ಬೆಂಗಳೂರು: ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ವಿಶ್ವಕಪ್ ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಹಾಗೂ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 23ರ ಹರೆಯದ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 82 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್ ತಂಡಕ್ಕೆ 9 ವಿಕೆಟ್ ಗಳ ಜಯ ದೊರಕಿಸಿಕೊಟ್ಟಿದ್ದಾರೆ ರಚಿನ್ 123 ರನ್ ಗಳಿಸಿದರೆ ಅವರ ಜತೆ ಮತ್ತೊಂದು ಬದಿಯಲ್ಲಿ ಸ್ಫೊಟಕ ಬ್ಯಾಟಿಂಗ್ ನಡೆಸಿದ ಡೆವೊನ್ ಕಾನ್ವೇ 152 ರನ್ ಗಳಿಸಿದರು. ಈ ಇಬ್ಬರೂ ಬ್ಯಾಟರ್ಗಳು 2ನೇ ವಿಕೆಟ್ಗೆ 273 ರನ್ಗಳ ಜತೆಯಾಟವಾಡಿದ್ದಾರೆ.
Rachin Ravindra has been awarded player of the match for his all-round performance against England in the World Cup 2023 opener.#RachinRavindra #ENGvNZ #WorldCup2023 #CricketTwitter pic.twitter.com/vXFMkpf3nm
— InsideSport (@InsideSportIND) October 5, 2023
ಅಂದ ಹಾಗೆ ನ್ಯೂಜಿಲ್ಯಾಂಡ್ ಪರ ಶತಕ ಬಾರಿಸಿದ ರಚಿನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಹೆಸರು. ಐಪಿಎಲ್ ಸೇರಿದಂತೆ ಎಲ್ಲೂ ಅವರ ಹೆಸರು ಹೆಚ್ಚು ಜನಪ್ರಿಯವಾಗಿರಲಿಲ್ಲ. ಆದರೆ, ರಚಿನ್ಗೂ ಭಾರತಕ್ಕೂ ದೊಡ್ಡ ನಂಟಿದೆ. ಅವರ ಪೋಷಕರು ಭಾರತದವರೂ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನವರು. ಇನ್ನೂ ಮುಂದುವರಿದು ಹೇಳಿದರೆ ಅವರ ಹೆಸರಿಗೆ ದಿಗ್ಗಜ ಬ್ಯಾಟರ್ಗಳಾದ ಸಚಿನ್ ಹಾಗೂ ರಾಹುಲ್ ದ್ರಾವಿಡ್ ಅವರ ನಂಟಿದೆ.
ರಚಿನ್ ರವೀಂದ್ರ ಯಾರು?
ರಚಿನ್ ರವೀಂದ್ರ 1999 ರಲ್ಲಿ ವೆಲ್ಲಿಂಗ್ಟನ್ನಲ್ಲಿ ಭಾರತೀಯ ಮೂಲದಕ ಪೋಷಕರಿಗೆ ಜನಿಸಿದ್ದಾರೆ.. ಬೆಂಗಳೂರಿನವರಾದ ರಚಿನ್ ಅವರ ತಂದೆ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಇಬ್ಬರು ಕ್ರಿಕೆಟ್ ದಂತಕಥೆಗಳ ಬಗ್ಗೆ ಅವರ ಪ್ರೀತಿ ಎಷ್ಟು ಆಳವಾಗಿತ್ತು ಎಂದರೆ ಅವರು ಇಬ್ಬರೂ ಆಟಗಾರರ ಹೆಸರಿನ ಅಕ್ಷರಗಳನ್ನು ಸಂಯೋಜಿಸುವ ಮೂಲಕ ತಮ್ಮ ಮಗನಿಗೆ ಹೆಸರಿಟ್ಟಿದ್ದಾರೆ, ಅವರು ರಾಹುಲ್ ಅವರಿಂದ “ರಾ” ಮತ್ತು ಸಚಿನ್ ಅವರಿಂದ “ಚಿನ್ ” ತೆಗೆದುಕೊಂಡು ಎರಡನ್ನೂ ಸಂಯೋಜಿಸಿ “ರಚಿನ್” ಎಂಬ ಹೆಸರನ್ನು ಪುತ್ರನಿಗೆ ಇಟ್ಟಿದ್ದಾರೆ. ಆತನಿಗೆ ತರಬೇತಿ ಕೊಡಿಸಿ ಕ್ರಿಕೆಟಿಗನನ್ನಾಗಿ ಮಾಡಿದ್ದಾರೆ.
ರಚಿನ್ ಅವರು 2019 ಅನ್ನು ನ್ಯೂಜಿಲ್ಯಾಂಡ್ ತಂಡ ಅಭಿಯಾನಿಯಾಗಿ ವೀಕ್ಷಿಸಿದ್ದರು. ಅದೂ ಬೆಂಗಳೂರಿನ ಬಾರೊಂದರಲ್ಲಿ. ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಸೋತಾಗ ಅವರು ಬೇಸರ ಮಾಡಿಕೊಂಡಿದ್ದರು.
ನ್ಯೂಜಿಲ್ಯಾಂಡ್ ತಂಡ ಸೋಲು ನನಗೆ ಬೇಸರ ಮೂಡಿಸಿತ್ತು. ನನ್ನ ತಂದೆ ವಯಸ್ಸಿನ ಹುಡುಗರ ಗುಂಪನ್ನು ಭಾರತಕ್ಕೆ (ವಾರ್ಷಿಕವಾಗಿ) ಕರೆದೊಯ್ಯುತ್ತಾರೆ. ಅಂತೆಯೇ ನಾವು ಪ್ರವಾಸಕ್ಕಾಗಿ ಬೆಂಗಳೂರಿನಲ್ಲಿದ್ದೆವು. ನಾವು ಸ್ಟಾಕ್ ಎಕ್ಸೇಂಜ್ ಬಾರ್ನಲ್ಲಿ ಫೈನಲ್ (2019) ವೀಕ್ಷಿಸುತ್ತಿದ್ದೆವು, “ಎಂದು ಅವರು ಪಿಟಿಐ ಜತೆಗಿನ ಸಂದರ್ಶನದಲ್ಲಿ ತಿಳಿಸಿದ್ದರು.
ನಾನು ಇಡೀ ಫೈನಲ್ ಪಂದ್ಯವನ್ನು ನೋಡಿದೆ. ಇದು ನಂಬಲಾಗದ ಮತ್ತು ಆಟದ ಏರಿಳಿತಗಳೊಂದಿಗೆ ನಡೆದ ಪಂದ್ಯವಾಗಿತ್ತು. ನಮ್ಮ ಸುತ್ತಲೂ ಭಾರತೀಯ ಬೆಂಬಲಿಗರನ್ನು ಹೊಂದಿರುವುದು ತುಂಬಾ ಹಿತಕರವಾಗಿತ್ತು. ಇದು ನಾನು ಎಂದಿಗೂ ಮರೆಯಲಾಗದ ಅನುಭವಎಂದು ರಚಿನ್ ಬಹಿರಂಗಪಡಿಸಿದ್ದರು.
2019 ರ ವಿಶ್ವಕಪ್ ಅನ್ನು ಬಾರ್ನಲ್ಲಿ ಕುಳತಿ ವೀಕ್ಷಿಸುವುದರಿಂದ ಹಿಡಿದು ಈಗ ಮೊದಲ ವಿಶ್ವಕಪ್ ಪಂದ್ಯದಲ್ಲಿ ಶತಕ ಗಳಿಸುವವರೆಗೆ ರಚಿನ್ ಕನಸು ನನಸಾಗಿದೆ.
ಎಲೈಟ್ ಪಟ್ಟಿಗೆ ರಚಿನ್ ಕಾನ್ವೆ
ಪುರುಷರ ಏಕದಿನ ವಿಶ್ವಕಪ್ನ (ICC World Cup 2023) ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ನ ಬ್ಯಾಟಿಂಗ್ ಜೋಡಿ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ 2023ರ ಆವೃತ್ತಿಯ ಮೊದಲ ಮತ್ತು ಎರಡನೇ ಶತಕಗಳನ್ನು ಬಾರಿಸಿದರು. ಕಾನ್ವೇ ಕೇವಲ 83 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಕಿವೀಸ್ ತಂಡಕ್ಕೆ 283 ರನ್ಗಳ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಅವರು 121 ಎಸೆತಗಳಲ್ಲಿ 152 ರನ್ ಬಾರಿಸಿ ಅಜೇಯರಾಗಿ ಉಳಿದರು. ಅಂತೆಯೇ ರಚಿನ್ ರವೀಂದ್ರ 96 ಎಸೆತಗಳ 123 ರನ್ಗಳ ನ್ನು ಬಾರಿಸಿ ಮಿಂಚಿದರು. ಈ ಮೂಲಕ ಅವರಿಬ್ಬರು ವಿಶ್ವ ಕಪ್ನ ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಶತಕ ಬಾರಿಸಿದ ಎಲೈಟ್ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ : ICC World Cup 2023 : ಮೊದಲ ಪಂದ್ಯದಲ್ಲಿಯೇ ಅಬ್ಬರಿಸಿದ ನ್ಯೂಜಿಲ್ಯಾಂಡ್; ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ
ಇದು ಏಕ ದಿನ ಕ್ರಿಕೆಟ್ ಸ್ವರೂಪದಲ್ಲಿ ಎಡಗೈ ಬ್ಯಾಟರ್ ಕಾನ್ವೆ ಅವರ ಐದನೇ ಶತಕವಾಗಿದ್ದರೆ, ರವೀಂದ್ರ 31 ಪಂದ್ಯಗಳಲ್ಲಿ ನಾಲ್ಕನೇ ಬಾರಿ ಮೂರಂಕಿ ಮೊತ್ತ ದಾಟಿದ್ದಾರೆ. ಈ ಜೋಡಿಯು ಇಂಗ್ಲೆಂಡ್ ತಂಡ ನೀಡಿದ್ದ 283 ರನ್ಗಳ ಸವಾಲನ್ನು ಮೀರುವಲ್ಲಿ ಎರಡನೇ ವಿಕೆಟ್ಗೆ 273 ರನ್ಗಳ ಜತೆಯಾಟವನ್ನು ನೀಡಿದೆ. ಈ ಇಬ್ಬರು ಆಟಗಾರರು ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ ಕ್ರಮವಾಗಿ 15 ಮತ್ತು 16 ನೇ ಬ್ಯಾಟರ್ಗಳು ಎನಿಸಿಕೊಂಡರು. ಕಾನ್ವೆ ಅವರ 152 ರನ್ಗಳಲ್ಲಿ 19 ಫೋರ್ ಹಾಗೂ 3 ಸಿಕ್ಸರ್ ಸೇರಿಕೊಂಡಿದ್ದರೆ, ರಚಿನ್ ಅವರ 123 ರನ್ಗಳಲ್ಲಿ 11 ಫೋರ್ಗಳು ಹಾಗೂ 5 ಅಮೋಘ ಸಿಕ್ಸರ್ಗಳು ಸೇರಿಕೊಂಡಿವೆ.