Site icon Vistara News

ICC World Cup 2023: ಮಳೆ ಬಂದರೆ ವಿಶ್ವಕಪ್​ನಲ್ಲಿ ಮೀಸಲು ದಿನ ಇದೆಯೇ? ಐಸಿಸಿ ಕೈಗೊಂಡ ನಿರ್ಧಾರ ಏನು?

Match abandoned due to persistent rain.

ಬೆಂಗಳೂರು: ಏಕದಿನ ವಿಶ್ವಕಪ್​ ಅಭ್ಯಾಸ ಪಂದ್ಯಗಳು ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ ಭಾರತಕ್ಕೆ ಒಂದೂ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಲೀಗ್​ ಹಂತದ ಕೆಲ ಪಂದ್ಯಗಳಿಗೂ ಮಳೆಯ ಸೂಚನೆ ಇದೆ. ಚೆನ್ನೈ ಮತ್ತು ಹೈದರಾಬಾದ್​ನಲ್ಲಿ ಹಿಂಗಾರು ಮಾರುತ ಆರಂಭವಾಗುವ ಕಾರಣ ಇಲ್ಲಿ ಮಳೆಯ ಎಚ್ಚರಿಕೆ ಇದೆ. ಹೀಗಾಗಿ ಕ್ರಿಕೆಟ್​ ಅಭಿಮಾನಿಗಳಿಗೆ ಮೀಸಲು ದಿನದ(Reserve Day) ಲಭ್ಯತೆಯ ಬಗ್ಗೆ ಗೊಂದಲ ಮೂಡಿದೆ.

ಸೆಮಿ ಮತ್ತು ಫೈನಲ್​ಗೆ ಮಾತ್ರ ಮೀಸಲು ದಿನ

ವಿಶ್ವಕಪ್​ ಲೀಗ್​ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರುವುದಿಲ್ಲ. ಲೀಗ್ ಹಂತದ ಪಂದ್ಯುಗಳು ಮಳೆಯಿಂದ ರದ್ದುಗೊಂಡರೆ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಆದರೆ ಎರಡು ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನಗಳು ಜಾರಿಯಲ್ಲಿವೆ. ಒಂದೊಮ್ಮೆ ಮಳೆಯಿಂದ ಮೀಸಲು ದಿನವೂ ಸೆಮಿಫೈನಲ್​ ಪಂದ್ಯ ನಡೆಯದಿದ್ದರೆ ಆಗ ರನ್​ ರನ್​ ರೇಟ್ ಆಧಾರದಲ್ಲಿ ಮುಂದಿರುವ ತಂಡ ನೇರವಾಗಿ ಫೈನಲ್​ ಪ್ರವೇಶ ಪಡೆಯಲಿದೆ. ಫೈನಲ್​ನ ಮೀಸಲು ದಿನವೂ ರದ್ದುಗೊಂಡರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯೀ ಎಂದು ನಿರ್ಧರಿಸಲಾಗುತ್ತದೆ.

ಬೌಂಡರಿ ಸುತ್ತಳತೆ 70 ಮೀಟರ್‌

ಈ ಬಾರಿ ವಿಶ್ವಕಪ್​ನಲ್ಲಿ ಐಸಿಸಿ ಮಹತ್ವದ ನಿರ್ಧಾರವೊಂದನ್ನು ಜಾರಿಗೊಳಿಸಿದೆ. ಅದೆಂದರೆ ಬೌಂಡರಿಯ ದೂರ 70 ಮೀಟರ್ ಗಿಂತ ಕಡಿಮೆ ಇರುವಂತಿಲ್ಲ. ಈ ಹಿಂದೆ ನಡೆದ ವಿಶ್ವಕಪ್​ನಲ್ಲಿ ಈ ರೀತಿಯ ಬೌಂಡರಿ ಗೆರೆಯ ಅಂತರದ ನಿಯಮವಿರಲಿಲ್ಲ. ಬ್ಯಾಟರ್​ಗಳಿಗೆ ಸಿಕ್ಸರ್​ ಬಾರಿಸುವುದು ಅಷ್ಟು ಸುಲಭವಲ್ಲ.

ಸಾಫ್ಟ್ ಸಿಗ್ನಲ್​ಗೆ ಕೊಕ್​

ಈ ವರ್ಷದ ಜೂನ್‌ನಿಂದ ಸಾಫ್ಟ್ ಸಿಗ್ನಲ್ ನಿಯಮವನ್ನು ಐಸಿಸಿ ರದ್ದುಗೊಳಿಸಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್​ನಲ್ಲಿ ಸಾಫ್ಟ್ ಸಿಗ್ನಲ್ ಜಾರಿಯಲ್ಲಿ ಇರುವುದಿಲ್ಲ. ಉದಾಹರಣೆಗೆ ಫೀಲ್ಡರ್ ಒಬ್ಬ ಹಿಡಿದ ಕ್ಯಾಚ್​ ಅನುಮಾನಾಸ್ಪದಗಾಗಿದ್ದರೆ ಆಗ ಫೀಲ್ಡ್ ಅಂಪೈರ್, ಥರ್ಡ್​ ಅಂಪೈರ್ ಬಳಿ ಈ ಬಗ್ಗೆ ಮನವಿ ಮಾಡುತ್ತಾರೆ. ಅದಕ್ಕೂ ಮುನ್ನ ಆನ್​ಪೀಲ್ಡ್​ ಅಂಪೈರ್ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ (ಔಟ್ ಅಥವಾ ನಾಟೌಟ್). ನಂತರ ಮೂರನೇ ಅಂಪೈರ್ ಈ ಕ್ಯಾಚ್​ನ ವಿಡಿಯೊ ತುಣುಕನ್ನು ಪರೀಕ್ಷಿಸುತ್ತಾರೆ. ಒಂದೊಮ್ಮೆ ಈ ಕ್ಯಾಚ್‌ನ ವಿಡಿಯೊ ತುಣುಕಿನಲ್ಲಿ ಮೂರನೇ ಅಂಪೈರ್‌ಗೂ ಸರಿಯಾದ ಸ್ಪಷ್ಟತೆ ಇಲ್ಲವಾದರೆ ಆಗ ಆನ್‌ಫೀಲ್ಡ್ ಅಂಪೈರ್‌ಗಳು ನೀಡಿದ ನಿರ್ಧಾರವನ್ನೇ ಅಂತಿಮವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ರೀತಿಯ ನಿರ್ಣಾಯ ಹಲವು ವಿವಾದ ಸೃಷ್ಟಿಸಿತ್ತು. ಹೀಗಾಗಿ ಈ ಬಾರಿ ಸಾಫ್ಟ್ ಸಿಗ್ನಲ್ ನಿಯಮವನ್ನು ಕೈಬಿಡಲಾಗಿದೆ.

ಇದನ್ನೂ ಓದಿ ICC World Cup 2023: ಭಾರತವೇ ವಿಶ್ವಕಪ್​ ಗೆಲ್ಲುವ ಹಾಟ್ ಫೇವರಿಟ್; ಪಾಕ್​ ಮಾಜಿ ವೇಗಿ ವಿಶ್ವಾಸ

ರೌಂಡ್‌ ರಾಬಿನ್‌ ಲೀಗ್‌

ಇದು 10 ತಂಡಗಳ ನಡುವಿನ ರೌಂಡ್‌ ರಾಬಿನ್‌ ಮಾದರಿಯ ಲೀಗ್​ ಆಗಿದೆ. ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಅಗ್ರಸ್ಥಾನ ಅಲಂಕರಿಸಿದ 4 ತಂಡಗಳು ಸೆಮಿಫೈನಲ್​ ಪ್ರವೇಶ ಪಡೆಯಲಿದೆ.

ಬೌಂಡರಿ ಕೌಂಟ್​ ಇಲ್ಲ

ಕಳೆದ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಪಂದ್ಯಗಳು ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ.

Exit mobile version