Site icon Vistara News

ಭಾರತದ ವಿಶ್ವಕಪ್​ ಗೆಲುವಿಗೆ ಅಡ್ಡಗಾಲಿಕ್ಕಿದ ಹರ್ಜಸ್ ಸಿಂಗ್ ಯಾರು?, ಭಾರತಕ್ಕಿರುವ ನಂಟೇನು?

The ecstasy and the despair: all in one picture

ಬೆನೋನಿ (ದಕ್ಷಿಣ ಆಫ್ರಿಕಾ): ಅಂಡರ್​ 19 ವಿಶ್ವಕಪ್(ICC Under 19 World Cup 2024)​ ಫೈನಲ್​ ಪಂದ್ಯದಲ್ಲಿ ಭಾರತದ 6ನೇ ಕಪ್​ ಗೆಲ್ಲುವ ಪ್ರಯತ್ನಕ್ಕೆ ಅರ್ಧಶತಕ ಬಾರಿಸುವ ಮೂಲಕ ಅಡ್ಡಗಾಲಿಕ್ಕಿದ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಹರ್ಜಸ್ ಸಿಂಗ್(Harjas Singh) ಭಾರತ ಮೂಲದವರಾಗಿದ್ದಾರೆ. ಹೌದು ಇವರು ಚಂಡೀಗಢ ಮೂಲಕ ಸಿಖ್ ಸಮುದಾಯಕ್ಕೆ ಸೇರಿದರು.

ಯಾರು ಈ ಹರ್ಜಸ್ ಸಿಂಗ್?


ಫೈನಲ್​ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಭಾರತ 6ನೇ ಪ್ರಶಸ್ತಿ ಪ್ರಯತ್ನಕ್ಕೆ ಕೊಳ್ಳಿ ಇಟ್ಟ ಆಸ್ಟ್ರೇಲಿಯಾದ ಹರ್ಜಸ್ ಸಿಂಗ್ ಅವರು ಭಾರತೀಯ ಮೂಲದ ಸಿಖ್ ಸಮುದಾಯಕ್ಕೆ ಸೇರಿದರು. ಹರ್ಜಸ್ 2005 ರಲ್ಲಿ ಸಿಡ್ನಿಯಲ್ಲಿ ಜನಿಸಿದ ಇವರ ತಂದೆ ಭಾರತದ ಚಂಡೀಗಢದಿಂದ ಬಂದವರಾಗಿದ್ದಾರೆ. ಹರ್ಜಾಸ್‌ ಅವರ ತಂದೆ ಇಂದರ್‌ಜಿತ್ ಸಿಂಗ್, ಪಂಜಾಬ್‌ನ ಚಂಡೀಗಢದಲ್ಲಿ ರಾಜ್ಯ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರು. ಅವರ ತಾಯಿ ಅವಿಂದರ್ ಕೌರ್ ರಾಜ್ಯ ಮಟ್ಟದ ಲಾಂಗ್ ಜಂಪ್ ಆಟಗಾರ್ತಿಯಾಗಿದ್ದರು. ಉದ್ಯೋಗ ನಿಮಿತ ಆಸ್ಟ್ರೇಲಿಯಾಕ್ಕೆ ವಲಸೆ ಬಂದ ಇಂದರ್‌ಜಿತ್ ಸಿಂಗ್ ಕುಟುಂಬ ಅಲ್ಲಿಯೇ ವಾಸಿಸುತ್ತಿದ್ದಾರೆ.

Harjas Singh


ಚಂಡೀಗಢದಲ್ಲಿ ಮನೆ ಇದೆ


ಟೂರ್ನಿ ಆರಂಭಕ್ಕೂ ಮುನ್ನವೇ ಹರ್ಜಾಸ್ ಸಿಂಗ್​ ಸ್ಟಾರ್​ಸ್ಟೋರ್ಟ್ಸ್​ ನಡೆಸಿದ ಸಂದರ್ಶನಲ್ಲಿ ತಾನು ಭಾರತದ ಮೂಲದ ಎಂದು ಹೇಳಿದ್ದರು. ವಿರಾಟ್​ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ನನಗೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ನನ್ನ ಕುಟುಂಬ ಇನ್ನೂ ಭಾರತದಲ್ಲಿದೆ. ನಾನು ಕೊನೆಯದಾಗಿ 2015 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದೆ. ಚಂಡೀಗಢ ಮತ್ತು ಅಮೃತಸರದಲ್ಲಿ ನನ್ನ ಬಂಧುಗಳಿದ್ದಾರೆ. ಚಂಡೀಗಢದಲ್ಲಿ ನಮಗೆ ಸೆಕ್ಟರ್ 44-ಡಿಯಲ್ಲಿ ಮನೆ ಇದೆ. ನನ್ನ ಚಿಕ್ಕಪ್ಪ ಈ ಮನೆಯಲ್ಲಿ ಈಗ ವಾಸಿಸುತ್ತಿದ್ದಾರೆ ಎಂದಿದ್ದರು. ಫೈನಲ್​ ಪಂದ್ಯದಲ್ಲಿ ಇಂದರ್‌ಜಿತ್ ಸಿಂಗ್ ಅವರು ಗ್ಯಾಲರಿಯಲ್ಲಿ ಕುಳಿತು ಮಗನ ಆಟವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ ಹಿರಿಯರಂತೆ ಕಿರಿಯರಿಗೂ ವಿಶ್ವಕಪ್​ ಫೈನಲ್​ನಲ್ಲಿ ಸೋಲುಣಿಸಿದ ಆಸೀಸ್​; ಭಾರತದ 6ನೇ ಕಪ್​ ಪ್ರಯತ್ನ ವಿಫಲ

ಮೊದಲು ಬ್ಯಾಟಿಂಗ್​ ನಡೆಸಿದ​ ಆಸ್ಟ್ರೇಲಿಯಾ ಆರಂಭಿಕ ಆಘಾತ ಕಂಡರೂ ಕೂಡ ಭಾರತದ ಬೌಲಿಂಗ್​ ದಾಳಿಯನ್ನು ದಿಟ್ಟವಾಗಿ ಎದುರಿಸಿ ನಿಂತದ್ದು ಹರ್ಜಸ್ ಸಿಂಗ್. ಆಕರ್ಷಕ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಅರ್ಧಶತಕ ದಾಖಲಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. 64 ಎಸೆತ ಎದುರಿಸಿದ ಹರ್ಜಸ್ ಸಿಂಗ್ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 55 ರನ್​ ಗಳಿಸಿದರು. ಇವರ ಈ ಅರ್ಧಶತಕ ಮತ್ತು ನಾಯಕ ಹಗ್ ವೈಬ್ಜೆನ್(48) ಹಾಗೂ ಒಲಿವರ್​ ಪೀಕ್(46*) ಬ್ಯಾಟಿಂಗ್​ ಹೋರಾಟದಿಂದ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 253 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ನಾಟಕೀಯ ಕುಸಿತ ಕಂಡು 43.5 ಓವರ್​ಗಳಲ್ಲಿ 174 ರನ್​ಗಳಿಗೆ ಸರ್ವಪತನ ಕಂಡು 79 ರನ್​ಗಳ ಸೋಲು ಕಂಡಿತು. ಈ ಸೋಲಿನಿಂದ ಹಿರಿಯ ಕ್ರಿಕೆಟಿಗರಿಂದ ಸಾಧ್ಯವಾಗದ್ದು ಕಿರಿಯ ಕ್ರಿಕೆಟಿಗರಿಂದಲಾದರೂ ಸಾಕಾರಗೊಳ್ಳಲಿ ಎಂಬ ದೇಶದ ಕ್ರೀಡಾಪ್ರೇಮಿಗಳ ಹಾರೈಕೆ ಹಾಗೂ ಅಪಾರ ನಿರೀಕ್ಷೆ ಹುಸಿಯಾಯಿತು.

Exit mobile version