Site icon Vistara News

ಅಫಘಾನಿಸ್ತಾನ​ ವಿರುದ್ಧ ಸೋತು ಸುಣ್ಣವಾದ ಪಾಕ್ ತಂಡಕ್ಕೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

Afghanistan cricket team

ಬೆಂಗಳೂರು: ವಿಶ್ವ ಕಪ್​ನ 22ನೇ ಪಂದ್ಯ (ICC World Cup 2023) ಮುಕ್ತಾಯಗೊಂಡಿದೆ. ಅಚ್ಚರಿ ಎಂಬಂತೆ ಎರಡು ತಿಂಗಳ ಮೊದಲು ಐಸಿಸಿ ರ್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಪಾಕಿಸ್ತಾನ ತಂಡವನ್ನು ದುರ್ಬಲ ಅಫಘಾನಿಸ್ತಾನ ತಂಡ ಸೋಲಿಸಿದೆ. ಇದು ಹಾಲಿ ವಿಶ್ವ ಕಪ್​ನ ಮತ್ತೊಂದು ಆಘಾತಕಾರಿ ಫಲಿತಾಂಶ. ಆದರೆ, ಅಫಘಾನಿಸ್ತಾನ ತಂಡದ ಆಟವನ್ನು ವಿಶ್ಲೇಷಿಸಿದರೆ ಇದು ಅಫಘಾನಿಸ್ತಾನ ಬಳಗಕ್ಕೆ ಅರ್ಹ ಗೆಲುವು. ಅಂದ ಹಾಗೆ ಇದು ಅಫಘಾನಿಸ್ತಾನ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಎರಡನೇ ವಿಜಯ. ಪಾಕ್​ ತಂಡಕ್ಕೆ ಹ್ಯಾಟ್ರಿಕ್ ಸೋಲು. ಭಾರತ ವಿರುದ್ಧ ಮಣಿದಿದ್ದ ಪಾಕ್​ ಬಳಿಕ ಕಾಂಗರೂ ಪಡೆಯ ವಿರುದ್ದ ಮಂಡಿಯೂರಿತ್ತು. ಈಗ ನೆರೆಯ ಅಫಘಾನಿಸ್ತಾನ ತಂಡಕ್ಕೆ ಶರಣಾಗಿದೆ. ಈ ಸೋಲಿನ ಬಳಿಕ ವಿಶ್ವ ಕಪ್​ ಅಂಕಪಟ್ಟಿಯಲ್ಲಿ ಏನು ಬದಲಾವಣೆಯಾಗಿದೆ ಹಾಗೂ ಪಾಕಿಸ್ತಾನದ ಸ್ಥಾನವೇನು ಎಂಬುದನ್ನು ನೋಡೋಣ.

22ನೇ ಪಂದ್ಯದ ಬಳಿಕ ಅಂಕಟ್ಟಿಯಲ್ಲಿ ಏನೂ ಬದಲಾವಣೆ ಆಗಿಲ್ಲ. ಪಂದ್ಯಕ್ಕೆ ಮೊದಲು ಐದು ಮತ್ತು ಆರನೇ ಸ್ಥಾನದಲ್ಲಿದ್ದ ಪಾಕಿಸ್ತಾನ ಮತ್ತು ಅಫಘಾನಿಸ್ತಾನ ತಂಡ ಅದೇ ಕ್ರಮಾಂಕ ಹೊಂದಿದೆ. ಇತ್ತಂಡಗಳು ತಲಾ ಐದು ಪಂದ್ಯಗಳನ್ನು ಆಡಿದ್ದು ತಲಾ ಎರಡು ಜಯ ಹಾಗೂ ಮೂರು ಸೋಲು ಕಂಡಿದೆ. ಎರಡೂ ತಂಡಗಳಿಗೆ ನಾಲ್ಕು ಅಂಕಗಳು ಲಭಿಸಿವೆ. ಆದರೆ, ಪಾಕಿಸ್ತಾನ ತಂಡ (-0.400) ನೆಟ್​ರನ್​ರೇಟ್ ವಿಚಾರದಲ್ಲಿ ಅಫಘಾನಿಸ್ತಾನಕ್ಕಿಂತ (-0.969) ಮುಂದಿರುವ ಕಾರಣ ತನ್ನ ಸ್ಥಾನ ಕಳೆದುಕೊಂಡಿಲ್ಲ. ಉಳಿಂ

ಪಟ್ಟಿಯಲ್ಲಿ ಐದರಲ್ಲಿ ಐದನ್ನೂ ಗೆದ್ದಿರುವ ಟೀಮ್ ಇಂಡಿಯಾ ಒಟ್ಟು 10 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ನ್ಯೂಜಿಲ್ಯಾಂಡ್​ ತಂಡ ಆಡಿರುವ 5ರಲ್ಲಿ ಒಂದು ಸೋಲು, ನಾಲ್ಕು ಗೆಲುವಿನೊಂದಿಗೆ 8 ಅಂಕಪಡೆದು ಎರಡನೇ ಸ್ಥಾನದಲ್ಲಿದೆ. ಆದರೆ ನ್ಯೂಜಿಲ್ಯಾಂಡ್​ (1.481) ತಂಡದ ನೆಟ್​ ರನ್​ರೇಟ್​ ಭಾರತಕ್ಕಿಂತ (1.353) ಹೆಚ್ಚಿದೆ.

20ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭರ್ಜರಿಯಾಗಿ ಸೋಲಿಸಿದ ದಕ್ಷಿಣ ಆಫ್ರಿಕಾ ತಂಡ ನಾಲ್ಕರಲ್ಲಿ ಒಂದು ಪಂದ್ಯವನ್ನು ಸೋತಿರುವ ಕಾರಣ 6 ಅಂಕಗಳನ್ನು ಮಾತ್ರ ಗಳಿಸಿದೆ. ಹೀಗಾಗಿ ಅದು ಮೂರನೇ ಸ್ಥಾನದಲ್ಲಿದೆ. ಪಂದ್ಯಕ್ಕೆ ಮೊದಲೂ ತೆಂಬಾ ಬವುಮಾ ತಂಡ ಅದೇ ಸ್ಥಾನದಲ್ಲಿತ್ತು. ಆದರೆ, ಗೆಲುವಿನ ಅಂತದ ದೊಡ್ಡದಿದ್ದ ಕಾರಣ ನೆಟ್​ರನ್​ರೇಟ್​ನಲ್ಲಿ ದೊಡ್ಡ ಮಟ್ಟದ ಸಂಪಾದನೆ ಮಾಡಿದೆ. ಈಗ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ ಎಲ್ಲ ತಂಡಗಳಿಗಿಂತ ಗರಿಷ್ಠ 2.212 ನೆಟ್​ರನ್​ ರೇಟ್​ ಹೊಂದಿದೆ.

ಇದನ್ನೂ ಓದಿ : ICC World Cup 2023 : ಪಾಕಿಸ್ತಾನದ ಬುರುಡೆ ಮೇಲೆ ಗೆಲುವಿನ ಆಮ್ಲೇಟ್ ಬೇಯಿಸಿದ ಆಫ್ಘನ್!

ಇನ್ನು ಹೀನಾಯವಾಗಿ ಸೋತಿರುವ ಇಂಗ್ಲೆಂಡ್​ ತಂಡ 6ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದಿದಿದೆ. ಈ ತಂಡ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೆದರ್ಲಾಂಡ್ಸ್​ ತಂಡಕ್ಕಿಂತಲೂ ಕೆಳಗಿದೆ. ಇಂಗ್ಲೆಂಡ್ ಈಗ ಆಡಿರುವ ನಾಲ್ಕು ಪಂದ್ಯಗಳಲ್ಲಿ ಏಕೈಕ ವಿಜಯ ಸಾಧಿಸಿದೆ. ಕೇವಲ 2 ಅಂಕ ಹಾಗೂ 2.212 ನೆಟ್​ ರನ್​ರೇಟ್​ ಹೊಂದಿದೆ.

19ನೇ ಪಂದ್ಯದಲ್ಲಿ ಗೆದ್ದಿರುವ ಲಂಕಾ ಬಳಗ ಎರಡು ಸ್ಥಾನ ಮೇಲಕ್ಕೇರಿದೆ. ಪಂದ್ಯಕ್ಕೆ ಮೊದಲು ಅದು 10ನೇ ಸ್ಥಾನದಲ್ಲಿತ್ತು. ಈಗ ಲಂಕಾ ಬಳಗ ಆಡಿರುವ 4ರಲ್ಲಿ ಒಂದು ವಿಜಯ ಸಾಧಿಸಿದ್ದು 2 ಅಂಕಗಳು ಹಾಗೂ -1.048 ನೆಟ್​ರನ್​ರೇಟ್​ ಪಡೆದುಕೊಂಡಿದೆ. ಏರುವಿಕೆ ಪ್ರಕ್ರಿಯೆಯಲ್ಲಿ ಈ ತಂಡ ಇಂಗ್ಲೆಂಡ್​ ಹಾಗೂ ಅಫಘಾನಿಸ್ತಾನ ತಂಡವನ್ನು ಕೆಳಕ್ಕೆ ತಳ್ಳಿದೆ. ಇನ್ನು ಲಂಕಾ ವಿರುದ್ಧ ಸೋತಿರುವ ಹೊರತಾಗಿಯೂ ನೆದರ್ಲ್ಯಾಂಡ್ಸ್​ ತಂಡ ಆರನೇ ಸ್ಥಾನಕ್ಕೆ ಏರಿದೆ. ಪಂದ್ಯಕ್ಕೆ ಮೊದಲು ಅದು ಏಳರಲ್ಲಿತ್ತು. ಆದರೆ, ಉಳಿದ ತಂಡಗಳ ಕಳಪೆ ಪ್ರದರ್ಶನ ಡಚ್ಚರ ಪ್ರಗತಿಗೆ ಕಾರಣವಾಯಿತು.

22ನೇ ಪಂದ್ಯದ ಬಳಿಕ ವಿಶ್ವ ಕಪ್​ ಅಂಕಪಟ್ಟಿ ಈ ರೀತಿ ಇದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ550101.353
ನ್ಯೂಜಿಲ್ಯಾಂಡ್​ 54181.481
ದಕ್ಷಿಣ ಆಫ್ರಿಕಾ43162.212
ಆಸ್ಟ್ರೇಲಿಯಾ4224-0.193
ಪಾಕಿಸ್ತಾನ5234-0.400
ಅಫಘಾನಿಸ್ತಾನ5134-0.969
ಬಾಂಗ್ಲಾದೇಶ 4132-0.748
ನೆದರ್ಲ್ಯಾಂಡ್ಸ್​​ 4132-0.790
ಶ್ರೀಲಂಕಾ4132-1.048
ಇಂಗ್ಲೆಂಡ್​ 4132-1.248

ವಿಶ್ವ ಕಪ್​ನ 23ನೇ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಇದು ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆಯದೆ.

Exit mobile version