Site icon Vistara News

IPL 2024 : ಸೋಲಿನ ಬಳಿಕ ಚೆನ್ನೈ ತಂಡದ ಅಂಕಪಟ್ಟಿಯಲ್ಲಿನ ಸ್ಥಾನವೆಷ್ಟು? ಇಲ್ಲಿದೆ ಎಲ್ಲ ವಿವರ

IPL 2024

ಲಖನೌ: ಶುಕ್ರವಾರ ಇಲ್ಲಿ ನಡೆದ ನಡೆದ ಐಪಿಎಲ್​ 2024ರ (IPL 2024) ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಪಡೆದಿದೆ. ಈ ಪಂದ್ಯದ ಬಳಿಕವೂ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಯಾಕೆಂದರೆ ಎರಡೂ ತಂಡಗಳು ಇದೀಗ ನಾಲ್ಕು ಗೆಲುವುಗಳ ಮೂಲಕ 8 ಅಂಕಗಳನ್ನು ಪಡೆದುಕೊಂಡಿದೆ. ಆದರೆ ಚೆನ್ನೈ ತಂಡ ಉತ್ತಮ ರನ್​ರೇಟ್ ಹೊಂದಿರುವ ಕಾರಣ ಮೂರನೇ ಸ್ಥಾನದಲ್ಲಿದೆ. ಗೆದ್ದ ಲಕ್ನೊ ತಂಡದ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಕೆಕೆಆರ್​​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​7438 (+0.529)
ಹೈದರಾಬಾದ್​​6428(+0.502)
ಲಕ್ನೋ7488 (+0.123)
ಡೆಲ್ಲಿ ಕ್ಯಾಪಿಟಲ್ಸ್​​7346 (-0.074)
ಮುಂಬೈ​7346 (-0.133)
ಗುಜರಾತ್7346 (-1.303)
ಪಂಜಾಬ್​7254 (-0.251)
ಆರ್​ಸಿಬಿ7162 (-1.185)

ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್​ ಅಮೋಘ 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೆಕೆಆರ್​ ತಂಡ 8 ಅಂಕಗಳೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಮೂಲದ ಆರ್​ಸಿಬಿ ಇನ್ನೂ ಉದ್ಧಾರವಾಗಿಲ್ಲ. ಕೊನೇ ಸ್ಥಾನದಲ್ಲಿಯೇ ಇದೆ.

ಲಕ್ನೊ ತಂಡಕ್ಕೆ ಭರ್ಜರಿ ಜಯ

ಲಖನೌ: ಕೆ. ಎಲ್​. ರಾಹುಲ್​ (82 ರನ್​, 53 ಎಸೆತ, 9 ಫೋರ್, 3 ಸಿಕ್ಸರ್​) ಹಾಗೂ ಕ್ವಿಂಟನ್ ಡಿ ಕಾಕ್​ (54 ರನ್​, 43 ಎಸೆತ, 5 ಫೋರ್​, 1 ಸಿಕ್ಸರ್​) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ 2024ನೇ (IPL 2024) ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡು ಸೋಲುಗಳ ಬಳಿಕ ಗೆಲವಿನ ಟ್ರ್ಯಾಕ್​ಗೆ ಮರಳಿದೆ. ಲಕ್ನೊ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಅತ್ತ ಚೆನ್ನೈ ತಂಡ ಆಡಿರುವ ಏಳರಲ್ಲಿ ಮೂರನೇ ಸೋಲಿಗೆ ಒಳಗಾಯಿತು.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ : Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಹಾಗೂ ಕೆ. ಎಲ್​ ರಾಹುಲ್ ಉತ್ತಮವಾಗಿ ಆಡಿದರು. ಈ ಜೋಡಿ ಮೊದಲ ವಿಕೆಟ್​ಗೆ 134 ರನ್ ಬಾರಿಸಿತು. ಅಷ್ಟರಲ್ಲಿ ಅವರಿಬ್ಬರೂ ಅರ್ಧ ಶತಕಗಳನ್ನು ದಾಖಲಿಸಿದ್ದರು. ನಿಧಾನಗತಿಯ ಪಿಚ್​ನಲ್ಲಿ ಲಕ್ನೊ ಆಟಗಾರರು ಇನಿಂಗ್ಸ್​ ಕಟ್ಟಿದರು. ಸ್ಟ್ರೈಕ್​ ರೇಟ್ ಕಡಿಮೆ ಇದ್ದ ಹೊರತಾಗಿಯೂ ಗೆಲುವಿನಗೆ ಪೂರಕವಾದ ರನ್​ಗಳನ್ನು ಬಾರಿಸಿದರು. ಕ್ವಿಂಟನ್​ ಚೆನ್ನೈ ಬೌಲರ್​ ಮುಸ್ತಾಫಿಜುರ್ ಎಸೆತಕ್ಕೆ ಔಟಾದರೆ, ರಾಹುಲ್ ಪತಿರಾಣಾಗೆ ವಿಕೆಟ್​ ಒಪ್ಪಿಸಿದರು. ನಿಕೋಲಸ್ ಪೂರನ್ 23 ರನ್ ಸೇರಿಸಿದರು.

ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಜಿಂಕ್ಯ ರಹಾನೆ 36 ರನ್ ಬಾರಿಸಿದ ಹೊರತಾಗಿಯೂ ರಚಿನ್ ರವಿಂದ್ರ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಋತುರಾಜ್​ 17 ರನ್​ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರವಿಂದ್ರ ಜಡೇಜಾ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಅವರು 40 ಎಸೆತ ಬಳಸಿಕೊಂಡು 57 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಚೆನ್ನೈತಂಡದ ಆಪತ್ಬಾಂಧವ ಶಿವಂ ದುಬೆ 3 ರನ್​ಗೆ ಸೀಮಿತಗೊಂಡರೆ ರಿಜ್ವಿ ಕೇವಲ 1 ರನ್​ಗೆ ಔಟಾದರು. 90 ರನ್​ಗೆ 5 ವಿಕೆಟ್​ ಕಳೆದುಕೊಂಡ ಚೆನ್ನೈಗೆ ಕೊನೆಯಲ್ಲಿ ಮೊಯಿನ್ ಅಲಿ 30 ರನ್​ ಹಾಗೂ ಮಹೇಂದ್ರ ಸಿಂಗ್ ಧೋನಿ 28 ರನ್ ಬಾರಿಸಿದರು.

Exit mobile version