Site icon Vistara News

ICC World Cup 2023 : ಬಾಂಗ್ಲಾ ವಿರುದ್ಧ ಗೆದ್ದ ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ? ಸೆಮೀಸ್ ಚಾನ್ಸ್ ಉಂಟಾ?

Babar azam

ಬೆಂಗಳೂರು: ಹಾಲಿ ವಿಶ್ವ ಕಪ್​ನ 31ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಅಮೋಘ7 ವಿಕೆಟ್ ವಿಜಯ ಸಾಧಿಸಿದೆ. ಇದರೊಂದಿಗೆ ವಿಶ್ವ ಕಪ್​ನ ಅಂಕಪಟ್ಟಿಯಲ್ಲಿ ಸಣ್ಣ ಮಾರ್ಪಾಟುಗಳಾಗಿವೆ. ಪ್ರಮುಖವಾಗಿ ಗೆದ್ದಿರುವ ಪಾಕಿಸ್ತಾನ ತಂಡ ಮತ್ತೆ ಐದನೇ ಸ್ಥಾನಕ್ಕೆ ಬಂದು ನಿಂತಿದ್ದು ಮುಂದಿನ ಎರಡು ಪಂದ್ಯಗಳನ್ನು ಗೆದ್ದು, ಬೇರೆ ತಂಡದ ಫಲಿತಾಂಶದ ಆಧಾರದಲ್ಲಿ ಸೆಮೀಸ್​ಗೆ ಪ್ರವೇಶ ಪಡೆಯುವ ಅವಕಾಶಗಳನ್ನು ಸೃಷ್ಟಿಸಿಕೊಂಡಿದೆ. ಪಾಕಿಸ್ತಾನ ತಂಡಕ್ಕೆ ಇದು ಏಳನೇ ಪಂದ್ಯವಾಗಿತ್ತು. ಈ ಗೆಲುವಿನೊಂದಿಗೆ ಪಾಕ್​ ತಂಡ ಒಟ್ಟಾರೆ ಗೆಲುವಿನ ಸಂಖ್ಯೆ 3ಕ್ಕೇರಿದೆ. ಸತತ ನಾಲ್ಕು ಸೋಲುಗಳ ಬಳಿಕ ಸಿಕ್ಕಿದ ವಿಜಯ ಇದಾಗಿದೆ.

ಪಾಕಿಸ್ತಾನ ತಂಡ ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಗೆಲುವು ಕಂಡಿತ್ತು. ನೆದರ್ಲ್ಯಾಂಡ್ಸ್ ಹಾಗೂ ಶ್ರೀಲಂಕಾ ವಿರುದ್ದ ಸೋತಿದೆ. ಹೀಗಾಗಿ ಒಟ್ಟು ಆರು ಅಂಕಗಳನ್ನು ಗಳಿಸಿಕೊಂಡಿದೆ. ಪಾಕಿಸ್ತಾನ ತಂಡದ ನೆಟ್​​ ರನ್​ರೇಟ್​ (0.024) ಮೂರು ಪಂದ್ಯಗಳನ್ನು ಗೆದ್ದಿರುವ ಅಫಘಾನಿಸ್ತಾನ ತಂಡಕ್ಕಿಂತ ಹೆಚ್ಚಿರುವ ಕಾರಣ ಐದನೇ ಸ್ಥಾನ ಪಡೆದುಕೊಂಡಿದೆ. 30ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿದ್ದ ಆಫ್ಘನ್ ಪಾಕಿಸ್ತಾನ ತಂಡವನ್ನು ಹಿಂದಕ್ಕೆ ತಳ್ಳಿತ್ತು. ಇದೀಗ ಮತ್ತೆ ಪಾಕ್​ ಮೇಲೆದ್ದಿದೆ. ಆದರೆ, ಪಾಕ್​ (7ಪಂದ್ಯ) ಅಫಘಾನಿಸ್ತಾನ ತಂಡಕ್ಕಿಂತ ಒಂದು ಹೆಚ್ಚು ಪಂದ್ಯವನ್ನು ಆಡಿದೆ.

ಪಾಕ್​ ವಿರುದ್ಧ ಸೋತ ಬಾಂಗ್ಲಾದೇಶ ತಂಡ ವಿಶ್ವ ಕಪ್​ನ ಪ್ಲೇಆಫ್​ ರೇಸ್​ನಿಂದ ಹೊರಕ್ಕೆ ಬಿದ್ದಿದೆ. ಆ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಒಂದು ವಿಜಯ ಕಂಡಿದೆ. ತಂಡದ ಖಾತೆಯಲ್ಲಿ ಎರಡು ಅಂಕ ಮಾತ್ರ ಇದೆ. ಇನ್ನು ಎರಡು ಪಂದ್ಯಗಳು ಮಾತ್ರ ಆಡಲು ಬಾಕಿ ಉಳಿದಿವೆ. ಹೀಗಾಗಿ ಸೆಮೀಸ್ ಪ್ರವೇಶ ಅಸಾಧ್ಯ.

ಈ ಸುದ್ದಿಯನ್ನೂ ಓದಿ : ICC World Cup 2023 : ಕೊನೆಗೂ ಗೆದ್ದ ಪಾಕಿಸ್ತಾನ, ಬಾಂಗ್ಲಾ ತಂಡಕ್ಕೆ ಆರನೇ ಸೋಲು

ಭಾರತಕ್ಕೆ ಮೊದಲ ಸ್ಥಾನ

ಸದ್ಯ ಭಾರತ 6 ಪಂದ್ಯಗಳಲ್ಲಿ 6ನ್ನೂ ಗೆದ್ದು +1.405 ರನ್​ ರೇಟ್​ನೊಂದಿಗೆ ಮೊದಲ ಸ್ಥಾನ ಪಡೆದಿದೆ. ಭಾರತ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ನವೆಂಬರ್​ 2ರಂದು ಆಡಲಿದೆ. ಈ ಪಂದ್ಯವನ್ನೂ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ವಿಶ್ವ ಕಪ್ ಅಂಕಪಟ್ಟಿ ಈ ರೀತಿ ಇದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ66012+1.405
ದಕ್ಷಿಣ ಆಫ್ರಿಕಾ65110+2.032
ನ್ಯೂಜಿಲ್ಯಾಂಡ್​6428+1.232
ಆಸ್ಟ್ರೇಲಿಯಾ6428+0.970
ಪಾಕಿಸ್ತಾನ7346-0.024
ಅಫಘಾನಿಸ್ತಾನ6336-0.718
ಶ್ರೀಲಂಕಾ 6244-0.275
ನೆದರ್ಲ್ಯಾಂಡ್ಸ್6244-1.277
ಬಾಂಗ್ಲಾದೇಶ​ 6152-1.338
ಇಂಗ್ಲೆಂಡ್​​​ 6152-1.652

ಭಾರತದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಮತ್ತೆ ನಂ.1ಸ್ಥಾನಕ್ಕೇರಲಿದೆ. ಆಗ ಭಾರತ ದ್ವಿತೀಯ ಸ್ಥಾನಕ್ಕೆ ಜಾರಲಿದೆ. ದಕ್ಷಿಣ ಆಫ್ರಿಕಾ, ಭಾರತಕ್ಕಿಂತ ಒಂದು ಪಂದ್ಯ ಕಡಿಮೆ ಗೆದ್ದಿದ್ದರೂ ರನ್​ ರೇಟ್​ ಉತ್ತಮವಾಗಿರುವುದರಿಂದ ಈ ಲಾಭ ಪಡೆಯಲಿದೆ. ಕಿವೀಸ್​ ಗೆದ್ದರೆ ಭಾರತದ ಅಗ್ರಸ್ಥಾನ ಭದ್ರವಾಗಲಿದೆ. ಉತ್ತಮ ರನ್​ ರೇಟ್​ ಹೊಂದಿದ್ದರೆ ಕಿವೀಸ್ ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೂ ಏರಬಹುದು. 6ರಲ್ಲಿ 4 ಪಂದ್ಯ ಗೆದ್ದ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ.

ಅಫಾನಿಸ್ತಾನ ತಂಡ ಆರನೇ ಸ್ಥಾನದಲ್ಲಿದ್ದರೆ ಶ್ರೀಲಂಕಾ ಏಳನೇ ಸ್ಥಾನ ಹೊಂದಿದೆ. ನೆದರ್ಲ್ಯಾಂಡ್ಸ್ ಎಂಟು ಹಾಗೂ ಬಾಂಗ್ಲಾ ತಂಡಕ್ಕೆ 9ನೇ ಸ್ಥಾನ. ಇಂಗ್ಲೆಂಡ್ ಕೊನೇ ಸ್ಥಾನದಲ್ಲಿದೆ.

Exit mobile version