ಬೆಂಗಳೂರು: ಐಪಿಎಲ್ 2023ರ ಲೀಗ್ ಹಂತದ ಅಂತಿಮ ದಿನದಂದು ಗುಜರಾತ್ ಟೈಟನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಅಂತಿಮ ಪ್ಲೇಆಫ್ ಸ್ಥಾನ ಪಡೆದುಕೊಂಡವು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನಕ್ಕೆ ಪಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನಕ್ಕೆ ಇಳಿಯಿತು. ಆರ್ಸಿಬಿ ಲೀಗ್ನ ಅಂತಿಮ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಿದ್ದರೆ ಪ್ಲೇಆಫ್ಗೆ ಪ್ರವೇಶ ಪಡೆಯಬಹುದಾಗಿತ್ತು. ಆದರೆ, ಆರ್ಸಿಬಿ 6 ವಿಕೆಟ್ಗಳಿಂದ ಸೋತು ನಿರಾಸೆ ಎದುರಿಸಿತು.
201 ರನ್ಗಳ ಗುರಿ ಬೆನ್ನತ್ತಿದ ಮುಂಬೈ 18 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಗೆದ್ದಿತು. ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 56 ರನ್ ಗಳಿಸಿ ಅರ್ಧಶತಕ ಬಾರಿಸಿದರು. ಸನ್ರೈಸರ್ಸ್ ಪರ ಭುವನೇಶ್ವರ್ ಕುಮಾರ್ ಹಾಗೂ ಮಯಾಂಕ್ ದಾಗರ್ ತಲಾ 1 ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ಪರ ಮಯಾಂಕ್ ಅಗರ್ವಾಲ್ (46 ಎಸೆತಗಳಲ್ಲಿ 83 ರನ್) ಹಾಗೂ ವಿವ್ರಾಂತ್ ಶರ್ಮಾ (47 ಎಸೆತಗಳಲ್ಲಿ 69) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.
ಮುಂಬೈ ಇಂಡಿಯನ್ಸ್ ಗೆಲುವು ಮತ್ತು ಬೆಂಗಳೂರಿನಲ್ಲಿನಲ್ಲಿ ಸುರಿದ ಮಳೆ ಆರ್ಸಿಬಿ ಅಭಿಮಾನಿಗಳನ್ನು ಚಿಂತೆಗೀಡು ಮಾಡಿತ್ತು. ನಿಂತು ಪಂದ್ಯ ನಡೆಯಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಜೇಯ ಶತಕ (61 ಎಸೆತಗಳಲ್ಲಿ ಅಜೇಯ 101) ಬಾರಿಸುವುದರೊಂದಿಗೆ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. 198 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡದ ಪರ ಶುಬ್ಮನ್ ಗಿಲ್ (52 ಎಸೆತಗಳಲ್ಲಿ 104* ರನ್) ಶತಕ ಬಾರಿಸಿದರು. ಈ ಮೂಲಕ 19.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಆರ್ಸಿಬಿ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.
ಇದನ್ನೂ ಓದಿ : IPL 2023 : ಆರ್ಸಿಬಿಗೆ ಸಿಗದ ಪ್ಲೇಆಫ್ ಅವಕಾಶ, ಐಪಿಎಲ್ ಅಂಕಪಟ್ಟಿ ಈಗ ಹೇಗಿದೆ?
ಈ ಗೆಲುವಿನ ಬಳಿಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡವು 14 ಪಂದ್ಯಗಳಲ್ಲಿ 20 ಅಂಕಗಳೊಂದಿಗೆ ಲೀಗ್ ಹಂತವನ್ನು ಕೊನೆಗೊಳಿಸಿತು, ಸಿಎಸ್ಕೆ (17 ಅಂಕಗಳು) ಎರಡನೇ ಸ್ಥಾನದಲ್ಲಿದೆ. ಎಲ್ಎಸ್ಜಿ (17 ಅಂಕ) ಮೂರನೇ ಸ್ಥಾನ , ಮುಂಬೈ ಇಂಡಿಯನ್ಸ್ (16 ಅಂಕಗಳು) ನಾಲ್ಕನೇ ಸ್ಥಾನದಲ್ಲಿದೆ.
ಐಪಿಎಲ್ 2022ರ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಕ್ವಾಲಿಫೈಯರ್ 1: ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ – ಮೇ 23, ಮಂಗಳವಾರ ಸಂಜೆ 7:30, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಎಲಿಮಿನೇಟರ್: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – ಮೇ 24, ಬುಧವಾರ – ಸಂಜೆ 7:30, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಕ್ವಾಲಿಫೈಯರ್ 2: ಕ್ವಾಲಿಫೈಯರ್ 1ರಲ್ಲಿ ಸೋತವರು ಮತ್ತು ಎಲಿಮಿನೇಟರ್ ವಿಜೇತರು – ಮೇ 26, ಶುಕ್ರವಾರ – ಸಂಜೆ 7:30, ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್.