ಅಹಮದಾಬಾದ್: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಚರ್ಚೆಯ ವಿಷಯವಾಗಿದೆ. ಪಂದ್ಯದ ನಡುವೆಯೇ ಆಟಗಾರನನ್ನು ಬದಲಾಯಿಸುವುದು ಈ ನಿಯಮದ ಅನುಕೂಲ. ತಂಡವೊಂದರ ಅನುಕೂಲಕ್ಕೆ ತಕ್ಕ ಹಾಗೆ ಒಬ್ಬ ಆಟಗಾರನ್ನು ಪಂದ್ಯದ ಮಧ್ಯದಲ್ಲಿ ಕೈ ಬಿಟ್ಟು ಬೇರೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸುವ ಮೂಲಕ ಗೆಲುವಿನ ಅವಕಾಶ ಸೃಷ್ಟಿಸಲು ಸಾಧ್ಯವಾಗುತ್ತದೆ. ಈ ನಿಯಮ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಜಯಂಟ್ಸ್ ತಂಡಗಳ ನಡುವಿನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಯೇ ಬಳಕೆಯಾಯಿತು. ಹಾಗಾದರೆ ಈ ನಿಯಮಕ್ಕೆ ಒಳಪಟ್ಟ ಆಟಗಾರ ಯಾರೆಂಬುದನ್ನು ನೋಡೋಣ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲರ್ ತುಷಾರ್ ದೇಶಪಾಂಡೆ ಐಪಿಎಲ್ನ ಮೊದಲ ಇಂಪ್ಯಾಕ್ಟ್ ಪ್ಲೇಯರ್ ಎನಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಂತರ ರನ್ ಚೇಸ್ ಮಾಡುವ ವೇಳೆ ತುಷಾರ್ ದೇಶಪಾಂಡೆ ಅವರನ್ನು ಕಣಕ್ಕೆ ಇಳಿಸಿತು. ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುವಾಗಿ ಬ್ಯಾಟರ್ ಅಂಬಾಟಿ ರಾಯುಡು ಅವರನ್ನು ಕೈ ಬಿಡಲಾಯಿತು. ಅಂಬಾಟಿ ರಾಯುಡು ಬ್ಯಾಟ್ ಮಾಡಿ 12 ರನ್ ಬಾರಿಸ ಔಟಾಗಿದ್ದರು. 27 ವರ್ಷದ ತುಷಾರ್ ದೇಶಪಾಂಡೆ ಮುಂಬಯಿ ಮೂಲದವರು. ರಣಜಿ ಟ್ರೋಫಿಯಲ್ಲಿ ಮುಂಬಯಿ ತಂಡ ಪರವಾಗಿ ಅವರು ಆಡುತ್ತಾರೆ.
ಹೊಸ ನಿಯಮಗಳೇನು?
ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ಬಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ತಂಡವೊಂದು ತನ್ನದೇ ಗುಂಪಿನ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಬೇಕು. ಆಗ ತಂಡವೊಂದು 8 ಪಂದ್ಯಗಳನ್ನು ಆಡಿದಂತಾಗುತ್ತದೆ. ಬಳಿಕ ಎರಡೂ ಗುಂಪುಗಳ ತಂಡಗಳ ನಡುವೆ ಪಂದ್ಯಗಳು ಆರಂಭವಾಗುತ್ತವೆ. ಅಂದರೆ ಮೊದಲ ಗುಂಪಿನ ಒಂದು ತಂಡ, ಇನ್ನೊಂದು ಗುಂಪಿನ ತಂಡವೊಂದರ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಇತರ ನಾಲ್ಕು ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಾಗುತ್ತದೆ. ಇದೇ ಮಾದರಿ ಇತರ ತಂಡಗಳಿಗೂ ಈ ಅನ್ವಯವಾಗುತ್ತದೆ. ಅಲ್ಲಿಗೆ ತಂಡವೊಂದು ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದಂತಾಗುತ್ತದೆ.
ಇದನ್ನೂ ಓದಿ IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
ಇಂಪ್ಯಾಕ್ಟ್ ಪ್ಲೇಯರ್
ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್‌ಬಾಶ್ ಟಿ20 ಲೀಗ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈ ಬಾರಿ ಐಪಿಎಲ್ನಲ್ಲಿಯೂ ಪರಿಚಯಿಸಲಾಗಿದೆ. ಈ ನಿಯಮದ ಪ್ರಮಾರ ತಂಡವೊಂದು ಆಡುತ್ತಿರುವಾಗ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಪ್ಲೇಯಿಂಗ್ ಇಲೆವನ್ ಬಳಗದಿಂದ ಹೊರಗಿರುವ ಒಬ್ಬ ಆಟಗಾರನನ್ನು ತಂಡಕ್ಕೆ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಇನಿಂಗ್ಸ್ ಆರಂಭಕ್ಕೂ ಮುನ್ನ, ಒಂದು ಓವರ್ ಮುಗಿದ ಮೇಲೆ, ವಿಕೆಟ್ ಬಿದ್ದಾಗ, ಓವರ್‌ಗಳ ನಡುವಿನ ವಿರಾಮದಲ್ಲಿ ಈ ನಿಯಮವನ್ನು ಬಳಸಬಹುದು. ಈ ನಿಯಮದನ್ವಯ ಒಬ್ಬ ಬದಲಿ ಆಟಗಾರನನ್ನು ಮಾತ್ರ ಬದಲಿಸಲು ಅವಕಾಶವಿರಲಿದೆ.
ಇದನ್ನೂ ಓದಿ IPL 2023: ಅಹಮದಾಬಾದ್ನಲ್ಲಿ ಭಾರಿ ಮಳೆ; ಚೆನ್ನೈ-ಗುಜರಾತ್ ಪಂದ್ಯ ಅನುಮಾನ
ವೈಡ್, ನೋಬಾಲ್‌ಗಳೂ ಡಿಆರ್‌ಎಸ್
ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಜಾರಿಗೆ ತರಲಾಗಿದ್ದ ವೈಡ್, ನೋಬಾಲ್ ಡಿಆರ್‌ಎಸ್ ನಿಯಮವನ್ನು ಈ ಬಾರಿಯ ಐಪಿಎಲ್ನಲ್ಲಿಯೂ ಅಳವಡಿಸಲಾಗಿದೆ. ಅಂಪೈರ್ಗಳು ನೀಡಿದ ವೈಡ್, ನೋಬಾಲ್ ಕರೆಗಳನ್ನು ಡಿಆರ್‌ಎಸ್ ಮೂಲಕ ಈಗ ಆಟಗಾರರಿಗೆ ಪ್ರಶ್ನಿಸಬಹುದಾಗಿದೆ.
ಈ ಹಿಂದೆ ಟಾಸ್ಗೂ ಮುನ್ನ ಪ್ಲೇಯಿಂಗ್ ಇಲೆವೆನ್ ಪಟ್ಟಿ ಸಲ್ಲಿಸಬೇಕಿತ್ತು. ಆದರೆ ಇದೀಗ ತಂಡಗಳ ನಾಯಕರು ಟಾಸ್ ಹಾರಿಸುವಾಗ 11 ಆಟಗಾರರ ಅಂತಿಮಪಟ್ಟಿಯನ್ನು ನೀಡಬೇಕಾಗಿಲ್ಲ. ಟಾಸ್ ಫಲಿತಾಂಶ ನೋಡಿಕೊಂಡು ಬಳಿಕ 11ರ ಪಟ್ಟಿಯನ್ನು ಪ್ರಕಟಿಸಬಹುದು.
ಗುವಾಹಟಿಯಲ್ಲಿ 2 ಪಂದ್ಯ
ಫುಟ್ಬಾಲ್ ಕ್ರೀಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಅಸ್ಸಾಂನ ಗುವಾಹಟಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ಮೂಲಕ ಇಲ್ಲಿನ ಫುಟ್ಬಾಲ್ ಅಭಿಮಾನಿಗಳಿಗೆ ಕ್ರಿಕೆಟ್‌ನಲ್ಲೂ ಆಸಕ್ತಿ ಹುಟ್ಟಿಸಲು ಬಿಸಿಸಿಐ ಮುಂದಾಗಿದೆ. ಗುವಾಹಟಿಯಲ್ಲಿ ಈ ಬಾರಿ ಎರಡು ಪಂದ್ಯಗಳು ನಡೆಯಲಿದೆ. ರಾಜಸ್ಥಾನ ರಾಯಲ್ಸ್‌ನ ಎರಡು ತವರಿನ ಪಂದ್ಯಗಳು ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದೆ