Site icon Vistara News

IPL 2024 Auction : ಹರಾಜಿನಲ್ಲಿ 7.5 ಕೋಟಿ ಪಡೆದ 19 ವರ್ಷದ ಕುಶಾಗ್ರ ಯಾರು?

Kumar Kushagara

ಬೆಂಗಳೂರು: ದುಬೈನಲ್ಲಿ ನಡೆದ ಐಪಿಎಲ್ 2024 ರ ಹರಾಜಿನಲ್ಲಿ (IPL 2024 Auction) ಪ್ಯಾಟ್ ಕಮಿನ್ಸ್ (20.5 ಕೋಟಿ) ಮತ್ತು ಮಿಚೆಲ್ ಸ್ಟಾರ್ಕ್ (24.75 ಕೋಟಿ) ಅವರಂತಹ ದೊಡ್ಡ ಆಟಗಾರರು ಮಿಂಚಿದರು. ಅವರು ಅಭಿಮಾನಿಗಳ ಉತ್ಸಾಹ ಹಾಗೂ ಚರ್ಚೆಗೆ ಕಾರಣರಾದರು. ಇವೆಲ್ಲರೂ ಹರಾಜು ಪ್ರಕ್ರಿಯೆ ಮೊದಲಾರ್ಧದಲ್ಲಿ ನಡೆದ ಘಟನೆ. ಆದರೆ, ದ್ವಿತೀಯಾರ್ಧದಲ್ಲಿ ಗಮನ ಸೆಳೆದಿದ್ದು ಅನ್​ಕ್ಯಾಪ್ಡ್​ ಆಟಗಾರರು (ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಆಟಗಾರರು) ಅವರಲ್ಲೂ ಧೋನಿಯ ತವರೂರು ಜಾರ್ಖಂಡ್​ನ ಯುವ ಸೆನ್ಸೇಷನ್​ ಕುಮಾರ್ ಕುಶಾಗ್ರ ಹೆಚ್ಚು ಸುದ್ದಿಗೆ ಗ್ರಾಸರಾದರು.

ಮಧ್ಯಮ ಕ್ರಮಾಂಕದ ಸ್ಫೋಟಕ ಬಲಗೈ ಬ್ಯಾಟರ್​ ಕುಶಾಗ್ರಗೆ ಕೇವಲ 19 ವರ್ಷ. ಈ ವಿಕೆಟ್​ಕೀಪರ್ ಬ್ಯಾಟರ್​ ಬ್ಯಾಟರ್​ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 7.2 ಕೋಟಿ ರೂಪಾಯಿಗೆ ಸೇಲಾದರು. ಈ ಮೂಲಕ ಯುವ ಆಟಗಾರ ಎಲ್ಲರ ಹುಬ್ಬೇರುವಂತೆ ಮಾಡಿದರು. 123 ರ ಗಮನಾರ್ಹ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್​ ಮಾಡಿರುವ ಯುವ ಆಟಗಾರ ಪ್ರತಿ 18 ಎಸೆತಕ್ಕೊಂದು ಸಿಕ್ಸರ್ ಬಾರಿಸುವ ಮೂಲಕ ಮಿಂಚಿದ್ದರು. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಬಳಗ ಸೇರಿಸಿಕೊಂಡಿತು. ಅಚ್ಚರಿಯೆಂದರೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ರಿಷಭ್ ಪಂತ್ ಅವರಂಥ ವಿಕೆಟ್​ ಕೀಪರ್ ಇರುವ ಹೊರತಾಗಿಯೂ ಕುಶಾಗ್ರ ಅವರನ್ನು ದೊಡ್ಡ ಮೊತ್ತ ಪಾವತಿಸಿ ತಂಡಕ್ಕೆ ಸೇರಿಸಿದ್ದು.

ಇದನ್ನೂ ಓದಿ : David Warner : ಮಾಜಿ ನಾಯಕ ವಾರ್ನರ್​ನನ್ನೇ ಬ್ಲಾಕ್ ಮಾಡಿದ ಎಸ್​ಆರ್​​ಎಚ್​!

2020-21ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎ ಗೆ ಪಾದಾರ್ಪಣೆ ಮಾಡಿದ ಕುಶಾಗ್ರ ಅವರ ಕ್ರಿಕೆಟ್ ಪ್ರಯಾಣವು ಬೇಗನೆ ಗಮನ ಸೆಳದಿದೆ. 2020 ರ ಅಂಡರ್ -19 ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾರತದ ತಂಡದಲ್ಲಿ ಸ್ಥಾನ ಪಡೆದ್ದ ಅವರು ತಮ್ಮ ಪ್ರತಿಭೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದ್ದರು. ಈ ಭರವಸೆಯ ಯುವ ಪ್ರತಿಭೆಯ ಸೇವೆಗಳನ್ನು ಪಡೆಯುವ ಮೊದಲು ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಿಂದ ಕಠಿಣ ಸ್ಪರ್ಧೆ ಎದುರಿಸಿತು.

ದೇವಧರ್ ಟ್ರೋಪಿಯಲ್ಲಿ ಉತ್ತಮ ಬ್ಯಾಟಿಂಗ್​

ಕುಶಾಗ್ರ ಅವರ ಇತ್ತೀಚಿನ ಪ್ರದರ್ಶನಗಳು ಅವರ ಬೆಳೆಯುತ್ತಿರುವ ಹಾದಿಯನ್ನು ಗಟ್ಟಿಗೊಳಿಸಿದೆ. ದೇವಧರ್ ಟ್ರೋಫಿಯಲ್ಲಿ ಅವರು 109.13 ಸ್ಟ್ರೈಕ್ ರೇಟ್​​ನಲ್ಲಿ 227 ರನ್ ಗಳಿಸುವ ಮೂಲಕ ಆರನೇ ಅತಿ ಹೆಚ್ಚು ರನ್ ಗಳಿಸಿದವರಾಗಿ ಹೊರಹೊಮ್ಮಿದ್ದರ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು 37 ಎಸೆತಗಳಲ್ಲಿ 67 ರನ್ ಗಳಿಸಿ ಒತ್ತಡವನ್ನು ನಿಭಾಯಿಸುವ ಮತ್ತು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು..

2022ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ರಣಜಿ ಟ್ರೋಫಿ ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ನಾಗಾಲ್ಯಾಂಡ್ ವಿರುದ್ಧ ದ್ವಿಶತಕ ಬಾರಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದರು. ಈ ಸಾಧನೆಯು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ಆರನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಂದುಕೊಟ್ಟಿತ್ತು.

Exit mobile version