Site icon Vistara News

IPL 2023 : ಮುಂಬೈ ಇಂಡಿಯನ್ಸ್​, ಪಂಜಾಬ್​ ಕಿಂಗ್ಸ್​ ಪಂದಯ ನಡೆಯುವುದು ಎಲ್ಲಿ? ಯಾವ ತಂಡ ಬಲಿಷ್ಠ?

Where will the Mumbai Indians, Punjab Kings match be held? Which team is stronger?

#image_title

ಮುಂಬಯಿ: ಐಪಿಎಲ್​ 16ನೇ ಆವೃತ್ತಿಯಲ್ಲಿ ಮೂರು ಗೆಲುವು ಸಂಪಾದಿಸಿ ಆರು ಅಂಕಗಳನ್ನು ಪಡೆದಿರುವ ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್​ ಕಿಂಗ್ಸ್​ ತಂಡದ ನಡುವೆ ಏಪ್ರಿಲ್​ 22ರಂದು ಇಲ್ಲಿನ ವಾಂಖೆಡೆ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಲಿದೆ. ಇದು 2023ನೇ ಆವೃತ್ತಿಯ 31ನೇ ಪಂದ್ಯ ಹಾಗೂ ಶನಿವಾರದ ಡಬಲ್​ ಹೆಡರ್​ನ ಎರಡನೇ ಪಂದ್ಯವಾಗಿದೆ.

ಪಂಜಾಬ್ ತಂಡ ಹಿಂದಿನ ಪಂದ್ಯದದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡಿತ್ತು. ಆ ಪಂದ್ಯದದಲ್ಲಿ ಸ್ಯಾಮ್​ ಕರ್ರನ್​ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಫಿಟ್ನೆಸ್ ಸಮಸ್ಯೆ ಕಾರಣ ಕಾಯಂ ನಾಯಕ ಶಿಖರ್ ಧವನ್​ ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಮತ್ತೆ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ. ಅವರು ಆಡಿದರೆ ಪಂಜಾಬ್​ ತಂಡದ ಅಗ್ರ ಬ್ಯಾಟಿಂಗ್​ ಕ್ರಮಾಂಕದ ಬಲ ಹೆಚ್ಚಲಿದೆ. ಆರ್​ಸಿಬಿ ವಿರುದ್ದ24 ರನ್​ಗಳ ಸೋಲು ಕಂಡಿರುವ ಪಂಜಾಬ್​ ತಂಡಕ್ಕೆ ಈ ಬಾರಿ ಗೆಲುವಿನ ಹಳಿಗೆ ಮರಳುವ ಉತ್ಸಾಹ ಇದೆ. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹಾಗೂ ಬೌಲಿಂಗ್​ ಸಮಸ್ಯೆಯನ್ನು ಸುಧಾರಿಸಿಕೊಳ್ಳಬೇಕಾಗುತ್ತದೆ. ಶಿಖರ್ ಧವನ್, ಲಿಯಾಮ್ ಲಿವಿಂಗ್ ಸ್ಟನ್, ಜಿತೇಶ್ ಶರ್ಮಾ, ಅರ್ಶ್​​ದೀಪ್​ ಸಿಂಗ್​ ಹಾಗೂ ಸ್ಯಾಮ್ ಕರ್ರನ್ ಮಿಂಚಿದರೆ ಪಂಜಾಬ್​ ಜಯ ಸುಲಭ.

ಮುಂಬೈ ಇಂಡಿಯನ್ಸ್ ನ ಅನುಭವಿ ವೇಗಿ ಜೋಫ್ರಾ ಆರ್ಚರ್ ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ಸೂಚನೆಗಳಿವೆ. ಕಳೆದ 3 ಪಂದ್ಯಗಳಿಂದಲೂ ಮುಂಬೈನ ತಂಡ ಬ್ಯಾಟರ್​ಗಳು ಲಯ ಕಂಡುಕೊಂಡಿದ್ದಾರೆ. ಹೀಗಾಗಿ ಮತ್ತೊಂದು ಬಾರಿ ಮಿಂಚುವ ಸಾಧ್ಯತೆಗಳಿವೆ. ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ ಬ್ಯಾಟಿಂಗ್​ನಲ್ಲಿ ಮಿಂಚಿದ್ದಾರೆ. ಅನುಭವಿ ಸ್ಪಿನ್ನರ್ ಪಿಯೂಶ್ ಚಾವ್ಲಾ, ರೀಲಿ ಮೆರಿಡಿತ್‌, ಅರ್ಜುನ್ ತೆಂಡೂಲ್ಕರ್ ಬೌಲಿಂಗ್​ನಲ್ಲಿ ತೀವ್ರತೆ ಕಾಪಾಡಿಕೊಂಡಿದ್ದಾರೆ.

ಯಾರಿಗೆ ನೆರವು ಕೊಡಬಹುದು ವಾಂಖೆಡೆ ಪಿಚ್​?

ವಾಂಖೆಡೆ ಸ್ಟೇಡಿಯಂನಲ್ಲಿ ವೇಗದ ಬೌಲರ್‌ಗಳು ಆರಂಭದಲ್ಲಿ ಪಾರಮ್ಯ ಮೆರೆಯಬಹುದು. ಮೊದಲು ಬ್ಯಾಟ್ ಮಾಡುವ ತಂಡ 200 ರನ್​ಗಳ ಸಮೀಪ ಹೋಗಬಹುದು. ಹಾಗಾದೆರ ಮಾತ್ರ ಪೈಪೋಟಿ ನಿರೀಕ್ಷೆ ಮಾಡಬಹುದು. ವಾಖೆಂಡೆಯಲ್ಲಿ ಚೇಸಿಂಗ್ ಸುಲಭ. ಟಾಸ್ ಗೆದ್ದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು. ಈ ಪಿಚ್ ನಲ್ಲಿ ಇದುವರೆಗೂ 104 ಐಪಿಎಲ್ ಹಣಾಹಣಿಗಳು ನಡೆದಿದ್ದು, 56 ಬಾರಿ ಚೇಸಿಂಗ್ ತಂಡ ಗೆದ್ದಿದೆ. 48 ಬಾರಿ ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಗೆಲುವು ದೊರಕಿದೆ.

ಸಂಭಾವ್ಯ ತಂಡಗಳು ಇಂತಿವೆ

ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಪ್ರಭಸಿಮ್ರಾನ್​ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರಪ್ರೀತ್ ಬ್ರಾರ್, ನೇಥನ್ ಎಲೀಸ್/ ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷದೀಪ್ ಸಿಂಗ್.

ಮುಂಬೈ ಇಂಡಿಯನ್ಸ್:ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ರೈಲೀ ಮೆರೆಡಿತ್.

Exit mobile version