Site icon Vistara News

ICC World Cup 2023 : ವಿಶ್ವ ಕಪ್​ಗೆ ಆಡುವ ಭಾರತ ತಂಡದ ಬಲಾಬಲವೇನು? ಗೆಲುವಿನ ಅವಕಾಶ ಎಷ್ಟಿದೆ?

world cup 2023

ಕಳೆದ 12 ವರ್ಷಗಳ ಬಳಿ ಭಾರತ ಕ್ರಿಕೆಟ್ ತಂಡವು ಯಾವುದೇ ಮಾದರಿಯ ಕ್ರಿಕೆಟ್​ ವಿಶ್ವಕಪ್ ಗೆಲ್ಲಲು ವಿಫಲವಾಗಿದೆ. ಟೀಮ್​ ಇಂಡಿಯಾಕ್ಕೆ ಕೊನೆಯ ಪ್ರಮುಖ ಯಶಸ್ಸು 2013ರಲ್ಲಿ ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೂಲಕ ಲಭಿಸಿತ್ತು. ಕಳೆದ ಏಕದಿನ ಏಷ್ಯಾ ಕಪ್ ಗೆಲುವು ಭರವಸೆದಾಯಕವಾಗಿದ್ದರೂ, ಭಾರತವು ಎಲ್ಲಾ ಮೂರು ಸ್ವರೂಪಗಳಲ್ಲಿ ವಿಶ್ವದ ನಂ.1 ತಂಡವಾಗಿ ವಿಶ್ವ ಕಪ್​ ಪ್ರವೇಶಿಸಿದೆ. ಜತೆಗೆ ಹಲವಾರು ಬಲಿಷ್ಠ ತಂಡಗಳನ್ನು ಎದುರಿಸಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ 2023ರ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲು ಉತ್ಸುಕರಾಗಿದ್ದಾರೆ. ಅವರಿಬ್ಬರೂ ತವರಿನ ಪರಿಸ್ಥಿತಿಯೂ ಪೂರಕವಾಗಿದೆ.

ಟಿ20 ವಿಶ್ವ ಕಪ್​ಗಿಂತ ಭಿನ್ನವಾಗಿ ಟೀಮ್ ಇಂಡಿಯಾಕ್ಕೆ ಒಳ್ಳೆಯ ಸುದ್ದಿಯೆಂದರೆ ಫಿಟ್ ಮತ್ತು ಫಾರ್ಮ್​ನಲ್ಲಿರುವ ತಂಡದ ಆಟಗಾರರು. ರಿಷಭ್ ಪಂತ್ ಹೊರತುಪಡಿಸಿ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸೇರಿದಂತೆ ಎಲ್ಲರೂ ದೀರ್ಘಕಾಲದ ಗಾಯ ಸಮಸ್ಯೆಯಿಂದ ಮುಕ್ತರಾಗಿದ್ದಾರೆ. ಈ ಮೂವರೂ ಏಷ್ಯಾಕಪ್ ಮತ್ತು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಮಾಧಾನ ತಂದಿರುವ ವಿಷಯ.

2023ರ ವಿಶ್ವಕಪ್​​ಗೆ ಭಾರತ ತಂಡ ಹೇಗಿದೆ?

ಬ್ಯಾಟಿಂಗ್ ವಿಭಾಗ: ರಿಷಭ್ ಪಂತ್ ತಂಡದ ಪಾಲಿಗೆ ದೊಡ್ಡ ನಷ್ಟವಾದರೂ ಆ ಸ್ಥಾನವನ್ನು ತುಂಬಲು ಸಾಕಷಟು ಆಟಗಾರರು ಇದ್ದಾರೆ. ಏಕದಿನ ಪಂದ್ಯಗಳಲ್ಲಿನ ಅಂತರವನ್ನು ತುಂಬಲು ಇಶಾನ್ ಕಿಶನ್ ಇದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಆಯ್ಕೆದಾರರ ಭರವಸೆಯನ್ನು ಪೂರ್ತಿಗೊಳಿಸಲು ಸಮಯಕ್ಕೆ ಸರಿಯಾಗಿ ಫಾರ್ಮ್​ಗೆ ಮರಳಿದ್ದಾರೆ. ವಾಸ್ತವವಾಗಿ, ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ, ಭಾರತದ ಎಲ್ಲಾ ಅಗ್ರ 5 ಆಟಗಾರರು (ಪ್ಲೇಯಿಂಗ್ ಇಲೆವೆನ್​​ನಲ್ಲಿರುವವರು ) 50.00 ಅಥವಾ ಕೇವಲ 50 ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ : ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್​

ಶುಬ್ಮನ್ ಗಿಲ್ ಪ್ರಸ್ತುತ ವಿಶ್ವದ ನಂ.1 ಏಕದಿನ ಬ್ಯಾಟರ್​. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿ ಮಿಂಚಿದ್ದಾರೆ ಕಳೆದ 12 ತಿಂಗಳಲ್ಲಿ ಅವರು ಐದು ಶತಕಗಳು ಮತ್ತು 6 ಅರ್ಧಶತಕಗಳೊಂದಿಗೆ 1400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಕಳೆದ 12 ತಿಂಗಳಲ್ಲಿ ನಾಲ್ಕು ಶತಕಗಳೊಂದಿಗೆ ಭರ್ಜರಿ ಫಾರ್ಮ್​ ತೋರುತ್ತಿದ್ದಾರೆ. ರೋಹಿತ್​ ಕೂಡ ಅನುಕೂಲಕ್ಕೆ ತಕ್ಕ ಹಾಗೆ ಮಿಂಚುತ್ತಿದ್ದಾರೆ. ಕೆ. ಎಲ್ ರಾಹುಲ್ ಹಾಗೂ ಶ್ರೇಯಸ್​ ಅಯ್ಯರ್​​ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಬ್ಯಾಟಿಂಗ್ ವಿಭಾಗದ ಬಗ್ಗೆ ಭರವಸೆ ಇರಿಸಬಹುದಾಗಿದೆ.

ಕಳೆದ 12 ತಿಂಗಳಲ್ಲಿ ಭಾರತದ ಬ್ಯಾಟರ್​ಗಳ ಪ್ರದರ್ಶನ ಈ ಕೆಳಗಿನಂತಿದೆ

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗದಲ್ಲಿ, ಜಸ್ಪ್ರೀತ್ ಬುಮ್ರಾ ಅವರ ಮರಳುವಿಕೆ ತಂಡಕ್ಕೆ ಸಕಾರಾತ್ಮಕ ವಿಷಯ. ವೇಗದ ಬೌಲರ್ ಕಳೆದ 12 ತಿಂಗಳಲ್ಲಿ ಕೇವಲ 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಹಿಂದಿರುಗಿದ ನಂತರ ಅವರು ನೀಡಿದ ಪ್ರದರ್ಶನದಿಂದ, ಟೀಮ್ ಇಂಡಿಯಾ ಆಯ್ಕೆದಾರರು ಖುಷಿಯಾಗಿದ್ದಾರೆ. ಏಷ್ಯಾಕಪ್ ಫೈನಲ್​​ನಲ್ಲಿ ಮೊಹಮ್ಮದ್ ಸಿರಾಜ್ ಕೇವಲ 6 ವಿಕೆಟ್​ ಉರುಳಿಸಿದ್ದರು. ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧ ತಮ್ಮ 5 ವಿಕೆಟ್​ ಉರುಳಿಸಿದ್ದರು. ಆ ಮೂವರು ಭಾರತದ ವೇಗದ ದಾಳಿಗೆ ಬಲ ತುಂಬಿದ್ದಾರೆ. ಕಳೆದ 12 ತಿಂಗಳಲ್ಲಿ 18 ಪಂದ್ಯಗಳನ್ನಾಡಿರುವ ಸಿರಾಜ್ 40 ವಿಕೆಟ್ ಕಬಳಿಸಿದ್ದಾರೆ.

ಸ್ಪಿನ್ ವಿಭಾಗ ಗರಿಷ್ಠ ಫಾರ್ಮ್​ನಲ್ಲಿದೆ. ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಕಳೆದ 12 ತಿಂಗಳಲ್ಲಿ 20 ಪಂದ್ಯಗಳಲ್ಲಿ 38 ವಿಕೆಟ್​ಗಳನ್ನು ಪಡೆದಿದ್ದಾರೆ. ನಂತರ ರವೀಂದ್ರ ಜಡೇಜಾ ಇದ್ದಾರೆ. ಅವರಿಂದ ವಿಕೆಟ್ ತೆಗೆದುಕೊಳ್ಳುವ ಎಸೆತಗಳ ಕೊರತೆಯಿದ್ದರೂ, ಕೇವಲ 4.6 ಎಕಾನಮಿ ರೇಟ್​ನೊಂದಿಗೆ ಬ್ಯಾಟರ್​​ಗಳನ್ನು ನಿಯಂತ್ರಿಸುತ್ತಿದ್ದಾರೆ. ಅಕ್ಷರ್ ಪಟೇಲ್ ಬದಲಿಗೆ ರವಿಚಂದ್ರನ್ ಅಶ್ವಿನ್ ತಡವಾಗಿ ಬಂದಿದ್ದು, ಸ್ಪಿನ್ ದಾಳಿಯನ್ನು ಬಲಗೊಳಿಸಿದೆ.

ಇದನ್ನೂ ಓದಿ : ICC World Cup 2023 : ವಿಶ್ವ ಕಪ್​ ಉದ್ಘಾಟನಾ ಸಮಾರಂಭದಲ್ಲಿ ಏನೇನಿರುತ್ತವೆ? ಇಲ್ಲಿದೆ ಎಲ್ಲ ವಿವರ

ಕಳೆದ 12 ತಿಂಗಳಲ್ಲಿ ಭಾರತದ ಬೌಲರ್​ಗಳ ಪ್ರದರ್ಶನ

ಶಾರ್ದೂಲ್ ಠಾಕೂರ್ 20 ಪಂದ್ಯ, 27 ವಿಕೆಟ್​​, 5.7 ಎಕನಾಮಿ, 4/37 ಅತ್ಯುತ್ತಮ 1/0 (4ಮತ್ತು5 ವಿಕೆಟ್​ )
ಜಸ್ಪ್ರೀತ್ ಬುಮ್ರಾ 5 ಪಂದ್ಯ, 5 ವಿಕೆಟ್​​, 4.22 ಎಕನಾಮಿ, 2/30 ಅತ್ಯುತ್ತಮ 0/0 (4ಮತ್ತು5 ವಿಕೆಟ್​ )
ಮೊಹಮ್ಮದ್ ಸಿರಾಜ್ 19 ಪಂದ್ಯ, 40 ವಿಕೆಟ್​​, 4.73 ಎಕನಾಮಿ, 6/21 ಅತ್ಯುತ್ತಮ 2/1 (4ಮತ್ತು5 ವಿಕೆಟ್​ )
ಕುಲದೀಪ್ ಯಾದವ್ 20 ಪಂದ್ಯ, 38 ವಿಕೆಟ್​​, 4.66 ಎಕನಾಮಿ, 5/25 ಅತ್ಯುತ್ತಮ 3/1 (4ಮತ್ತು5 ವಿಕೆಟ್​ )
ಮೊಹಮ್ಮದ್ ಶಮಿ 12ಪಂದ್ಯ, 18 ವಿಕೆಟ್​​, 5.21 ಎಕನಾಮಿ, 5/51 ಅತ್ಯುತ್ತಮ 0/1 (4ಮತ್ತು5 ವಿಕೆಟ್​ )
ಅಕ್ಷರ್ ಪಟೇಲ್ 10 ಪಂದ್ಯ, 6 ವಿಕೆಟ್​​, 5.51 ಎಕನಾಮಿ, 2/22 ಅತ್ಯುತ್ತಮ 0/0 (4ಮತ್ತು5 ವಿಕೆಟ್​ )
ರವೀಂದ್ರ ಜಡೇಜಾ 14ಪಂದ್ಯ, 12 ವಿಕೆಟ್​​, 4.6 ಎಕನಾಮಿ, 3/37 ಅತ್ಯುತ್ತಮ 0/0 (4ಮತ್ತು5 ವಿಕೆಟ್​ )
ಹಾರ್ದಿಕ್ ಪಾಂಡ್ಯ 16 ಪಂದ್ಯ, 16 ವಿಕೆಟ್​​, 5.24 ಎಕನಾಮಿ, 3/3 ಅತ್ಯುತ್ತಮ 0/0 (4ಮತ್ತು5 ವಿಕೆಟ್​ )

ಟೀಮ್ ಇಂಡಿಯಾದ ಸಾಮರ್ಥ್ಯ ಮತ್ತು ದೌರ್ಬಲ್ಯ

ಸಾಮರ್ಥ್ಯ: ಬ್ಯಾಟಿಂಗ್ ಅಥವಾ ಸ್ಪಿನ್ ಬೌಲಿಂಗ್ ಭಾರತದ ಶಕ್ತಿಯಾಗಿದ್ದ ದಿನಗಳು ಕಳೆದುಹೋಗಿವೆ. ಈಗ, ಇದು ಸಂಘಟಿತಿ ತಂಡವಾಗಿದೆ. ಅಗ್ರ 5 ಪರಿಪೂರ್ಣ ಬ್ಯಾಟರ್​ಗಳು ತಂಡಕ್ಕೆ ದೊಡ್ಡ ಕೊಡುಗೆ ನೀಡಿದರೆ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅದನ್ನು ಸೇರಿಸಿದರೆ ಭಾರತದ ಬ್ಯಾಟಿಂಗ್ ಬಲ 7ನೇ ವಿಕೆಟ್​ಗೆ ಮುಂದುವರಿಯುತ್ತದೆ.

ಇದನ್ನೂ ಓದಿ : World Cup History: 2007ರ ವಿಶ್ವಕಪ್‌; ಟೂರ್ನಿಯಲ್ಲಿ ಹತ್ತಾರು ಮೇನಿಯಾ, ಆಸ್ಟ್ರೇಲಿಯಾ ಏಕಮೇವಾದ್ವಿತೀಯ!

ಬೌಲಿಂಗ್: ಕಳೆದ 12 ತಿಂಗಳಲ್ಲಿ ಭಾರತದ ಬೌಲಿಂಗ್ ವಿಭಾಗ 129 ವಿಕೆಟ್ ಗಳನ್ನು ಪಡೆದುಕೊಂಡಿದೆ. ಅವುಗಳಲ್ಲಿ, ವೇಗದ ಬೌಲರ್ ವಿಕೆಟ್ ಪಡೆಯುವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದು ಬೌಲಿಂಗ್ ಶಕ್ತಿಯನ್ನು ಸಾಬೀತುಪಡಿಸಿದೆ.

ದೌರ್ಬಲ್ಯ: ಆಲ್ ರೌಂಡರ್ ಗಳ ಅನುಪಸ್ಥಿತಿಯೇ ದೊಡ್ಡ ದೌರ್ಬಲ್ಯ. ಭಾರತದ ಪ್ಲೇಯಿಂಗ್ ಇಲೆವೆನ್ ನ ಅಗ್ರ 6 ಆಟಗಾರರು ಯಾವುದೇ ಅರ್ಥಪೂರ್ಣ ಬೌಲಿಂಗ್ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ, ಮುಂಚೂಣಿ ಬೌಲರ್​ಗಳು ಒಂದು ಘಟಕವಾಗಿ ಪ್ರದರ್ಶನ ನೀಡದಿದ್ದಾಗ ನಾಯಕ ರೋಹಿತ್ ಶರ್ಮಾಗೆ ಪ್ಲಾನ್ ಬಿ ಮಾಡುವುದು ಕಷ್ಟ. ಶಾರ್ದೂಲ್ ಠಾಕೂರ್ ಅವರನ್ನು ಆಲ್​ರೌಂಡರ್ ಎಂದು ಪರಿಗಣಿಸಿದ್ದರೂ ಅವರು ಪ್ರದರ್ಶನ ಪೂರಕವಾಗಿಲ್ಲ. ಇನ್ನು ಭಾರತದ ಯಾವುದೇ ಬೌಲರ್​ಗಳು ಬ್ಯಾಟಿಂಗ್​ ಮಾಡುವುದಿಲ್ಲ. ಹಾರ್ದಿಕ್ ಪಾಂಡ್ಯ ಅಥವಾ ರವೀಂದ್ರ ಜಡೇಜಾ ಅವರಿಗಷ್ಟೇ ಮಹತ್ವ ನೀಡಬೇಕಾಗಿದೆ.

ದೌರ್ಬಲ್ಯದ ಮತ್ತೊಂದು ಕ್ಷೇತ್ರವೆಂದರೆ ಭಾರತದ ಫೀಲ್ಡಿಂಗ್. ಆರ್ ಶ್ರೀಧರ್ ನಿರ್ಗಮನದ ನಂತರ ಭಾರತದ ಫೀಲ್ಡಿಂಗ್ ನಿಖರತೆ ಕುಸಿದಿದೆ. ಟಿ ದಿಲೀಪ್ ಅವರ ಅಡಿಯಲ್ಲಿ, ಭಾರತವು ಇನ್ನು ಮುಂದೆ ವಿಶ್ವದ ಅತ್ಯುತ್ತಮ ಫೀಲ್ಡಿಂಗ್ ತಂಡಗಳಲ್ಲಿ ಒಂದಾಗಿಲ್ಲ ಮತ್ತು ಅದು ಕಳವಳಕಾರಿ ಸಂಗತಿ.

ಅವಕಾಶಗಳು

ಭಾರತವು ತವರಿನಲ್ಲಿ ಆಡುತ್ತಿದೆ, ಇದು ವಿಶೇಷ ಅನುಕೂಲವಾಗಿದೆ. ಕಳೆದ 12 ತಿಂಗಳಲ್ಲಿ ಭಾರತ ತವರಿನಲ್ಲಿ 8 ಪಂದ್ಯಗಳನ್ನು ಸೋತಿದೆ, 18 ಪಂದ್ಯಗಳನ್ನು ಗೆದ್ದಿದೆ. ಏಕದಿನ ಕ್ರಿಕೆಟ್​್ನ ಖ್ಯಾತಿ ಮತ್ತು ಸಮಯ ಕ್ಷೀಣಿಸುತ್ತಿರುವುದರಿಂದ, ಭಾರತ ಕ್ರಿಕೆಟ್ ತಂಡಕ್ಕೆ ಸ್ವರೂಪವನ್ನು ಪುನರುಜ್ಜೀವನಗೊಳಿಸಲು ಅವಕಾಶವಿದೆ. 2023ರ ವಿಶ್ವಕಪ್ ನಲ್ಲಿ ಭಾರತ ಗೆದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ.

ವಿಶ್ವ ಕಪ್​ ಕುರಿತು ಸಮಗ್ರ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆತಂಕಗಳುವ

ಗಾಯಗಳು ಟೀಮ್ ಇಂಡಿಯಾಕ್ಕೆ ದೊಡ್ಡ ಬೆದರಿಕೆ. 2019 ರ ವಿಶ್ವಕಪ್ ನಂತರ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ದೀರ್ಘಕಾಲದ ಗಾಯಗಳಿಂದ ಬಳಲುತ್ತಿದ್ದಾರೆ. ಭಾರತವು ಭಾರತದ 11 ಸ್ಥಳಗಳಲ್ಲಿ ಸುಮಾರು 12,000 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ.

ಭಾರತದ ಪ್ರಮುಖ ಆಟಗಾರರು

ವಿರಾಟ್ ಕೊಹ್ಲಿ : ಭಾರತೀಯ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ಯಾವಾಗಲೂ ಭಾರತದ ಪ್ರಮುಖ ಆಟಗಾರ. ಅವರು 3ನೇ ಕ್ರಮಾಂಕದಲ್ಲಿ ಆಡಿದರೆ, ಭಾರತವು ದೊಡ್ಡ ಮೊತ್ತವನ್ನು ಗಳಿಸಬಹುದು ಮತ್ತು ಯಾವುದೇ ಮೊತ್ತವನ್ನು ಚೇಸ್ ಮಾಡಬಹುದು. ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಶತಕಗಳ ದಾಖಲೆಯು ಅವರ ಹೆಚ್ಚುವರಿ ಪ್ರೇರಣೆಯಾಗಿದೆ. ವಿಶ್ವ ದಾಖಲೆಯನ್ನು ಸೃಷ್ಟಿಸಲು ಕೊಹ್ಲಿ ಕೇವಲ 3 ಶತಕಗಳ ದೂರದಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯ: ಆಲ್ರೌಂಡರ್​​ಗಳು ತಂಡಕ್ಕೆ ಸಮತೋಲನವನ್ನು ತರುತ್ತಾರೆ. ಅಂತೆಯೇ ಹಾರ್ದಿಕ್​ ಪಾಂಡ್ಯ ಮ್ಯಾಚ್ ವಿನ್ನಿಂಗ್ ಇನಿಂಗ್ಸ್​ಗಳನ್ನು ಆಡುವುದು ಮಾತ್ರವಲ್ಲ, ಅವರು ಮುಂಚೂಣಿ ಪಾತ್ರವನ್ನು ಸಹ ನಿರ್ವಹಿಸಬಹುದು. ಆದರೆ ಚೆಂಡಿನೊಂದಿಗೆ ಅವರ ಕೊಡುಗೆ ಮುಖ್ಯವಾಗಿದೆ. ಹೊಸ ಚೆಂಡಿನೊಂದಿಗೆ ಅಥವಾ ಪವರ್​ಪ್ಲೇ ಬಳಿಕ ಹಾರ್ದಿಕ್ ಪಾಂಡ್ಯ ನಿಜವಾದ ವಿಕೆಟ್ ಟೇಕರ್ ಆದರೆ, ರೋಹಿತ್ ಶರ್ಮಾಗೆ ಹೆಚ್ಚುವರಿ ಸ್ಪಿನ್ನರ್​ಗಳನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತದೆ.

ಭಾರತ ತಂಡದ ಸದಸ್ಯರು ಇವರು

ಬ್ಯಾಟ್ಸ್​ಮನ್​ಗಳು: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್

ವಿಕೆಟ್​ ಕೀಪರ್​: ಇಶಾನ್ ಕಿಶನ್, ಕೆಎಲ್ ರಾಹುಲ್

ವೇಗದ ಆಲ್​ರೌಂಡರ್​ಗಳು: ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್

ಸ್ಪಿನ್ ಆಲ್​ರೌಂಡರ್​ಗಳು: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್

ವೇಗಿಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಸ್ಪಿನ್ನರ್​ಗಳು : ಕುಲದೀಪ್ ಯಾದವ್

ಭಾರತ ತಂಡದ ವೇಳಾಪಟ್ಟಿ

Exit mobile version