ಬೆಂಗಳೂರು: ವಿಶ್ವ ಕಪ್ನ 20ನೇ ಪಂದ್ಯದಲ್ಲಿ (ICC World Cup 2023) ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 229 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ದಿನದ ಮೊದಲ ಪಂದ್ಯದಲ್ಲೂ ಶ್ರೀಲಂಕಾ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಜಯ ಗಳಿಸಿದೆ. ಈ ಫಲಿತಾಂಶಗಳ ಬಳಿಕ ಅಂಕಪಟ್ಟಿಯಲ್ಲಿ ಬದಲಾವಣೆಗಳಾಗಿವೆ. ಆದರೆ, ಮೊದಲೆರಡು ಸ್ಥಾನಕ್ಕೆ ಯಾವುದೇ ಕುತ್ತು ಬಂದಿಲ್ಲ. ಆದರೆ, 19ನೇ ಹಾಗೂ 20ನೇ ಪಂದ್ಯಗಳನ್ನಾಡಿದ ತಂಡಗಳ ಸ್ಥಾನಪಲ್ಲಟಗೊಂಡಿವೆ.
ಆಡಿರುವ ನಾಲ್ಕರಲ್ಲಿ 4 ಪಂದ್ಯಗಳನ್ನೂ ಗೆದ್ದಿರುವ ನ್ಯೂಜಿಲ್ಯಾಂಡ್ ಹಾಗೂ ಭಾರತ ತಂಡ ಅನುಕ್ರಮವಾಗಿ ಮೊದಲೆರಡು ಸ್ಥಾನವನ್ನು ಪಡೆದುಕೊಂಡಿದೆ. ಇಂಗ್ಲೆಂಡ್ ತಂಡವನ್ನು ಭರ್ಜರಿಯಾಗಿ ಸೋಲಿಸಿದ ದಕ್ಷಿಣ ಆಫ್ರಿಕಾ ತಂಡ ನಾಲ್ಕರಲ್ಲಿ ಒಂದು ಪಂದ್ಯವನ್ನು ಸೋತಿರುವ ಕಾರಣ 6 ಅಂಕಗಳನ್ನು ಮಾತ್ರ ಗಳಿಸಿದೆ. ಹೀಗಾಗಿ ಅದು ಮೂರನೇ ಸ್ಥಾನದಲ್ಲಿದೆ. ಪಂದ್ಯಕ್ಕೆ ಮೊದಲೂ ತೆಂಬಾ ಬವುಮಾ ತಂಡ ಅದೇ ಸ್ಥಾನದಲ್ಲಿತ್ತು. ಆದರೆ, ಗೆಲುವಿನ ಅಂತದ ದೊಡ್ಡದಿದ್ದ ಕಾರಣ ನೆಟ್ರನ್ರೇಟ್ನಲ್ಲಿ ದೊಡ್ಡ ಮಟ್ಟದ ಸಂಪಾದನೆ ಮಾಡಿದೆ. ಈಗ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ ಎಲ್ಲ ತಂಡಗಳಿಗಿಂತ ಗರಿಷ್ಠ 2.212 ನೆಟ್ರನ್ ರೇಟ್ ಹೊಂದಿದೆ.
South Africa get back to winning ways in style 🪄
— ICC (@ICC) October 21, 2023
Details 👇#CWC23 | #ENGvSAhttps://t.co/gAzjB07KyI
ಇನ್ನು ಹೀನಾಯವಾಗಿ ಸೋತಿರುವ ಇಂಗ್ಲೆಂಡ್ ತಂಡ 6ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದಿದಿದೆ. ಈ ತಂಡ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೆದರ್ಲಾಂಡ್ಸ್ ತಂಡಕ್ಕಿಂತಲೂ ಕೆಳಗಿದೆ. ಇಂಗ್ಲೆಂಡ್ ಈಗ ಆಡಿರುವ ನಾಲ್ಕು ಪಂದ್ಯಗಳಲ್ಲಿ ಏಕೈಕ ವಿಜಯ ಸಾಧಿಸಿದೆ. ಕೇವಲ 2 ಅಂಕ ಹಾಗೂ 2.212 ನೆಟ್ ರನ್ರೇಟ್ ಹೊಂದಿದೆ.
ಈ ಸುದ್ದಿಗಳನ್ನೂ ಓದಿ
Ind vs NZ : ಟೀಮ್ ಇಂಡಿಯಾಗೆ ಆಘಾತ; ಸೂರ್ಯನ ಕೈಗೆ ಪೆಟ್ಟು, ಇಶಾನ್ಗೆ ಜೇನು ಕಡಿತ
ಪಾಕಿಸ್ತಾನದ ಅಭಿಮಾನಿಗಳ ಮುಂದೆ ಭಾರತ ಮಾತೆಗೆ ಜೈ ಎಂದು ಸೆಡ್ಡು ಹೊಡೆದ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಮಿ
Ind vs NZ : ಅಂಕಪಟ್ಟಿಯ ಅಗ್ರಸ್ಥಾನಿಗಳ ಕಾಳಗದಲ್ಲಿ ಗೆಲುವು ಯಾರಿಗೆ?
19ನೇ ಪಂದ್ಯದಲ್ಲಿ ಗೆದ್ದಿರುವ ಲಂಕಾ ಬಳಗ ಎರಡು ಸ್ಥಾನ ಮೇಲಕ್ಕೇರಿದೆ. ಪಂದ್ಯಕ್ಕೆ ಮೊದಲು ಅದು 10ನೇ ಸ್ಥಾನದಲ್ಲಿತ್ತು. ಈಗ ಲಂಕಾ ಬಳಗ ಆಡಿರುವ 4ರಲ್ಲಿ ಒಂದು ವಿಜಯ ಸಾಧಿಸಿದ್ದು 2 ಅಂಕಗಳು ಹಾಗೂ -1.048 ನೆಟ್ರನ್ರೇಟ್ ಪಡೆದುಕೊಂಡಿದೆ. ಏರುವಿಕೆ ಪ್ರಕ್ರಿಯೆಯಲ್ಲಿ ಈ ತಂಡ ಇಂಗ್ಲೆಂಡ್ ಹಾಗೂ ಅಫಘಾನಿಸ್ತಾನ ತಂಡವನ್ನು ಕೆಳಕ್ಕೆ ತಳ್ಳಿದೆ. ಇನ್ನು ಲಂಕಾ ವಿರುದ್ಧ ಸೋತಿರುವ ಹೊರತಾಗಿಯೂ ನೆದರ್ಲ್ಯಾಂಡ್ಸ್ ತಂಡ ಆರನೇ ಸ್ಥಾನಕ್ಕೆ ಏರಿದೆ. ಪಂದ್ಯಕ್ಕೆ ಮೊದಲು ಅದು ಏಳರಲ್ಲಿತ್ತು. ಆದರೆ, ಉಳಿದ ತಂಡಗಳ ಕಳಪೆ ಪ್ರದರ್ಶನ ಡಚ್ಚರ ಪ್ರಗತಿಗೆ ಕಾರಣವಾಯಿತು.
ಅಂಕಪಟ್ಟಿ ಈ ರೀತಿ ಇದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ನ್ಯೂಜಿಲ್ಯಾಂಡ್ | 4 | 4 | 0 | 8 | 1.923 |
ಭಾರತ | 4 | 4 | 0 | 8 | 1.659 |
ದಕ್ಷಿಣ ಆಫ್ರಿಕಾ | 4 | 3 | 1 | 6 | 2.212 |
ಆಸ್ಟ್ರೇಲಿಯಾ | 4 | 2 | 2 | 4 | -0.193 |
ಪಾಕಿಸ್ತಾನ | 4 | 2 | 2 | 4 | -0.456 |
ಬಾಂಗ್ಲಾದೇಶ | 4 | 1 | 3 | 2 | -0.784 |
ನೆದರ್ಲ್ಯಾಂಡ್ಸ್ | 4 | 1 | 3 | 2 | -0.790 |
ಶ್ರೀಲಂಕಾ | 4 | 1 | 3 | 2 | -1.048 |
ಇಂಗ್ಲೆಂಡ್ | 4 | 1 | 3 | 2 | -1.248 |
ಅಫಘಾನಿಸ್ತಾನ | 4 | 1 | 3 | 2 | -1.250 |
ಭಾನುವಾರ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಧರ್ಮಶಾಲಾದಲ್ಲಿ ಪಂದ್ಯದ ನಡೆಯಲಿವೆ. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮೇಲಿನೆರಡು ಸ್ಥಾನಗಳು ಮಾತ್ರ ಬದಲಾವಣೆಯಾಗಬಹುದು. ಎರಡೂ ತಂಡಗಳು ಉಳಿದೆಲ್ಲ ತಂಡಗಳಿಗಿಂತ ಹೆಚ್ಚು (8) ಅಂಕ ಪಡೆದುಕೊಂಡಿದೆ. ಹೀಗಾಗಿ ಮೊದಲೆರಡು ಸ್ಥಾನಕ್ಕೆ ಪೈಪೋಟಿ ನಡೆಯಲಿವೆ.