Site icon Vistara News

ICC World Cup 2023 : ಫೈನಲ್​ನಲ್ಲಿ ಸೋತ ಭಾರತ ತಂಡಕ್ಕೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು?

Pat cummins

ಬೆಂಗಳೂರು: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ (ICC World Cup 2023) ಆತಿಥೇಯ ಭಾರತವನ್ನು 6 ವಿಕೆಟ್ ಗಳಿಂದ ಮಣಿಸಿದ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿಗೆ 50 ಓವರ್ ಗಳ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 241 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ ಗುರಿ ತಲುಪಿ ಟ್ರೋಫಿ ಗೆದ್ದಿತು.

ಆಸ್ಟ್ರೇಲಿಯಾ, ಭಾರತ ಮತ್ತು ಇತರ ತಂಡಗಳು ಎಷ್ಟು ಬಹುಮಾನದ ಮೊತ್ತವನ್ನು ಗೆಲ್ಲುತ್ತವೆ?

ಸೋಲಿನ ಬಳಿಕ ಕಣ್ಣಿರು ಸುರಿಸಿದ ಭಾರತದ ಆಟಗಾರರು

ಭಾರತ ಕ್ರಿಕೆಟ್​ ತಂಡದ ವಿಶ್ವ ಕಪ್​ (ICC World Cup 2023) ಗೆಲ್ಲುವ ಆಸೆ ಭಗ್ನಗೊಂಡಿದೆ. 2023ರ ವಿಶ್ವ ಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ 6 ವಿಕೆಟ್​ ಸೋಲು ಕಂಡಿರುವ ಭಾರತ ಐಸಿಸಿ ಟ್ರೋಫಿಯ ಗೆಲ್ಲುವ ಆಸೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದೂಡಿಕೆ ಮಾಡುವಂತಾಗಿದೆ. ಫೈನಲ್ ಪಂದ್ಯದಲ್ಲಿ ಭಾರತ ತಂಡ ಅತ್ಯಂತ ನಿರಾಸೆಯ ಪ್ರದರ್ಶನ ನೀಡಿತು. ಟೂರ್ನಿಯುದ್ಧಕ್ಕೂ ಹುಲಿಗಳಂತೆ ಆಡಿದ್ದ ಭಾರತ ತಂಡದ ಆಟಗಾರರು ಕೊನೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಅಂತೆಯೇ ಪಂದ್ಯ ಮುಕ್ತಾಯಗೊಂಡ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್​ ಮೊಹಮ್ಮದ್ ಸಿರಾಜ್​ ಕಣ್ಣಿರು ಹಾಕಿದರು.

ಇದನ್ನೂ ಓದಿ : ICC World Cup 2023 : ಭಾರತ ತಂಡದ ಜತೆ ನಿಲ್ಲೋಣ; ಸಿಎಂ ಸಿದ್ದರಾಮಯ್ಯ ಕರೆ

ಪಂದ್ಯದಲ್ಲಿ ಸೋಲುತ್ತಿದ್ದಂತೆ ಭಾರತ ತಂಡದ ಆಟಗಾರರು ನಿರಾಸೆ ಅನುಭವಿಸಿದರು.ಸೋಲಿನ ಸೂಚನೆ ಸಿಕ್ಕಿದ್ದ ಕಾರಣ ಬಹುತೇಕ ಆಸ್ಟ್ರೇಲಿಯಾ ತಂಡ ಗೆಲುವಿನ ರನ್ ಬಾರಿಸುವ ತನಕ ದುಃಖ ಅನುಭವಿಸಿದರು. ಆದರೆ, ಒಂದು ಬಾರಿ ಸೋಲು ಎದುರಾದ ತಕ್ಷಣ ಎಲ್ಲರ ದುಃಖದ ಕಟ್ಟೆಯೊಡೆಯಿತು. ಸಿರಾಜ್ ಅಳಲು ಆರಂಭಿಸಿದರೆ ಜಸ್​ಪ್ರಿತ್ ಬುಮ್ರಾ ಅವರನ್ನು ಸಮಾಧಾನ ಮಾಡಿದರು. ರೋಹಿತ್ ಶರ್ಮಾ ಕಣ್ಣೀರು ಸುರಿಸುತ್ತಾ ಬಗ್ಗಿ ಹೊರನಡೆದರು.

ವಿರಾಟ್​ ಕೊಹ್ಲಿಯೂ ಟೋಪಿಯನ್ನು ಮುಖಕ್ಕೆ ಮುಚ್ಚಿಕೊಂಡು ಹೊರಕ್ಕೆ ಹೋದರು. ಉಳಿದ ಆಟಗಾರರೂ ಅವರನ್ನು ಹಿಂಬಾಲಿಸಿದರು.

ಸಮಾಧಾನ ಮಾಡಿದ ಸಚಿನ್​

ಸೋಲಿನ ಬಳಿಕ ಭಾರತ ತಂಡದ ಆಟಗಾರರು ಮೈದಾನದಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರೆಲ್ಲರನ್ನೂ ಸಮಾಧಾನ ಮಾಡಿದರು. ಐಪಿಎಲ್​ ಮುಖ್ಯಸ್ಥ ರಾಜೀವ್ ಶುಕ್ಲಾ ಸೇರಿದಂತೆ ಎಲ್ಲರೂ ಭಾರತ ತಂಡದ ಆಟಗಾರರಿಗೆ ಸಮಾಧಾನ ಹೇಳಿದರು.

Exit mobile version