Site icon Vistara News

ICC World Cup 2023 : ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಸೆಲೆಬ್ರಿಟಿಗಳ ದಂಡು

Celebrity in cricket

ಅಹ್ಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಪ್ರಸ್ತುತ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಈ ವೇಳೆ ಭಾರತೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸಲು ಹಲವಾರು ಸೆಲೆಬ್ರಿಟಿಗಳು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅನುಷ್ಕಾ ಶರ್ಮಾ ಮತ್ತು ಅಥಿಯಾ ಶೆಟ್ಟಿ ಸೇರಿದಂತೆ ಜನಪ್ರಿಯ ವ್ಯಕ್ತಿಗಳು ಈ ಮೆಗಾ ಪಂದ್ಯದ ವೇಳೆ ಪಾಲ್ಗೊಂಡರು.

ಸೆಲೆಬ್ರಿಟಿಗಳು ಪಂದ್ಯಕ್ಕೆ ಹಾಜರಾಗುತ್ತಿರುವುದನ್ನು ಕಂಡು ಹಲವರು ತಮ್ಮ ಪ್ರತಿಕ್ರಿಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಭ ಹಾರೈಕೆ ಶಾರುಖ್ ಖಾನ್ ಅವರು ಗೌರಿ ಖಾನ್ ಅವರೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸುವ ವೀಡಿಯೊ ಇಲ್ಲಿದೆ ಎಂದು ಎಎನ್​​​ಐ ಟ್ವೀಟ್ ಮಾಡಿದೆ. ಗೃಹ ಮಂತ್ರಿ ಅಮಿತ್ ಶಾ, ಗಾಯಕಿ ಆಶಾ ಬೋಂಸ್ಲೆ, ತೆಲುಗು ನಟ ವೆಂಕಟೇಶ್​ ಮತ್ತಿತರರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡರು.

ರನ್​ ಗಳಿಸಲು ಪರದಾಡಿದ ಭಾರತ ತಂಡ

ಅಹಮದಾಬಾದ್​​: ವಿಶ್ವ ಕಪ್​ ಫೈನಲ್​ನಲ್ಲಿ ಭಾರತ ತಂಡದ ಬ್ಯಾಟರ್​ಗಳು ಪರದಾಟ ನಡೆಸಿದ್ದಾರೆ. ಟಾಸ್​ ಸೋತು ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಭಾರತ ತಂಡದ ಆರಂಭದಲ್ಲಿ ವೇಗದ ರನ್​ ಗಳಿಕೆಗೆ ಯತ್ನಿಸಿದರೂ ಬಳಿಕ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಹೀಗಾಗಿ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿದ ಭಾರತ ತಂಡಕ್ಕೆ ಹಿನ್ನಡೆ ಉಂಟಾಯಿತು.

ಇದನ್ನೂ ಓದಿ : ICC World Cup 2023: ಒಂದಾದ ಬಿಜೆಪಿ-ಕಾಂಗ್ರೆಸ್! ರಾಜಕೀಯ ಮರೆಸಿದ ಕ್ರಿಕೆಟ್

ಭಾರತ ತಂಡ ಮೊದಲ 39 ಎಸೆತಗಳಿಗೆ 50 ರನ್ ಬಾರಿಸಿತ್ತು. ಹೀಗಾಗಿ ದೊಡ್ಡ ಮೊತ್ತ ಗ್ಯಾರಂಟಿ ಎಂದು ನಂಬಲಾಗಿತ್ತು. ಆದರೆ ಅದಕ್ಕಿಂತ ಮೊದಲೇ ಶುಭ್​ಮನ್​ ಗಿಲ್​ 4 ರನ್ ಬಾರಿಸಿ ಔಟಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯೂ ರನ್​ ಗತಿ ಇಳಿಕೆಯಾಗದಂತೆ ನೋಡಿಕೊಂಡಿತು. ಆದರೆ, ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಮುಂದಾದ ರೋಹಿತ್​ ಶರ್ಮಾ 47 ರನ್​ಗಳಿಗೆ ಔಟಾದರು. ಅವರು 31 ಎಸೆತಗಳಿಗೆ 47 ರನ್ ಬಾರಿಸಿದ್ದರು. ಆದರೆ, ಆ ಬಳಿಕ ಬ್ಯಾಟ್ ಮಾಡಲು ಬಂದ ಶ್ರೇಯಸ್​ ಅಯ್ಯರ್​​ 4 ರನ್​ ಗೆ ಔಟಾದರು. ಅವರು ಅದಕ್ಕಿಂತ ಮೊದಲು ಅವರು ಒಂದು ಫೋರ್ ಬಾರಿಸಿದ್ದರು.

ರಾಹುಲ್​- ಕೊಹ್ಲಿ ಮೇಲೆ ಒತ್ತಡ

ಮೊದಲ ಮೂರು ವಿಕೆಟ್​​ಗಳು 81 ರನ್​ಗೆ ಪತನಗೊಂಡ ಕಾರಣ ಭಾರತ ತಂಡದ ಮೇಲೆ ಒತ್ತಡ ಬಿತ್ತು. ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ವಿಕೆಟ್​ ಕೀಪರ್​ ಕೆ. ಎಲ್ ರಾಹುಲ್ ಮೇಲೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಬಿತ್ತು. ಬಲಿಕ ಅವರಿಬ್ಬರು 67 ರನ್​ಗಳ ಜತೆಯಾಟವಾಡಿದರು. ಈ ವೇಳೆ ಭಾರತ ತಂಡದ ರನ್ ಗಳಿಕೆ ಕುಸಿತಗೊಂಡಿತ್ತು. 11 ಓವರ್​ಗಳ ಒಳಗೆ ಮೂರು ವಿಕೆಟ್​ ನಷ್ಟ ಮಾಡಿಕೊಂಡಿದ್ದರಿಂದ ವಿಕೆಟ್​ ಕಾಪಾಡುವುದು ಈ ಬ್ಯಾಟರ್​​ಗಲಳ ಪಾಳಿಗೆ ದೊಡ್ಡ ಸವಾಲಾಯಿತು. ಇವರಿಬ್ಬರ ಜತೆಯಾಟದ ವೇಳೆ ಸಿಂಗಲ್ ರನ್​ಗಳೇ ಹೆಚ್ಚು ಗಳಿಕೆಯಾಯಿತು.

ಏತನ್ಮಧ್ಯೆ ವಿರಾಟ್​ ಕೊಹ್ಲಿಯ ವಿಕೆಟ್ ದುರದೃಷ್ಟಕರವಾಗಿ ನಷ್ಟವಾಯಿತು. ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್ ಅವರ ಎಸೆತವನ್ನು ರಕ್ಷಿಸಲು ಮುಂದಾದ ಅವರು ಇನ್​ಸೈಡ್ ಎಜ್​ ಆಗಿ ಬೌಲ್ಡ್ ಆದರು. ಈ ವೇಳೆ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಯಾಕೆಂದರೆ ಮುಂದೆ ಆಡಲು ಬಂದ ರವೀಂದ್ರ ಜಡೇಜಾ 9 ರನ್​ಗಳಿಗೆ ಔಟ್ ಆದರು.

ಈ ರನ್ ಸಾಕೇ?

ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಪರಿಣಾಮ ಇರುತ್ತದೆ. ಬೌಲಿಂಗ್ ಮಾಡಲು ಕಷ್ಟ ಎಂಬ ಕಾರಣಕ್ಕೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೊದಲು ಫೀಲ್ಡಿಂಗ್ ಮಾಡಿದ್ದರು. ಹೀಗಾಗಿ 250 ರನ್​ಗಳಿಗಿಂತ ಕಡಿಮೆ ಮೊತ್ತ ಗೆಲುವಿಗೆ ಸಾಕಾಗಉತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಭಾರತ ತಂಡ 270ಕ್ಕಿಂತ ಹೆಚ್ಚು ರನ್ ಮಾಡಿದರೆ ಗೆಲುವು ಪಡೆಯು ಸಾಧ್ಯತೆಗಳು ಇವೆ. ಕ್ರಿಕೆಟ್​ ಪಂಡಿತರ ವಿಶ್ಲೇಷಣೆ ಪ್ರಕಾರ ಪಿಚ್​ ಸ್ವಲ್ಪ ನಿಧಾನಗತಿಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಬೌಂಡರಿ ಸಿಕ್ಸರ್​ಗಳನ್ನು ಹೊಡೆಯಲು ಸಾಧ್ಯವಿಲ್ಲ. ಹಾಗಾದರೆ 250ಕ್ಕಿಂತ ಹೆಚ್ಚಿನ ರನ್​ ದಾಟುವುದು ಆಸೀಸ್​ ಪಾಲಿಗೆ ಸವಾಲಾಗಬಹುದು. ಆದರೆ ಭಾರತ ತಂಡ ಅಷ್ಟೊಂದು ದೊಡ್ಡ ಮೊತ್ತ ಪೇರಿಸುವುದೇ ಎಂಬುದು ಅಭಿಮಾನಿಗಳ ಪಾಲಿಗೆ ಕೌತುಕದ ವಿಷಯ.

Exit mobile version