ಮುಂಬಯಿ : ಐಪಿಎಲ್ ಆಡಳಿತ ಮಂಡಳಿ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಗೆ ಆಟಗಾರರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. 405 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ. ಫ್ರಾಂಚೈಸಿಗಳಲ್ಲಿ ಖಾಲಿಯಾಗಿರುವ 87 ಸ್ಥಾನಕ್ಕೆ ಇವರ ನಡುವೆ ಹರಾಜು ನಡೆಯಲಿದೆ.
ಮಂಗಳವಾರ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಒಬ್ಬರು ಹಿರಿಯ ಹಾಗೂ ಇನ್ನೊಬ್ಬರು ಕಿರಿಯ ಕ್ರಿಕೆಟಿಗರಿದ್ದಾರೆ. ಅವರಿಬ್ಬರು ಈ ಬಾರಿಯ ಹರಾಜಿನ ಆಕರ್ಷಣೆ ಎನಿಸಿಕೊಳ್ಳಲಿದ್ದಾರೆ.
ಅಫಘಾನಿಸ್ತಾನ ತಂಡದ ಆಫ್ ಸ್ಪಿನ್ನರ್ ಅಲ್ಲಾ ಮೊಹಮ್ಮದ್ ಘಜ್ನಾಫರ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದಾರೆ. ಅವರು 2007ರ ಜುಲೈನಲ್ಲಿ ಜನಿಸಿದ್ದಾರೆ. 15 ವರ್ಷದ ಅವರನ್ನು ಯಾರು ತಮ್ಮ ತಂಡಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಘಜ್ನಾಫರ್ ಐಪಿಎಲ್ನ ಉದ್ಘಾಟನಾ ಆವೃತ್ತಿ ನಡೆಯುವ ಒಂದು ವರ್ಷ ಮೊದಲು ಜನಿಸಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ವಿಶೇಷ ಆಕರ್ಷಣೆ ಎನಿಸಿಕೊಳ್ಳಲಿದ್ದಾರೆ.
ಇದೇ ವೇಳೆ 40 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಭಾವಿ ಸ್ಪಿನ್ನರ್ ಆಗಿರುವ ಅವರಿಗೂ ಫ್ರಾಂಚೈಸಿಗಳು ಹೂಡಿಕೆ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ | IPL 2023 | ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್, ಕ್ಯಾಮೆರೂನ್, ಮಯಾಂಕ್; 405 ಕ್ರಿಕೆಟಿಗರ ಅಂತಿಮ ಪಟ್ಟಿ ಪ್ರಕಟ