗಳನ್ನು ಹೊಂದಿವೆ.

ಅಂಕಪಟ್ಟಿ ಈ ರೀತಿ ಇದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ88016+2.456
ದಕ್ಷಿಣ ಆಫ್ರಿಕಾ86212+1.376
ಆಸ್ಟ್ರೇಲಿಯಾ​75210+0.924
ನ್ಯೂಜಿಲ್ಯಾಂಡ್8448+0.398
ಪಾಕಿಸ್ತಾನ8448+0.036
ಅಫಘಾನಿಸ್ತಾನ7438-0.330
ಶ್ರೀಲಂಕಾ 7254-1.162
ನೆದರ್ಲ್ಯಾಂಡ್ಸ್7254-1.398
ಬಾಂಗ್ಲಾದೇಶ​ 7162-1.446
ಇಂಗ್ಲೆಂಡ್​​​ 7162-1.504

ಆಫ್ಘನ್​-ಆಸೀಸ್ ಸೋತರಷ್ಟೇ ಅವಕಾಶ

ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಕಾರಣ ಸದ್ಯ ತಂಡದ ಅಂಕ 10ಕ್ಕೇರಿದೆ. ಅಲ್ಲದೆ ಮೂರನೇ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇನ್ನು 12 ಅಂಕ ಸಂಪಾದಿಸಲು ಅವಕಾಶವಿರುವುದು ಅಫಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ. ಆದರೆ ಇಲ್ಲಿ ಅಫಘಾನಿಸ್ತಾನ 2 ಪಂದ್ಯವನ್ನು ಗಲ್ಲಬೇಕು. ಒಂದು ಪಂದ್ಯ ಆಸೀಸ್​ ವಿರುದ್ಧವೇ ಇದೆ. ಈ ಪಂದ್ಯದಲ್ಲಿ ಆಸೀಸ್​ ಸೋಲು ಕಂಡರೂ ಅಂತಿಮ ಪಂದ್ಯದಲ್ಲಿ ಗೆಲುವು ಕಂಡರೆ ಆಸೀಸ್​ಗೂ 12 ಅಂಕ ಆಗಲಿದೆ. ಆಗ ಆಫ್ಘನ್​ ಮತ್ತು ಆಸೀಸ್​ ಸೆಮಿಫೈನಲ್​ ಪ್ರವೇಶ ಪಡೆಯಲಿದೆ. ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಒಟ್ಟಾರೆ ಆಸೀಸ್​ ಮತ್ತು ಆಫ್ಘನ್​ ತಂಡದ ಗೆಲುವಿನ ಫಲಿತಾಂಶದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ತಂಡ ಸೆಮಿ ಭವಿಷ್ಯ ಅಡಗಿದೆ.

Exit mobile version