ಬೆಂಗಳೂರು: ಕ್ರಿಕೆಟ್ ಆಟದಲ್ಲಿ ಬ್ಯಾಟರ್ಗಳು ನಾನಾ ಬಗೆಯಲ್ಲಿ ಔಟ್ ಆಗುತ್ತಾರೆ. ಬೌಲ್ಡ್, ಕ್ಯಾಚ್, ರನ್ಔಟ್, ಸ್ಟಂಪ್ಡ್, ಹಿಟ್ವಿಕೆಟ್, ಎಲ್ಬಿಡಬ್ಲ್ಯು ಆಗಿ ಪೆವಿಲಿಯನ್ ಸೇರುತ್ತಾರೆ. ಆದರೆ, ಆಟದ ನಿಯಮದಲ್ಲಿ ಇನ್ನೂ ಹಲವಾರು ಬಗೆಯ ಔಟ್ಗಳಿವೆ. ಆದರೆ ಅವೆಲ್ಲವೂ ಅಪರೂಪದಲ್ಲಿ ಅಪರೂಪ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹಲವು ದಶಕಗಳ ಇತಿಹಾಸ ಇದ್ದರೂ ಕೆಲವೊಂದು ರೀತಿಯಲ್ಲಿ ಬ್ಯಾಟರ್ಗಳು ಇನ್ನೂ ಔಟ್ ಆಗಿಲ್ಲ. ಯಾಕೆಂದರೆ ಕೆಲವೊಂದು ಕ್ರೀಡಾಸ್ಫೂರ್ತಿಯ ಟ್ಯಾಗ್ ಹೊತ್ತುಕೊಂಡಿದ್ದರೆ ಇನ್ನೂ ಕೆಲವು ಔಟ್ಗಳಿಗೆ ಅವಕಾಶ ಸಿಗುವುದೇ ಅಪರೂಪ. ಇಂಥ ಪರಿಸ್ಥಿತಿಯ ನಡುವೆ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ವಿಶ್ವ ಕಪ್ ಪಂದ್ಯದ (ICC World Cup 2023) ವೇಳೆ ಲಂಕಾದ ಬ್ಯಾಟರ್ ಏಂಜೆಲೋ ಮ್ಯಾಥ್ಯೂಸ್ ವಿಲಕ್ಷಣ ರೀತಿಯಲ್ಲಿ ಔಟ್ ಆಗಿದ್ದಾರೆ. ಅದುವೇ ಟೈಮ್ಡ್ ಔಟ್. ಅಂದರೆ ಒಬ್ಬ ಬ್ಯಾಟ್ಸಮ್ನ ಔಟ್ ಆದ ಬಳಿಕ ಮತ್ತೊಬ್ಬ 3 ನಿಮಿಷದ ಒಳಗೆ ಬಂದು ಬ್ಯಾಟಿಂಗ್ ಆರಂಭಿಸದಿದ್ದರೆ ಆತ ಔಟ್ ಎಂದು ಎನಿಸಿಕೊಳ್ಳುವುದು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂಸ್ ಆಟ ಆರಂಭಿಸಲು ತಡ ಮಾಡಿದ್ದಾರೆ ಎಂದು ಬಾಂಗ್ಲಾ ಆಟಗಾರರು ಮನವಿ ಮಾಡಿದ ಬಳಿಕ ಅಂಪೈರ್ ಔಟ್ ಕೊಟ್ಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೈಮ್ಡ್ ಆಗಿರುವ ಮೊದಲ ಬ್ಯಾಟರ್ ಏಂಜೆಲೋ ಮ್ಯಾಥ್ಯೂಸ್. ಈ ಮೂಲಕ ಅವರು ಈ ವಿಚಾರದಲ್ಲಿ ಕುಖ್ಯಾತಿ ಗಿಟ್ಟಿಸಿಕೊಂಡಿದ್ದಾರೆ. ಶ್ರೀಲಂಕಾದ ಅನುಭವಿ ಆಲ್ರೌಂಡರ್ 1877ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಸ್ತಿತ್ವ ಪಡೆದುಕೊಂಡ ನಂತರ ಮೊದಲ ಬಾರಿಗೆ ಟೈಮ್ಡ್ ಔಟ್ ಆದರು.
ಏಂಜೆಲೊ ಮ್ಯಾಥ್ಯೂಸ್ ಅವರ ವಿವಾದಾತ್ಮಕ ಔಟ್ ಬಗ್ಗೆ ಹೇಳುವುದಾದರೆ ಎಂಸಿಸಿಯ ಕಾನೂನಿನ ಪ್ರಕಾರ, ಒಂದು ವಿಕೆಟ್ ಬಿದ್ದ ನಂತರ ಮೂರು ನಿಮಿಷಗಳಲ್ಲಿ ಸ್ಟ್ರೈಕ್ ತೆಗೆದುಕೊಳ್ಳದ ಕಾರಣ ಬ್ಯಾಟ್ಸ್ಮನ್ ಮೈದಾನವನ್ನು ತೊರೆಯಬೇಕಾಗುತ್ತದೆ. ಆಟದ ಪರಿಸ್ಥಿತಿಗಳು ಆಟಗಾರನು ಎರಡು ನಿಮಿಷಗಳಲ್ಲಿ ಸ್ಟ್ರೈಕ್ ತೆಗೆದುಕೊಳ್ಳಲು ಸಿದ್ಧನಾಗಿರಬೇಕು ಎಂದು ಹೇಳಿದೆ. ಹೀಗಾಗಿ ಮ್ಯಾಥ್ಯೂಸ್ ಪ್ರಕರಣದಲ್ಲಿ ಎಂಸಿಸಿಯ ಕಾನೂನುಗಳಿಗಿಂತ ಆಟದ ಪರಿಸ್ಥಿತಿಗಳಿಗೆ ಆದ್ಯತೆ ಇತ್ತು.
ಇದನ್ನೂ ಓದಿ: Angelo Mathews: ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಟರ್ ‘ಟೈಮ್ಡ್ ಔಟ್’; ಏನಿದು ನಿಯಮ?
ಮ್ಯಾಥ್ಯೂಸ್ ಮೈದಾನದಿಂದ ಹೊರನಡೆಯುತ್ತಿದ್ದಂತೆ ಕೋಪಗೊಂಡರು. ಈ ವಿಚಾರ ಕ್ರಿಕೆಟ್ ದೇಶಗಳಲ್ಲಿ ಚರ್ಚೆ ಪ್ರಾರಂಭವಾಯಿತು. ಏಕೆಂದರೆ ಕ್ರಿಕೆಟ್ ಪ್ರಾರಂಭವಾದ ಹದಿನೈದು ದಶಕಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಂತಹ ಔಟ್ ಕಂಡುಬಂದಿಲ್ಲ. ಆದಾಗ್ಯೂ, ಹೆಚ್ಚಿನ ಸಮಯವನ್ನು ವ್ಯರ್ಥ ಮಾಡದೆ ಶ್ರೀಲಂಕಾದ ಆಟಗಾರ ಹೊಸ ಬ್ಯಾಟ್ಸ್ಮನ್ಗೆ ದಾರಿ ಮಾಡಿಕೊಡಲು ನಿರ್ಧರಿಸಿದರು. ಇದರೊಂದಿಗೆ 35 ವರ್ಷದ ಆಟಗಾರ ಸ್ಟ್ರೈಕರ್ ಕೊನೆಯಲ್ಲಿ ಎಸೆತವನ್ನು ಎದುರಿಸದೇ ಔಟ್ ಆದ ಮೊದಲ ಬ್ಯಾಟರ್ ಎಂಬ ಕುಖ್ಯಾತಿಗೆ ಪಾತ್ರರಾದರು.
ಯಾವ ಔಟ್ಗಳು ಮೊದಲ ಬಾರಿಗೆ ಯಾವ ವರ್ಷ ನಡೆಯಿತು?
ಕ್ಯಾಚ್ – 1877
ಬೌಲ್ಡ್ – 1877
ರನ್ ಔಟ್ – 1877
ಎಲ್ಬಿಡಬ್ಲ್ಯು – 1877.
ಸ್ಟಂಪ್ಡ್ – 1877.
ಹಿಟ್ ವಿಕೆಟ್ – 1884.
ರಿಟೈರ್ಡ್ ಹರ್ಟ್ – 1877.
ಫೀಲ್ಡಿಂಗ್ಗೆ ಅಡಚಣೆ – 1951.
ಚೆಂಡನ್ನು ತಡೆಯುವುದು – 1957.
ರಿಟೈಯರ್ಡ್ ಔಟ್ – 2001.
ಎರಡು ಬಾರಿ ಚೆಂಡನ್ನು ಹೊಡೆಯುವುದು – 2023.
ಟೈಮ್ಡ್ ಔಟ್ – 2023.
ನಿಯಮ ಏನಿದೆ?
40.1.1 ಟೈಮ್ಡ್ ಔಟ್ – ” ವಿಕೆಟ್ ಪತನ ಅಥವಾ ಬ್ಯಾಟ್ಸ್ ಮನ್ ನಿವೃತ್ತಿಯ ನಂತರ, ಒಳಬರುವ ಬ್ಯಾಟ್ಸ್ ಮನ್, ಸಮಯದ ಒಳಗೆ ಚೆಂಡನ್ನು ಸ್ವೀಕರಿಸಲು ಸಿದ್ಧನಾಗಿರಬೇಕು. ಈ ನಿಯಮ ಪೂರೈಸದಿದ್ದರೆ, ಒಳಬರುವ ಔಟ್ ಎಂದು ಹೇಳಲಾಗುತ್ತದೆ.
40.1.2 – ಪಂದ್ಯ ನಿಗದಿತ ಸಮಯಕ್ಕೂ ಹೆಚ್ಚು ಅವಧಿ ಸಾಗಿದಾಗ ಅಂಪೈರ್ಗಳು ಬ್ಯಾಟರ್ ಚೆಂಡನ್ನು ಎದುರಿಸುವ ಸಮಯವನ್ನು ನಿಗದಿ ಮಾಡಲಾಗುತ್ತದೆ. ಇಲ್ಲಿ ಅಂಪೈರ್ಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುತ್ತದೆ.