Site icon Vistara News

ದಕ್ಷಿಣ ಆಫ್ರಿಕಾ ಸರಣಿ ಬಳಿಕ ಟಿ20ಯಿಂದ ಯಾರು ಔಟ್?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಜೂನ್‌ 9ರಿಂದ ಟಿ 20 ಸರಣಿ ಆರಂಭವಾಗಿದೆ. ಮುಂಬರಲಿರುವ ಟಿ 20 ವಿಶ್ವಕಪ್‌ಗೆ ಈ ಸರಣಿ ಅಭ್ಯಾಸ ಪಂದ್ಯವಾಗಲಿದೆ. ಈ ಸರಣಿಗೆ ಆಯ್ಕೆಯಾಗಿರುವ ಆಟಗಾರರು ಮುಂದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುತ್ತಾರೋ? ಅಥವಾ ಇದು ಅವರ ಕೊನೆಯ ಸರಣಿ ಆಗಲಿದೆಯೋ ಎಂದು ನಿರ್ಣಯವಾಗಲಿದೆ.

ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಈ ಸರಣಿಯಲ್ಲಿ ಆಟಗಾರರು ಪೂರ್ಣ ಪರಿಶ್ರಮದಿಂದ ಆಟವಾಡಬೇಕಿದೆ. ಈ ಸರಣಿಯ ಬಳಿಕ ಯಾವ ಆಟಗಾರರು ನಿವೃತ್ತಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ನಿವೃತ್ತಿ ಪಡೆಯುವ ಸಾಧ್ಯತೆಯಿರುವ ಮೂವರು ಆಟಗಾರರು

1. ಭುವನೇಶ್ವರ್‌ ಕುಮಾರ್‌
‌ಭುವನೇಶ್ವರ್‌ ಕುಮಾರ್‌ ಇತ್ತೀಚೆಗೆ ಅನೇಕ ಬಾರಿ ಗಾಯಗೊಂಡಿದ್ದು, ಹಲವು ಆಟಗಳಿಂದ ಹೊರ ಉಳಿದಿದ್ದರು. ಈ ಬಾರಿ ದಕ್ಷಿಣ ಆಫ್ರಿಕ ಸರಣಿ ಬಳಿಕ ಭುವನೇಶ್ವರ್‌ ಕುಮಾರ್‌ ಟಿ 20 ಶ್ರೇಣಿಯಿಂದ ನಿವೃತ್ತರಾಗುವ ಸಾಧ್ಯತೆಯಿದೆ. ಟಿ 20 ಶ್ರೇಣಿಯಿಂದ ಹೊರಬಂದು, ಏಕದಿನ ಪಂದ್ಯದ ಬಗ್ಗೆ ಹೆಚ್ಚು ಗಮನ ಹರಿಸಬಹುದು. ಇದರ ಜತೆಗೆ ಟೆಸ್ಟ್‌ ಆಟಗಳ ಬಗ್ಗೆಯೂ ಹೆಚ್ಚಿನ ಲಕ್ಷ್ಯವಹಿಸಿ ಮತ್ತೊಮ್ಮೆ ಕಮ್‌ಬ್ಯಾಕ್‌ ಮಾಡಬಹುದು. ಈ ನಿಟ್ಟಿನಲ್ಲಿ ನೋಡಿದಾಗ ಭುವನೇಶ್ವರ್‌ ಕುಮಾರ್‌ ಟಿ20 ಶ್ರೇಣಿಯಿಂದ ನಿವೃತ್ತಿ ಹೊಂದುವ ಸಾಧ್ಯತೆ ಕಾಣುತ್ತದೆ.

2. ದಿನೇಶ್‌ ಕಾರ್ತಿಕ್‌
ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ ಭಾರತದ ಬ್ಯಾಟರ್‌ ಹಾಗೂ ಕೀಪರ್‌ ದಿನೇಶ್‌ ಕಾರ್ತಿಕ್‌ ಅವರಿಗೆ ಟಿ 20 ಸರಣಿಯಲ್ಲಿ ಸ್ಥಾನ ನೀಡಲಾಗಿದೆ. ದಿನೇಶ್‌ ಕಾರ್ತಿಕ್‌ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಗಳಿಸಬೇಕು, ಭಾರತದ ಪರ ಬ್ಯಾಟಿಂಗ್‌ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದಾರೆ. ಅವರ ಈ ಆಸೆ ನಿಜವಾಗಲೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮಾನದಂಡವಾಗುತ್ತದೆ. ಈ ಸರಣಿಯಲ್ಲಿ ಸಮಾಧಾನಕರ ಆಟ ಪ್ರದರ್ಶಿಸಲು ವಿಫಲವಾದಲ್ಲಿ, ಇದು ಅವರ ಕೊನೆಯ ಟ20 ಪಂದ್ಯವಾಗಬಹುದು. ಮುಂದಿನ ಟಿ20 ಪಂದ್ಯಗಳಿಂದ ದಿನೇಶ್‌ ಅವರನ್ನು ಹೊರಗಿಡಬಹುದು.

3. ಅಕ್ಷರ್‌ ಪಟೇಲ್
ಅಕ್ಷರ್‌ ಪಟೇಲ್‌ 2104ರಲ್ಲಿ ಡೆಬ್ಯೂ ಮಾಡಿದ ಬಳಿಕ ಈವರೆಗೆ ಒಟ್ಟು 38 ಏಕದಿನ, 15 ಟಿ 20 ಹಾಗೂ 6 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಈವರೆಗೆ ಅವರಿಂದ ಯಾವುದೇ ಆಕರ್ಷಕ ಆಟ ಕಂಡು ಬಂದಿಲ್ಲ. ಹಾಗಾಗಿ ಅವರು ಟಿ20 ಶ್ರೇಣಿಯಿಂದ ಹೊರಬರುವ ಬಗ್ಗೆ ಯೋಚಿಸಬಹುದು ಎಂದು ಎಲ್ಲೆಡೆ ಅಭಿಪ್ರಾಯ ಮೂಡಿದೆ.

ಇದನ್ನೂ ಓದಿ: ಯುವರಾಜ್‌ ಸಿಂಗ್‌ಗೆ ಟಿ20 ತಂಡದ ನಾಯಕತ್ವ ತಪ್ಪಿದ್ದು ಹೇಗೆ?

Exit mobile version