Site icon Vistara News

IPL Auction | ಐಪಿಎಲ್​ ಮಿನಿ ಹರಾಜು ಪ್ರಕ್ರಿಯೆ ನಡೆಯೋದು ಎಲ್ಲಿ? ಯಾವ ಟಿವಿಯಲ್ಲಿ ನೇರ ಪ್ರಸಾರ?

IPL mini auction

ಕೊಚ್ಚಿ : ಐಪಿಎಲ್​ 2023ನೇ (IPL Auction) ಆವೃತ್ತಿಗೆ ಆಟಗಾರರ ಆಯ್ಕೆಯಾಗಿ ಶುಕ್ರವಾರ (ಡಿಸೆಂಬರ್​ 23) ಹರಾಜು ಪ್ರಕ್ರಿಯೆ ನಡೆಯಲಿದೆ. 405 ಆಟಗಾರರ ಅಂತಿಮ ಪಟ್ಟಿಯ 10 ಫ್ರಾಂಚೈಸಿಗಳ ಮುಂದಿದ್ದು, ಉಳಿದಿರುವ ಗರಿಷ್ಠ 87 ಸ್ಥಾನಗಳಿಗಾಗಿ ಹರಾಜು ನಡೆಯಲಿದೆ. ಐಪಿಎಲ್ ಅಭಿಮಾನಿಗಳು ಯಾವ ಆಟಗಾರರು ಯಾವ ತಂಡ ಸೇರುತ್ತಾರೆ ಎಂಬ ಕುತೂಹಲ ಹೊಂದಿದ್ದು, ನಾಳೆ ಸಂಜೆಯ ವೇಳೆಗೆ ಪೂರ್ಣ ಮಾಹಿತಿ ಹೊರ ಬೀಳಲಿದೆ.

ಎಲ್ಲಿ ನಡೆಯುತ್ತದೆ ಐಪಿಎಲ್​ ಹರಾಜು : ಮುಂದಿನ ಆವೃತ್ತಿಯ ಐಪಿಎಲ್​ಗಾಗಿ ಹರಾಜು ಪ್ರಕ್ರಿಯೆ ಕೇರಳದ ಕೊಚ್ಚಿಯಲ್ಲ ನಡೆಯಲಿದೆ.

ಯಾವಾಗ ಐಪಿಎಲ್​ ಮಿನಿ ಹರಾಜು ನಡೆಯಲಿದೆ? : 2023ನೇ ಆವೃತ್ತಿಯ ಐಪಿಎಲ್​ಗೆ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್​ 23ರಂದು ಆಯೋಜನೆಗೊಂಡಿದೆ.

ಹರಾಜು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ? : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ಹರಾಜು ಪ್ರಕ್ರಿಯೆ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ.

ಹರಾಜನ್ನು ಯಾವ ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತವೆ?: ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಹರಾಜು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ.

ಲೈವ್ ಸ್ಟ್ರೀಮಿಂಗ್ ಎಲ್ಲಿ ನೋಡಬಹುದು? ಹರಾಜು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್​ ಸ್ಟ್ರೀಮ್​ ಆಗಲಿದೆ.

ಇದನ್ನೂ ಓದಿ | IPL Auction 2023 | ಐಪಿಎಲ್​ ಆಟಗಾರರ ಮಿನಿ ಹರಾಜಿಗೆ ಕ್ಷಣಗಣನೆ ಆರಂಭ; ಯಾರಿಗೆ ಒಲಿಯಲಿದೆ ಬಂಪರ್ ಮೊತ್ತ​!

Exit mobile version