Site icon Vistara News

ಯೋ-ಯೋ,ಡೆಕ್ಸಾ ಟೆಸ್ಟ್​ ಎಂದರೇನು? ಫೇಲ್​ ಆಗಿ​ ಅವಕಾಶ ಕಳೆದುಕೊಂಡ ಆಟಗಾರರೆಷ್ಟು?

yo yo test and dexa test

ಬೆಂಗಳೂರು: ಕೆಲ ದಿನಗಳಿಂದ ಕೇಳಿಬರುತ್ತಿರುವ ಯೋ-ಯೋ(yo yo test) ಮತ್ತು ಡೆಕ್ಸಾ ಟೆಸ್ಟ್​(dexa test) ಬಗ್ಗೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಬಾರಿ ಕುತೂಹಲವೊಂದು ಮೂಡಿಸಿದೆ. ಈ ಟೆಸ್ಟ್​ ಭಾರತೀಯ ಕ್ರಿಕೆಟ್​ನಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದ್ದರೂ ಏಷ್ಯಾಕಪ್​ಗೆ(Asia Cup) ಆಯ್ಕೆಯಾದ ಎಲ್ಲ ಆಟಗಾರರು ಈ ಟೆಸ್ಟ್​ ಪಾಸ್​ ಆಗಲೇಬೇಕೆಂದು ಬಿಸಿಸಿಐ(BCCI) ಕಟು ನಿಯಮ ಜಾರಿಗೆ ತಂದಿತೋ ಆಗಿನಿಂದ ಈ ಟೆಸ್ಟ್​(yo yo test and dexa test) ಬಗ್ಗೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಈ ಟೆಸ್ಟ್​ ಹೇಗೆ ನಡೆಯುತ್ತದೆ? ಇದಕ್ಕೆ ಯಾವ ಮಾನದಂಡವಿದೆ? ಹೀಗೆ ಹಲವು ಪ್ರಶ್ನೆಗಳು ಕಾಡಲಾರಂಬಿಸಿತು. ಅಭಿಮಾನಿಗಳ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯೋ-ಯೋ ಟೆಸ್ಟ್​ ಎಂದರೆ…

ಯೋ-ಯೋ ಟೆಸ್ಟ್‌ ಎಂದರೆ ಇದು 23 ಹಂತಗಳ ಪರೀಕ್ಷೆ, ಕ್ರಿಕೆಟಿಗರಿಗೆ 5ನೇ ಹಂತದಿಂದ ಆರಂಭ, ಕ್ರಿಕೆಟಿಗ 20 ಪ್ಲಸ್‌ 20 ಮೀ. ದೂರವನ್ನು ನಿಗದಿತ ಅವಧಿಯಲ್ಲಿ ಪೂರೈಸುವುದು. ಹಂತಗಳ ಸಂಖ್ಯೆ ಹೆಚ್ಚಿದಂತೆ ದೂರವನ್ನು ಕ್ರಮಿಸುವ ಸಮಯ ಕಡಿಮೆಯಾಗುತ್ತದೆ. ಇಲ್ಲಿ ತೇರ್ಗಡೆಯಾಗಲು ಕನಿಷ್ಠ 16.1 ಅಂಕ ಅಗತ್ಯ. ಇದು ಯೋ-ಯೋ ಟೆಸ್ಟ್​ ಆಗಿದೆ.

ಡೆಕ್ಸಾ ಟೆಸ್ಟ್

ಡೆಕ್ಸಾ(dexa test) ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನ. ಆಟಗಾರರ ದೈಹಿಕ ಕ್ಷಮತೆಯನ್ನು ವೈಜ್ಞಾನಿಕವಾಗಿ, ಹೆಚ್ಚು ನಿಖರವಾಗಿ ಗುರುತಿಸಲು ಇದರಿಂದ ಸಾಧ್ಯ. ಇಲ್ಲಿ ನಡೆಸಲಾಗುವ ಎಕ್ಸ್‌-ರೇ ಪರೀಕ್ಷೆ ವೇಳೆ ಆಟಗಾರರ ಮೂಳೆಯ ಸಾಮರ್ಥ್ಯದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಮೂಳೆಯ ಸಾಮರ್ಥ್ಯ ಎಷ್ಟಿದೆ, ಗಟ್ಟಿಯಾಗಿದೆಯೇ ಅಥವಾ ಬಹಳ ಬೇಗ ಮುರಿಯಬಹುದೇ ಎಂಬುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನೂ ಪತ್ತೆಹಚ್ಚಬಹುದು. ಇದು ಕೇವಲ 10 ನಿಮಿಷಗಳ ಪರೀಕ್ಷೆಯಾಗಿದೆ. ಒಂದೊಮ್ಮೆ ಆಟಗಾರರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದ್ದರೆ ಆಗ ಅವರಿಗೆ ಆಹಾರ ಸೇವನೆಯಲ್ಲಿ ಕೆಲ ನಿಯಮವನ್ನು ಪಾಲಿಸುವಂತೆ ಬಿಸಿಸಿಐ ವೈದ್ಯರು ಸೂಚನೆ ನೀಡುತ್ತಾರೆ. ಇದನ್ನು ಆಟಗಾರರು ಪಾಲಿಸಬೇಕಿದೆ.

ಇದನ್ನೂ ಓದಿ Asia Cup: ಪಾಕ್​ ವಿರುದ್ಧ ಗರ್ಜಿಸಲು ಸಜ್ಜಾದ ಕನ್ನಡಿಗ ಕೆ.ಎಲ್​ ರಾಹುಲ್​

ಯೋ-ಯೋ ಟೆಸ್ಟ್​ನಲ್ಲಿ ವಿಫಲಗೊಂಡರ ಸ್ಟಾರ್​ ಆಟಗಾರರ ಪಟ್ಟಿ ಹೀಗಿದೆ

ಯುವರಾಜ್​ ಸಿಂಗ್​


ಭಾರತದ ಚೊಚ್ಚಲ ಟಿ20 ಮತ್ತು ದ್ವಿತೀಯ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್ ಕೂಡ ​ ಯೋ-ಯೋ ಟೆಸ್ಟ್​ನಲ್ಲಿ ಫೇಲ್​ ಆಗಿ ತಂಡದಿಂದ ಅವಕಾಶ ವಂಚಿತರಾಗಿದ್ದರು. ಹೌದು, 2017ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಯುವರಾಜ್ ಯೋ-ಯೋ ಪರೀಕ್ಷೆಯಲ್ಲಿ ತಮ್ಮ ಫಿಟ್​ನೆಸ್​ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ಈ ಸರಣಿಯಿಂದ ಕೈಬಿಡಲಾಗಿತ್ತು. ಈ ಟೆಸ್ಟ್​ ಪಾಸ್​ ಆದ ಬಳಿಕವೇ ಅವರು ತಂಡಕ್ಕೆ ಮರಳಿದ್ದರು.

ಮೊಹಮ್ಮದ್ ಶಮಿ


ಸದ್ಯ ಭಾರತ ತಂಡದ ಪ್ರಮುಖ ವೇಗಿಯಾಗಿ ಮಿಂಚುತ್ತಿರುವ ಅನುಭವಿ ಬೌಲರ್​ ಮೊಹಮ್ಮದ್​ ಶಮಿ ಕೂಟ ಈ ಟೆಸ್ಟ್​ನಲ್ಲಿ ಫೇಲ್​ ಆಗಿ ಒಂದು ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಆ ಬಳಿಕ ಕಠಿಣ ಅಭ್ಯಾಸ ನಡೆಸಿ ಶಂಇ ತಮ್ಮ ಫಿಟ್​ನೆಸ್​ ಸಾಬೀತುಪಡಿಸಿ ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಸದ್ಯ ಅವರು ಫಿಟ್​ ಆಗಿದ್ದಾರೆ. ಏಷ್ಯಾಕಪ್​ಗೆ ನಡೆಸಿದ ಯೋ-ಯೋ ಟೆಸ್ಟ್​ ಪಾಸ್​ ಆಗಿದ್ದಾರೆ.

ವಾಷಿಂಗ್ಟನ್ ಸುಂದರ್


ಚೆನ್ನೈ ಮೂಲಕ ಸ್ಪಿನ್​​ ಆಲ್​ರೌಂಡರ್​ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಳೆ ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಬಳಿಕ ಅವರು ಎನ್​ಸಿಎಯಲ್ಲಿ ತಮ್ಮ ಫಿಟ್​ನೆಸ್​ ಪಾಸ್​ ಆಗಿ ಮುಂದಿನ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಮರಳಿದ್ದರು.

ಸಂಜು ಸ್ಯಾಮ್ಸನ್


ಪದೇಪದೆ ಟೀಮ್​ಇಂಡಿಯಾದಲ್ಲಿ ಅವಕಾಶ ವಂಚಿತರಾಗುತ್ತಿರುವ ಸಂಜು ಸ್ಯಾಮ್ಸನ್​ ಕೂಡ 2018ರಲ್ಲಿ ಇಂಗ್ಲೆಂಡ್ ಪ್ರವಾಸದ ಭಾರತ ಎ ತಂಡದ ಸರಣಿಯ ವೇಳೆ ಈ ಟೆಸ್ಟ್​ನಲ್ಲಿ ಫೇಲ್​ ಆಗಿದ್ದರು. ಹೀಗಾಗಿ ಅವರ ಬದಲು ಇಶಾನ್ ಕಿಶನ್‌ಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಇದಾದ ಒಂದು ವರ್ಷದ ನಂತರ ಸಂಜು ಹಿರಿಯರ ತಂಡ ಪ್ರತಿನಿಧಿಸಿದರು. ಹೀಗೆ ಅಂಬಾಟಿ ರಾಯುಡು, ಕುಲ್​ದೀಪ್​ ಯಾದವ್​ ಸೇರಿ ಅನೇಕ ಕ್ರಿಕೆಟಿಗರು ಈ ಟೆಸ್ಟ್​ನಲ್ಲಿ ಫೇಲ್​ ಆಗಿ ಅವಕಾಶ ವಂಚಿತರಾಗಿದ್ದರು.

Exit mobile version