Site icon Vistara News

ಟೆನಿಸ್‌ನ Bad Boy ಕಿರ್ಗಿಯೋಸ್‌ ಗರ್ಲ್‌ ಫ್ರೆಂಡ್‌ ಯಾರು?

bad boy

ಲಂಡನ್‌: ಈ ಬಾರಿಯ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಫೈನಲ್‌ಗೇರಿ ಸಾಧನೆ ಮಾಡಿರುವ ಟೆನಿಸ್‌ನ Bad Boy ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೋಸ್‌ ಯುವತಿಯೊಬ್ಬಳ ಪ್ರೇಮ ಪಾಶಕ್ಕೆ ಸಿಲುಕಿದ್ದಾರೆ. ಅವರಿಬ್ಬರ ಪ್ರಯಣದಾಟದ ಚಿತ್ರಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಓಡಾಡುತ್ತಿವೆ.

ಕಿರ್ಗಿಯೋಸ್‌ನ ಪ್ರೇಯಸಿಯ ಹೆಸರು ಕೊಸ್ಟೀನ್‌ ಹಟ್ಜಿ. ಅವರು ಆಸ್ಟ್ರೇಲಿಯಾದ ಮಾಡೆಲ್‌ ಕಮ್‌ ಇಂಟೀರಿಯರ್‌ ಡಿಸೈನರ್‌. ೨೧ ವರ್ಷದ ಕೋಮಲೆ ಆ ದೇಶದಲ್ಲಿ ಸಿಕ್ಕಾಪಟ್ಟೆ ಫೇಮಸ್‌. ಸಣ್ಣ ವಯಸ್ಸಿಗೆ ದೊಡ್ಡ ಬ್ರಾಂಡ್‌ನ ಇಂಟೀರಿಯರ್‌ ಡಿಸೈನ್‌ ಕಂಪನಿಯ ಮಾಲಕಿ.

ಎಳೆ ವಯಸ್ಸಿನಲ್ಲೇ ಉದ್ಯಮದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಕೋಸ್ಟೀನ್‌ ಹಟ್ಜಿ, ಖ್ಯಾತ ಟೆನಿಸ್‌ ಆಟಗಾರನನ್ನೇ ತಮ್ಮ ಸೌಂದರ್ಯದ ಮೂಲಕ ಬಲೆಗೆ ಬೀಳಿಸಿಕೊಂಡಿದ್ದಾರೆ. ಅವರಿಬ್ಬರು ಇತ್ತೀಚೆಗೆ ಮೆಲ್ಬೋರ್ನ್‌ ನಗರದಲ್ಲಿ ರಾತ್ರಿಯಿಡೀ ಕಳೆದಿರುವುದಾಗಿ ಹೇಳಿಕೊಂಡಿದ್ದಾರೆ. ತಾವಿಬ್ಬರು ಮೆಲ್ಬೋರ್ನ್‌ ಮಹಾನಗರಿಯ ನಿರ್ಜನ ರಸ್ತೆಯಲ್ಲಿ ಸುತ್ತುವ ಚಿತ್ರವನ್ನು ಕಿರ್ಗಿಯೋಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಅವರಿಬ್ಬರೂ ಕೆಲವು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದರೂ, ೨೦೨೨ರಿಂದೀಚೆಗೆ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಭವಿಷ್ಯದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡುವ ಮಾತುಗಳನ್ನೂ ಆಡುತ್ತಿದ್ದಾರೆ.

ಏಕೆ Bad Boy?

೨೬ ವರ್ಷದ ನಿಕ್‌ ಕಿರ್ಗಿಯೋಸ್‌ ವಿವಾದಿತ ಟೆನಿಸ್‌ ಅಟಗಾರ. ಅತ್ಯುತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಹೊರತಾಗಿಯೂ ವಿವಾದಗಳೇ ಅವರ ಸುತ್ತಲೂ ಸುತ್ತುತ್ತಿರುತ್ತವೆ. ಕೋರ್ಟ್‌ನಲ್ಲೂ ನಾನಾ ಅವತಾರಗಳನ್ನು ಅವರು ಆಗಾಗ ತೋರಿಸುತ್ತಿರುತ್ತಾರೆ. ಪ್ರೇಕ್ಷಕರ ಜತೆ ಜಗಳವಾಡುವುದು, ಅಂಪೈರ್‌ಗಳ ತೀರ್ಪಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಆಯೋಜಕರ ನಿಯಮಗಳನ್ನು ಮುರಿಯುವುದು ಅವರ ಚಾಳಿಗಳು. ಅದಕ್ಕಾಗಿ ಸಾಕಷ್ಟು ಬಾರಿ ದಂಡವನ್ನೂ ಹಾಕಿಸಿಕೊಂಡಿದ್ದಾರೆ. ಆದರೆ ವರ್ತನೆ ಬದಲಿಸಿಕೊಂಡಿಲ್ಲ. ವಿಂಬಲ್ಡನ್‌ನಲ್ಲೂ ಟೂರ್ನಿಯ ನಿಯಮಕ್ಕೆ ವಿರುದ್ಧವಾಗಿರುವ ಶೂ ಧರಿಸಿಕೊಂಡು ದಂಡ ತೆತ್ತಿದ್ದರು. ಹೀಗಾಗಿ Bad Boy of Tennis.

ಮೈದಾನಲ್ಲಿ ಹುಚ್ಚಾಟವಾಡಿದರೂ ಪ್ರೀತಿಯ ವಿಚಾರಕ್ಕೆ ಬಂದಾಗ ಕಿರ್ಗಿಯೋಸ್‌ ಸಕತ್‌ ರೊಮ್ಯಾಂಟಿಕ್‌ ಎಂಬುದು ಅವರು ಪ್ರಕಟಿಸಿರುವ ಚಿತ್ರಗಳಿಂದಲೇ ಸಾಬೀತಾಗಿದೆ. ಕಳೆದ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ವೇಳೆ ಕಿರ್ಗಿಯೋಸ್‌ ಹಾಗೂ ಕೋಸ್ಟಿನ್‌ ಹಟ್ಜ್‌ ಪ್ರೈವೇಟ್‌ ಜೆಟ್‌ನಲ್ಲಿ ʼಪ್ರೇಮಿಗಳ ನಗರʼ ಪ್ಯಾರಿಸ್‌ಗೆ ಪ್ರಯಾಣಿಸಿದ್ದರು. ಈ ವೇಳೆ ವಿಮಾನದೊಳಗೂ ರೊಮ್ಯಾಂಟಿಕ್‌ ಸೆಲ್ಫಿ ತೆಗೆದು ಪ್ರಕಟಿಸಿದ್ದರು. ವಿಂಬಲ್ಡನ್‌ ಕೋರ್ಟ್‌ ಪಕ್ಕದಲ್ಲೇ ಗೆಳತಿ ಕೋಸ್ಟಿಗೆ ಸಿಹಿ ಮುತ್ತು ನೀಡಿದ್ದರು.

ಇದನ್ನೂ ಓದಿ: Wimbeldon : ಟೂರ್ನಿಯಿಂದ ಹೊರ ನಡೆದ ನಡಾಲ್‌

Exit mobile version