ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ(anushka sharma) ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಸ್ವತಃ ಈ ವಿಚಾರವನ್ನು ಕೊಹ್ಲಿಯೇ ಅನೇಕ ಬಾರಿ ಹೇಳಿದ್ದಾರೆ. ಇತ್ತೀಚಿಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಯ(Virat Kohli-Anushka) ಹೆಸರನ್ನು ತಮ್ಮ ಮೊಬೈಲ್ನಲ್ಲಿ ಯಾವ ಹೆಸರಿನಿಂದ ಸೇವ್ ಮಾಡಿದ್ದಾರೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅನುಷ್ಕಾ ಅವರಿಗೆ ನಿಮ್ಮ ಮೊಬೈಲ್ನಲ್ಲಿ ಪತಿ ವಿರಾಟ್ ಕೊಹ್ಲಿಯ ಹೆಸರನ್ನು ಹೇಗೆ ಸೇವ್ ಮಾಡಿದ್ದೀರಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅನುಷ್ಕಾ ಅವರು ವಿರಾಟ್ ಹೆಸರನ್ನು ‘ಪತಿ ಪರಮೇಶ್ವರ್’ (Pati Parmeshwar) ಎಂದು ಸೇವ್ ಮಾಡಿಕೊಂಡಿರುವುದಾಗಿ ಹೇಳಿ ಜೋರಾಗಿ ನಕ್ಕರು. ಬಳಿಕ ಒಜಿ..ಓಜಿ ಎಂದು ಹೇಳಿದ್ದಾರೆ. ಈ ವಿಡಿಯೊ ಕಂಡ ಅನೇಕ ನೆಟ್ಟಿಗರು ಮುದ್ದಾದ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ.
Fun moments between Virat Kohli and Anushka Sharma.
— Mufaddal Vohra (@mufaddal_vohra) May 27, 2023
Anushka imitating Virat's celebration was the best! pic.twitter.com/e3ono4oXlG
ಪತ್ನಿಯೇ ನನ್ನ ಸ್ಫೂರ್ತಿ
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.
“ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ನಿಮ್ಮೊಳಗೆ ಆ ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ಅವಳ ಜೀವನದ ದೃಷ್ಟಿಕೋನವು ವಿಭಿನ್ನವಾಗಿತ್ತು ಮತ್ತು ಅದು ನನ್ನನ್ನು ಉತ್ತಮವಾಗಿ ಬದಲಾಯಿಸಲು ಮತ್ತು ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಎನಿಸಿಬಿಡುತ್ತದೆ” ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು.