ಬೆಂಗಳೂರು: ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ವಿಕೆಟ್ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಆಯ್ಕೆಯಾಗದಿರುವ ಬಗ್ಗೆ ಚರ್ಚೆಗಳು ಜೋರು ನಡೆದಿವೆ. ಕಿಶ ನ್ಅವರನ್ನು ಹೊರಗಿಟ್ಟಿರುವುದು ಯಾಕೆ ಎಂದು ಆಯ್ಕೆಗಾರರಿಗೆ ಹಲವರು ಪ್ರಶ್ನಿಸಿದ್ದಾರೆ. ಅನುಪಸ್ಥಿತಿಯ ಹಿಂದಿನ ನಿಜವಾದ ಕಾರಣಗಳ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಅನೇಕರು ಆರಂಭದಲ್ಲಿ ಇದು ಮಾನಸಿಕ ಆರೋಗ್ಯ ವಿರಾಮಕ್ಕೆ ಸಂಬಂಧಿಸಿದೆ ಎಂದು ನಂಬಿದ್ದರೂ, ಇತ್ತೀಚಿನ ವರದಿಗಳು ಶಿಸ್ತು ಉಲ್ಲಂಘನೆಯ ಕಾರಣಕ್ಕೆ ಇರಬಹುದು ಎಂದು ಹೇಳಿದ್ದಾರೆ.
ಇಶಾನ್ ಕಿಶನ್ ಚರ್ಚೆಯ ವ್ಯಾಪ್ತಿಯೊಳಗೆ ಬಂದಿರುವುದು ಇದೇ ಮೊದಲಲ್ಲ. 2016 ರಲ್ಲಿ, ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕರಾಗಿದ್ದ ಯುವ ಕ್ರಿಕೆಟಿಗನನ್ನು ರಾಶ್ ಡ್ರೈವಿಂಗ್ ಕಾರಣಕ್ಕೆ ಪಾಟ್ನಾದಲ್ಲಿ ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ನಡೆದ ಜೂನಿಯರ್ ವಿಶ್ವಕಪ್ಗೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿತ್ತು. ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಅಪಾಯಕ್ಕೆ ಸಿಲುಕಿಸಿತ್ತು. ಕೊನೆಗೂ ಅವರು ಬಚಾವಾಗಿದ್ದರು.
ಇದನ್ನೂ ಓದಿ : Rahul Dravid : ಬರ್ತ್ಡೇ ಬಾಯ್ ದ್ರಾವಿಡ್ ಹೊಂದಿರುವ ಹಲವು ದಾಖಲೆಗಳ ವಿವರ ಇಲ್ಲಿದೆ
ಬಿಹಾರ ಮೂಲದ ಇಶಾನ್ ಜಾರ್ಖಂಡ್ ಪರ ಆಡುವ ವೇಳೆ ತನ್ನ ತಂದೆಯ ಕಾರನ್ನು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿಕೊಂಡು ಹೋಗಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಅದರಲ್ಲಿದ್ದವರು ಗಾಯಗೊಂಡಿದ್ದರು. ಪ್ರಕರಣ ದಾಖಲಾಗದಿದ್ದರೂ, ಕೋಪಗೊಂಡ ಸ್ಥಳೀಯರು ಕಿಶನ್ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತ್ತು. ಕಿಶನ್ ಅವರ ತಂದೆ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಮತ್ತು ಆಟೋ ರಿಕ್ಷಾ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಬಳಿಕ ಜಗಳ ಕೊನೆಗೊಂಡಿತ್ತು. ಆದರೆ ಪೊಲೀಸರು ಇಶಾನ್ ಕಿಶನ್ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದರು. ಅವರು ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಗಿತ್ತು.
ಅಶಿಸ್ತು ಕಾರಣವೇ?
ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡ ಬಳಿಕವೂ ಇಶಾನ್ ಅಶಿಸ್ತ್ರು ತೋರುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಕಿಶನ್ ಅವರನ್ನು ಇತ್ತೀಚೆಗೆ ರಾಷ್ಟ್ರೀಯ ತಂಡದಿಂದ ಹೊರಗಿಡಲಾಗಿದೆ. ಕಳೆದ ಕೆಲವು ವಾರಗಳಲ್ಲಿನ ಶಿಸ್ತು ನಿಯಮಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. ತೋರುತ್ತದೆ. ಮಾನಸಿಕ ಆಯಾಸದಿಂದಾಗಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಗುಳಿದ ನಂತರ ಆಯ್ಕೆಗೆ ಲಭ್ಯವಿದ್ದರೂ, ಕಿಶನ್ ಅವರನ್ನು ಆಯ್ಕೆದಾರರು ಕಡೆಗಣಿಸಿದ್ದರು.
ಕಿಶನ್ ಅವರ ಶಿಸ್ತು ಉಲ್ಲಂಘನೆಯ ವಿಚಾರ 2016ರ ಘಟನೆಯತ್ತ ಹೊರಳುವಂತೆ ಮಾಡಿದೆ. ಅವರ ಶಿಸ್ತು ಉಲ್ಲಂಘನೆಯ ಹವ್ಯಾಸ ಇದೆಯೆಂಬುದನ್ನು ಸಾಬೀತುಪಡಿಸಿದೆ.
ಪಾರ್ಟಿ ಮಾಡಿದ್ದ ಆರೋಪ?
ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆದರೆ, ಆಡುವ ಅವಕಾಶ ಪಡೆದಿರಲಿಲ್ಲ. ಆದಾಗ್ಯೂ ಅವರು ಟೆಸ್ಟ್ ತಂಡದ ಬ್ಯಾಕ್ಅಪ್ನಲ್ಲಿದ್ದರು. ಆದರೆ, ಸರಣಿಯ ಮಧ್ಯದಲ್ಲಿ ಅವರು ಮಾನಸಿಕ ಸಮಸ್ಯೆಯ ವಿಷಯವನ್ನು ಮುನ್ನೆಲೆಗೆ ತಂದು ಅಲ್ಲಿಂದ ಭಾರತಕ್ಕೆ ವಾಪಸ್ ತೆರಳುವುದಾಗಿ ಅನುಮತಿ ಪಡೆದುಕೊಂಡಿದ್ದರು. ಹೀಗಾಗಿ ಕೊನೇ ಕ್ಷಣದಲ್ಲಿ ಕೆ. ಎಸ್ ಭರತ್ ಅವರನ್ನು ಬಿಸಿಸಿಐ ದಕ್ಷಿಣ ಆಫ್ರಿಕಾಗೆ ಕಳುಹಿಸಿತ್ತು. ರಜೆ ಪಡೆದಿದ್ದ ಇಶಾನ್ ನೆರವಾಗಿ ಭಾರತಕ್ಕೆ ಬರುವ ಬದಲು ದುಬೈನಲ್ಲಿ ಇಳಿದು ಪಾರ್ಟಿಗೆ ಹೋಗಿದ್ದರು. ಇದು ಶಿಸ್ತು ಕ್ರಮದ ಉಲ್ಲಂಘನೆಯಾಗಿರುವ ಕಾರಣ ಅವರನ್ನು ತಂಡಕ್ಕೆ ಪರಿಗಣಿಸಿಲ್ಲ ಎಂಬುದಾಗಿ ವರದಿಯಾಗಿದೆ.