Site icon Vistara News

Hardik Pandya : ಹಾರ್ದಿಕ್ ಪಾಂಡ್ಯ ಫಿಟ್ನೆಸ್​ ಬಗ್ಗೆ ಸಿಕ್ಕಿತು ಹೊಸ ಅಪ್ಡೇಟ್​​

Hardik Pandya

ಬೆಂಗಳೂರು : ಪಾದದ ಗಾಯದಿಂದಾಗಿ ಐಸಿಸಿ ವಿಶ್ವಕಪ್ 2023ರಿಂದ ಹೊರಕ್ಕೆ ಬಿದ್ದಿರುವ ಭಾರತದ ಸ್ಟ್ಯಾಂಡ್-ಇನ್ ಟಿ20 ಐ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರು ಕಿರು ಸ್ವರೂಪದ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಆ ಸರಣಿಯಲ್ಲಿ ಆಡುವ ಉದ್ದೇಶದಿಂದ ಅವರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಭಾರತದ ತಂಡದ ವಿಶ್ವ ಕಪ್​ ಲೀಗ್ ಹಂತದ ಅಭಿಯಾನದಿಂದ ಹೊರಗುಳಿದ ಅವರು ಅತ್ಯುತ್ತಮ ಅವಕಾಶವನ್ನು ಕಳೆದುಕೊಂಡಿದ್ದಾರೆ. ಬಾಂಗ್ಲಾದೇಶ ತಂಡದ ವಿರುದ್ಧ ಆಡುವ ವೇಳೆ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅಲ್ಲಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿದ್ದ ಅವರು ಮುಂದಿನ ತಿಂಗಳ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜುಗೊಳ್ಳಲಿದ್ದಾರೆ ಎಂಬ ಮಾಹಿತಿ ಬಂದಿದೆ.

ಟೀಮ್ ಇಂಡಿಯಾದ 3ಟಿ 20, 3 ಏಕದಿನ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 2 ಪಂದ್ಯಗಳ ಪ್ರವಾಸ ಹಿನ್ನೆಲೆಯಲ್ಲಿ ನೇರ ಪ್ರಸಾರ ಸಂಸ್ಥೆ ಸ್ಟಾರ್​ ಸ್ಪೋರ್ಟ್ಸ್​​ ಪ್ರೊಮೊ ಬಿಡುಗಡೆ ಮಾಡಿದೆ. ಅದರಲ್ಲಿ 30 ವರ್ಷದ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಡಬ್ಯ್ಲುಟಿಸಿ ಮೊದಲ ಹಣಾಹಣಿ

ಟೆಸ್ಟ್ ಸರಣಿಯು ಟೀಮ್ ಇಂಡಿಯಾದ ಡಬ್ಲ್ಯುಟಿಸಿ 2023-25 ಅಭಿಯಾನದ ಅಂಗವಾಗಿದೆ. ಹೀಗಾಗಿ ರೋಹಿತ್ ಶರ್ಮಾ ಪಡೆಗೆ ರೈನ್​ಬೊ ರಾಷ್ಟ್ರದಲ್ಲಿ ಚೊಚ್ಚಲ ವಿಜಯ ಬಯಸುತ್ತಿದೆ. ಸೀಮಿತ ಓವರ್​ಗಳ ವಿಭಾಗವು ಹೊಸ ಏಕದಿನ ವಿಶ್ವಕಪ್ ಋತುವನ್ನು ಪ್ರವೇಶಿಸುತ್ತದೆ. 2024ರ ಟಿ20 ವಿಶ್ವಕಪ್​ಗೆ ಮುಂಚಿತವಾಗಿ ಭಾರತ ತಂಡ ತನ್ನ ಹೊಸ ಟಿ20 ಐ ಸೆಟ್ ಅಪ್ ಮಾಡಿಕೊಳ್ಳುವುದಕ್ಕೂ ಇದೊಂದು ಅವಕಾಶವಾಗಿದೆ.

ಸೋಲಿನಿಂದ ಹೊರಬರಲು ಅವಕಾಶ

ಪಾಂಡ್ಯ ಅವರ ದೃಷ್ಟಿಕೋನದಿಂದ ಹೇಳುವುದಾದರೆ ಅವರ ನಾಯಕತ್ವದ ಭಾರತ ತಂಡವು ಕಳೆದ ಆಗಸ್ಟ್​ನಲ್ಲಿ ಕೆರಿಬಿಯನ್​ ನಾಡಲ್ಲಿ ನಿರಾಶಾದಾಯಕ 3-2 ಸರಣಿ ಸೋಲಿ ಒಳಗಾಗಿತ್ತು. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಆ ಸೋಲಿನ ಸುಳಿಯಿಂದ ಹೊರಕ್ಕೆ ಬರಬೇಕಾಗಿದೆ.

ಇದನ್ನೂ ಓದಿ: ICC World Cup 2023 : ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ವಾಟ್ಸ್​ಆ್ಯಪ್​ ಮೆಸೇಜ್​​ ಸೋರಿಕೆ

ನವೆಂಬರ್ 23ರಿಂದ ವಿಶ್ವಕಪ್ ನಂತರ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ತವರಿನಲ್ಲಿ ಆಡಲಿದೆ. ಆದರೆ ಆಯ್ಕೆದಾರರು ನಾಯಕ ಮತ್ತು ಪ್ರಮುಖ ವೇಗದ ಬೌಲಿಂಗ್ ಆಲ್ರೌಂಡರ್ ಸೇರಿದಂತೆ ಎಲ್ಲಾ ಹಿರಿಯ ಆಟಗಾರರಿಗೆ ಆ ಸರಣಿಯಿಂದ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ. ಈ ವೇಳೆ ಪಾಂಡ್ಯಗೂ ಗಾಯದಿಂದ ಚೇತರಿಸಿಕೊಳ್ಳಲು ವಿರಾಮಕ್ಕಾಗಿ ಹೆಚ್ಚುವರಿ ಸಮಯವನ್ನು ನೀಡುವ ಸಾಧ್ಯತೆಯಿದೆ.

ಪಾಂಡ್ಯ ಅವರ ಮುಂದಿನ ನೇಮಕವು ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸದ ಆರಂಭಿಕ ಮೂರು ಪಂದ್ಯಗಳ ಟಿ 20 ಐ ಸರಣಿಯಾಗಿರಬಹುದು. ಅಲ್ಲಿ ಯುಎಸ್ಎ ಮತ್ತು ಕೆರಿಬಿಯನ್​​ನಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್​​ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಸ್ಪಷ್ಟ ರೂಪವನ್ನು ಗಮನಿಸಬಹುದು.

ಕಳೆದ ತಿಂಗಳು ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಪುರುಷರ ಟಿ20 ಕ್ರಿಕೆಟ್​ ಸ್ಪರ್ಧೆಯಲ್ಲಿ ಆಡಿದ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವನ್ನು ಇಲ್ಲಿಗೆ ಆಯ್ಕೆ ಮಾಡಬಹುದು ಎನ್ನಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆಗಾರರು ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

Exit mobile version