ದುಬೈ: ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್ನ ದಿ ಓವಲ್ ಸ್ಟೇಡಿಯಮ್ನಲ್ಲಿ ನಡೆಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ವಿಜೇತರು ಹಾಗೂ ರನ್ನರ್ ಅಪ್ ತಂಡಕ್ಕೆ ಬಹುಮಾನದ ಮೊತ್ತವನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಟ್ರೋಫಿ ಹಾಗೂ ಬಹುಮಾನ ಜತೆಗೆ ಎರಡೂ ತಂಡಗಳಿಗೆ ಪ್ರಮುಖ ಪ್ರೋತ್ಸಾಹ ಧನವನ್ನೂ ನೀಡುವುದಾಗಿ ಐಸಿಸಿ ಘೋಷಿಸಿದೆ. ಟ್ರೋಫಿ ಗೆದ್ದ ತಂಡಕ್ಕೆ 13,21,86,400 ರೂಪಾಯಿ (16 ಲಕ್ಷ ಡಾಲರ್) ಹಾಗೂ ರನ್ನರ್ ಅಪ್ ತಂಡಕ್ಕೆ 6,60,96,000 ರೂಪಾಯಿ ಬಹುಮಾನ ಲಭಿಸಲಿದೆ. ಹೀಗಾಗಿ ಭಾರತ ತಂಡ ಗೆದ್ದರೆ 13 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದು, ಸೋತರೂ 6.6 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ.
Prize pot for the ICC World Test Championship 2021-23 cycle revealed 💰
— ICC (@ICC) May 26, 2023
Details 👇https://t.co/ZWN8jrF6LP
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ನ್ಯೂಜಿಲ್ಯಾಂಡ್ ತಂಡ 1.6 ಮಿಲಿಯನ್ ಡಾಲರ್ (ಬಹುತೇಕ 13 ಕೋಟಿ ರೂಪಾಯಿ) ಪಡೆದುಕೊಂಡಿತ್ತು. ಹಾಲಿ ಆವೃತ್ತಿಯ ಬಹುಮಾನ ಮೊತ್ತವೂ ಅಷ್ಟೇ ಪ್ರಮಾಣದಲ್ಲಿದ್ದು ಆಟಗಾರರ ಜೇಬಿಗೆ ದೊಡ್ಡ ಮೊತ್ತ ಸೇರಿಕೊಳ್ಳಲಿದೆ. ಅಂತೆಯೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಮೂರನೇ ಸ್ಥಾಣ ಪಡೆದುಕೊಂಡಿರುವ ದಕ್ಷಿಣ ಆಫ್ರಿಕಾ 3,71,79,000 ರೂಪಾಯಿ (450,000 ಡಾಲರ್) ಗಳಿಸಿದೆ.
ಇದನ್ನೂ ಓದಿ : IPL 2023 : ಮೋದಿ ಸ್ಟೇಡಿಯಂ ಬಳಿ ಐಪಿಎಲ್ ಟಿಕೆಟ್ಗೆ ನೂಕುನುಗ್ಗಲು, ಕಾಲ್ತುಳಿತ; ಪೊಲೀಸರಿಂದ ಲಾಠಿ ಚಾರ್ಜ್
ಆಕ್ರಮಣಕಾರಿ ಆಟದ ಶೈಲಿಯೊಂದಿಗೆ ಎರಡು ವರ್ಷಗಳ ಕಾಲ ನಡೆದ ಟೂರ್ನಿಯಲ್ಲಿ ಕೊನೇ ಹಂತದಲ್ಲಿ ಚೇತರಿಸಿಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಇಂಗ್ಲೆಂಡ್ ತಂಡಕ್ಕೆ 2,89,17,000 ರೂಪಾಯಿ ಬಹುಮಾನ ಲಭಿಸಿದೆ. ಐದನೇ ಸಾಲಿನಲ್ಲಿರುವ ಲಂಕಾ ತಂಡಕ್ಕೆ 1,65,23,900 ರೂಪಾಯಿ ಬಹುಮಾನ ದೊರಕಿದೆ.
ಹೊಸ ಕಿಟ್ನಲ್ಲಿ ಆಡಲಿದೆ ಭಾರತ ತಂಡ
ಜೂನ್ 7ರಂದು ಇಂಗ್ಲೆಂಡ್ನ ಓವಲ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯ (WTC FInal 2023) ನಡೆಯಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಪ್ರಶಸ್ತಿಗಾಗಿ ಸೆಣಸಾಡಲಿದೆ. ಏತನ್ಮಧ್ಯೆ, ಐಪಿಎಲ್ನಿಂದ ಹೊರಕ್ಕೆ ಬಿದ್ದಿರುವ ತಂಡಗಳಲ್ಲಿದ್ದ ಟೀಮ್ ಇಂಡಿಯಾ (Team India) ಆಟಗಾರರು ಈಗಾಗಲೇ ಇಂಗ್ಲೆಂಡ್ ತಲುಪಿ ಅಭ್ಯಾಸ ಆರಂಭಿಸಿದ್ದಾರೆ. ಮೊದಲ ಶಿಬಿರದ ವೇಳೆ ಟೀಮ್ ಇಂಡಿಯಾ ಆಟಗಾರರು ಬಿಸಿಸಿಐನ ಹೊಸ ಕಿಟ್ನೊಂದಿಗೆ ಕಾಣಿಸಿಕೊಂಡಿದ್ದಾರೆ. ಅದು ಅಡಿಡಾಸ್ ಸಂಸ್ಥೆಯ ಕಿಟ್ ಅಗಿದೆ. ಈ ಚಿತ್ರವನ್ನು ಬಿಸಿಸಿಐ (BCCI) ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
Unveiling #TeamIndia’s new training kit 💙💙
Also, kickstarting our preparations for the #WTCFinal pic.twitter.com/iULctV8zL6— BCCI (@BCCI) May 25, 2023
ಆಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಸೇರಿದಂತೆ ಮೊದಲ ಬ್ಯಾಚ್ನ ಭಾರತೀಯ ಕ್ರಿಕೆಟಿಗರು ಹೆಡ್ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಭಾರತದ ಸಹಾಯಕ ಸಿಬ್ಬಂದಿಯ ಕಣ್ಗಾವಲಿನಲ್ಲಿ ಡಬ್ಲ್ಯುಟಿಸಿ ಫೈನಲ್ಗೆ (WTC Final 2023) ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಐಪಿಎಲ್ 2023 ಮುಗಿದ ಕೂಡಲೇ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತು ಇತರ ಕ್ರಿಕೆಟಿಗರು ಇಂಗ್ಲೆಂಡ್ಗೆ ಪ್ರವಾಸ ಬೆಳೆಸಲಿದ್ದಾರೆ.