Site icon Vistara News

Ind vs NZ : ಅಂಕಪಟ್ಟಿಯ ಅಗ್ರಸ್ಥಾನಿಗಳ ಕಾಳಗದಲ್ಲಿ ಗೆಲುವು ಯಾರಿಗೆ?

Team india

ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿರುವ ಭಾರತ ತಂಡವು (Ind vs NZ ) ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ತನ್ನ ಅಭಿಯಾನವನ್ನು ಮುಂದುವರಿಸಲಿದೆ. ಎರಡೂ ತಂಡಗಳು ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ನಾಗಾಲೋಟ ನಡೆಸುತ್ತಿದೆ. ಎರಡೂ ತಂಡಗಳು ಇಲ್ಲಿಯವರೆಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿವೆ. ಜತೆಗೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿವೆ. ಹೀಗಾಗಿ ಭಾನುವಾರ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಮಾಡಬಹುದು.

ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಿದ ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಿಂದ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಭಾರತವು ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಸೋಲಿಸಿ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ.

ನ್ಯೂಜಿಲ್ಯಾಂಡ್​ ಮೇಲುಗೈ

ಭಾರತ ವಿರುದ್ದ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲ್ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ. ಹೀಗಾಗಿ ರೋಹಿತ್​ ಶರ್ಮಾ ನೇತೃತ್ವದ ತಂಡವು ಕಿವೀಸ್ ಒಡ್ಡುವ ಸವಾಲಿನ ಬಗ್ಗೆ ಜಾಗರೂಕವಾಗಿದೆ. ಏಕದಿನ ವಿಶ್ವಕಪ್​ನಲ್ಲಿ ಉಭಯ ತಂಡಗಳು ಆಡಿದ ಎಂಟು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಐದು ಬಾರಿ ಗೆದ್ದಿದೆ.

ಭಾರತವು 2004ರಿಂದ ಐಸಿಸಿ ಪಂದ್ಯಾವಳಿಗಳಲ್ಲಿ ನ್ಯೂಜಿಲೆಂಡ್ ಅನ್ನು ಒಮ್ಮೆ ಮಾತ್ರ ಸೋಲಿಸಿದೆ ಮತ್ತು ಎಂಟು ಬಾರಿ ಸೋತಿದೆ. 2019ರ ಏಕದಿನ ವಿಶ್ವಕಪ್​​ನ ಸೆಮಿಫೈನಲ್​​ನಲ್ಲಿ ಕಿವೀಸ್ ವಿರುದ್ಧವೇ ಭಾರತ ಸೋಲುವ ಮೂಲಕ ಶತಕೋಟಿ ಭಾರತೀಯರ ಕನಸುಗಳನ್ನು ಭಗ್ನಗೊಳಿಸಿತ್ತು. ಆದ್ದರಿಂದ, ಕಳೆದ ಎರಡು ದಶಕಗಳಲ್ಲಿ ನ್ಯೂಜಿಲೆಂಡ್ ವಿರುದ್ಧದ ಹಲವಾರು ಸೋಲುಗಳಿಗೆ ಸೇಡು ತೀರಿಸಿಕೊಳ್ಳುವು ಬಗ್ಗೆ ಭಾರತ ಕಣ್ಣಿಟ್ಟಿದ್ದರೆ, ಟಾಮ್ ಲೇಥಮ್ ನೇತೃತ್ವದ ತಂಡವು ಆತಿಥೇಯರ ವಿರುದ್ಧ ಗೆಲುವಿನ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಎರಡು ಬದಲಾವಣೆ

ಕಳೆದ ಪಂದ್ಯದಲ್ಲಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಪಾದದ ಗಾಯದಿಂದಾಗಿ ಪಾಂಡ್ಯ ಈ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ. ಮೆನ್ ಇನ್ ಬ್ಲೂ ತಂಡವು ತನ್ನ ಇಲೆವೆನ್​​ನಲ್ಲಿ ಎರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ವೇಗಿ ಮೊಹಮ್ಮದ್ ಶಮಿ ಮತ್ತು ಇಶಾನ್ ಕಿಶನ್ ಅವರನ್ನು ತಂಡಕ್ಕೆ ಕರೆತರುವ ಸಾಧ್ಯತೆಗಳಿವೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ಸೇವೆಯನ್ನು ಮತ್ತೊಮ್ಮೆ ಕಳೆದುಕೊಂಡಿದೆ. ಕಿವೀಸ್ ನಾಯಕ ಭಾರತ ವಿರುದ್ಧದ ದೊಡ್ಡ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಆದ್ದರಿಂದ, ಅವರು ಮುಂದಿನ ಪಂದ್ಯಕ್ಕೆ ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಈ ಸುದ್ದಿಗಳನ್ನೂ ಓದಿ
ICC World Cup 2023 : ಚಾಂಪಿಯನ್​ ಇಂಗ್ಲೆಂಡ್ ವಿರುದ್ಧ ದ. ಆಫ್ರಿಕಾಗೆ ದಾಖಲೆಯ 229 ರನ್ ಜಯ
ICC World Cup 2023 : ಬಾಂಗ್ಲಾ ಹುಲಿಯ ಹೊಟ್ಟೆ ಸೀಳಿದ ಭಾರತೀಯ ಅಭಿಮಾನಿಗಳು!

ತಂಡಗಳು ವಿವರ

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್/ ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ನ್ಯೂಜಿಲ್ಯಾಂಡ್​: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲಾಥಮ್ (ಸಿ & ವಿಕೆ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

ಭಾರತ-ನ್ಯೂಜಿಲೆಂಡ್ ಮುಖಾಮುಖಿ

ನೇರ ಪ್ರಸಾರ ವಿವರಗಳು

Exit mobile version