ಬೆಂಗಳೂರು: ಭಾರತದ ಸ್ಟಾರ್ ಒಲಿಂಪಿಯನ್ ಪದಕ ವಿಜೇತ ಕ್ರೀಡಾಪಟುಗಳಾದ ನೀರಜ್ ಚೋಪ್ರಾ(Neeraj Chopra) ಮತ್ತು ಪಿ.ವಿ.ಸಿಂಧು(PV Sindhu) ಮಧ್ಯೆ ಪ್ರೇಮಾಂಕುರವಾಗಿದ್ದು, ಶೀಘ್ರದಲ್ಲೇ ವಿವಾಹವಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಚರ್ಚೆಗೆ ಪ್ರಮುಖ ಕಾರಣ, ಇವರಿಬ್ಬರು(Neeraj And Sindhu) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಒಂದು ಪೋಸ್ಟ್. ಜತೆಗೆ ಒಬ್ಬರಿಗೊಬ್ಬರು ಟ್ಯಾಗ್ ಕೂಡ ಮಾಡಿರುವುದು.
ಹೌದು, ನೀರಜ್ ಚೋಪ್ರಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ಯಾಡ್ಮಿಂಟನ್ ಬ್ಯಾಟ್ ಮತ್ತು ಕಾಕ್ನ ಫೋಟೊ ಹಂಚಿಕೊಂಡು ‘ಇದರರ್ಥವೇನು ಗೆಸ್ ಮಾಡ್ತೀರಾ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಈ ಪೋಸ್ಟನ್ನು ಸಿಂಧುಗೆ ಟ್ಯಾಗ್ ಮಾಡಿದ್ದಾರೆ.
ಪಿ.ವಿ ಸಿಂಧು ಕೂಡ ಜಾವೆಲಿನ್ನ ಫೋಟೊ ಹಂಚಿಕೊಂಡು ‘ಅರೇ ಇದು ಹೇಗೆ ನನ್ನ ಬಳಿ ಬಂತು? ಗೆಸ್ ಮಾಡ್ತೀರಾ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಸಿಂಧು ಕೂಡ ತಮ್ಮ ಪೋಸ್ಟ್ ಅನ್ನು ನೀರಜ್ಗೆ ಟ್ಯಾಗ್ ಮಾಡಿದ್ದಾರೆ. ಅಚ್ಚರಿ ಎಂದರೆ ಇಬ್ಬರು ಕೂಡ ಒಂದೇ ಸಮಯಕ್ಕೆ ಈ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಮುಂದಿನ ದಿನದಲ್ಲಿ ಮದುವೆಯಾದರೂ ಅಚ್ಚರಿಯಿಲ್ಲ ಎಂದು ಕೆಲ ನೆಟ್ಟಿಗರು ಇವರ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ಕೆಲ ನೆಟ್ಟಿಗರು ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದು, ಭಾರತದ ಹೆಮ್ಮೆಯ ಕ್ರೀಡಾಪಟುಗಳಾದ ನಿಮ್ಮ ಮದುವೆಯನ್ನು ಶೀಘ್ರದಲ್ಲೇ ನೋಡ ಬಯಸುತ್ತೇವೆ ಎಂದು ಹೇಳಿದ್ದಾರೆ. ಹೀಗೆ ಹಲವು ಕಮೆಂಟ್ಗಳು ವ್ಯಕ್ತವಾಗಿದೆ. ಉಭಯ ಕ್ರಿಡಾಪಟುಗಳು ಈ ರೀತಿಯ ಕಮೆಂಟ್ಗಳಿಗೆ ತಲೆಕೆಡಿಸಿಕೊಳ್ಳದೆ ಇದೇ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್(Paris Olympics 2024) ಕ್ರಿಡಾಕೂಡದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ Neeraj Chopra: ನೀರಜ್ ಚೋಪ್ರಾರನ್ನು ಭಾಯ್ ಎಂದ ಅರ್ಷದ್ ನದೀಮ್; ಪಾಕ್ ಅಥ್ಲೀಟ್ ಬಗ್ಗೆ ಚೋಪ್ರಾ ಹೇಳಿದ್ದೇನು?
Whats going on ? A Collab between Neeraj Chopra and P V Sindhu ? pic.twitter.com/Ln5ADwKGQU
— Just Badminton (@BadmintonJust) February 6, 2024
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದೇ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ಗೆ ಸಿದ್ಧತೆ ಆರಂಭಿಸಿರುವ ನೀರಜ್ ಇಲ್ಲಿಯೂ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಗೆದ್ದರೆ ಸತತ 2ನೇ ಒಲಿಂಪಿಕ್ಸ್ ಚಿನ್ನ ಗೆದ್ದ ಸಾಧಕರಾಗಲಿದ್ದಾರೆ. ಸದ್ಯ ಅವರ ಪ್ರದರ್ಶನ ನೋಡುವಾಗ ಚಿನ್ನ ಗೆಲ್ಲುವುದು ಖಚಿತ ಎನ್ನಬಹುದು.
ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಕಳೆದ ಒಂದುವರೆ ವರ್ಷಗಳಿಂದ ತಮ್ಮ ಲಯ ಕಳೆದುಕೊಂಡು ಆಡಿದ ಹಲವು ಟೂರ್ನಿಗಳಲ್ಲಿ ಕನಿಷ್ಠ ಮೂರನೇ ಸುತ್ತು ಕೂಡ ಪ್ರವೇಶಿಸಲಾಗದೆ ಸೋಲು ಕಾಣುತ್ತಿದ್ದಾರೆ. ಹೀಗಾಗಿ ಈ ಬಾಎರಿ ಅವರ ಮೇಲೆ ಒಲಿಂಪಿಕ್ಸ್‌ನಲ್ಲಿ ಪದಕ ಭರವಸೆ ಇಡುವುದು ಕೊಂಚ ಕಷ್ಟ ಎನ್ನಲಡ್ಡಿಯಿಲ್ಲ.