Site icon Vistara News

IPL 2023 : ರಾಜಸ್ಥಾನ್​ ರಾಯಲ್ಸ್​, ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಹಣಾಹಣಿಯಲ್ಲಿ ಗೆಲುವಿನ ಚಾನ್ಸ್​ ಯಾರಿಗೆ?

Who will win the match between Rajasthan Royals and Chennai Super Kings?

#image_title

ಜೈಪುರ: ರಾಜಸ್ಥಾನ್​ ರಾಯಲ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳ ನಡುವೆ ಐಪಿಎಲ್​ 16ನೇ (IPL 2023) ಆವೃತ್ತಿಯ 37ನೇ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯದಲ್ಲಿ ಗೆಲವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳುವುದಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​ ಸೆಣಸಾಡಲಿದೆ. ಇದೇ ವೇಳೆ ಕಳೆದೆರಡು ಪಂದ್ಯಗಳಲ್ಲಿ ಕಳಾಹೀನ ಪ್ರದರ್ಶನ ನೀಡಿ ಹ್ಯಾಟ್ರಿಕ್ ಸೋಲಿನತ್ತ ಮುಖಮಾಡಿರುವ ಅತಿಥೇಯ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿದೆ.

ಏಪ್ರಿಲ್ 12ರಂದು ನಡೆದ ಪಂದ್ಯದಲ್ಲಿ ಪ್ರಬಲ ಪೈಪೋಟಿ ನಡುವೆಯೂ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 3 ರನ್ ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳುವುದಕ್ಕೆ ಸಂಜು ಸ್ಯಾಮ್ಸನ್​ ಪಡೆಗೆ ಅನುಕೂಲಕರವಾಗಿದೆ. 4 ಗೆಲುವಿನೊಂದಿಗೆ 8 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿರುವ ಸಂಜು ಸ್ಯಾಮ್ಸನ್ ಪಡೆ ಕಳೆದ 2 ಪಂದ್ಯಗಳಲ್ಲಿ ಲಖನೌ ಸೂಪರ್ ಜಯಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದೆ ಸೋತಿದೆ. ಇದೀಗ ತವರಿನ ಅಂಗಣದ ಲಾಭ ಪಡೆದು ಪ್ರವಾಸಿ ಸಿಎಸ್ ಕೆ ಯನ್ನು ಮಣಿಸಬೇಕಿದೆ.

ಈ ಪಂದ್ಯ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಅಗ್ರಕ್ರಮಾಂಕದ ಬ್ಯಾಟರ್​​ಗಳು ಹಾಗೂ ರಾಜಸ್ಥಾನ್​ ರಾಯಲ್ಸ್ ತಂಡಗಳ ಸ್ಪಿನ್​ ಬಳಗದ ನಡುವಿನ ಹಣಾಹಣಿಯಾಗಿದೆ. ಚೆನ್ನೈ ತಂಡದ ಪರ ಅಜಿಂಕ್ಯ ರಹಾನೆ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ಶಿವಂ ದುಬೆ ಹಾಗೂ ಜಡೇಜಾ ಕೂಡ ಬ್ಯಾಟಿಂಗ್​ ಬಲ ಎನಿಸಿಕೊಂಡಿದ್ದಾರೆ. ಆರಂಭಿಕರಾದ ಡೆವೋನ್​ ಕಾನ್ವೆ ಹಾಗೂ ಋತುರಾಜ್​ ಗಾಯಕ್ವಾಡ್​ ಕೂಡ ಆಡಲಿದ್ದಾರೆ.

ರಾಜಸ್ಥಾನ್​ ತಂಡದ ಪರವಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್​ ಬಟ್ಲರ್​ ಉತ್ತಮ ಆರಂಭ ತಂದುಕೊಡುತ್ತಿದ್ದಾರೆ. ಕನ್ನಡಿಗ ದೇವದತ್​​ ಪಡಿಕ್ಕಲ್​, ನಾಯಕ ಸಂಜು ಸ್ಯಾಮ್ಸನ್ ಹಾಗೂ ಶಿಮ್ರೋನ್​ ಹೆಟ್ಮಾಯರ್​ ಹಾಗೂ ದ್ರುವ್​ ಜುರೇಲ್​ ಕೂಡ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಚೆನ್ನೈ ತಂಡದ ಯುವ ವೇಗಿಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿಲ್ಲ. ಆದರೆ, ಸ್ಪಿನ್ನರ್​ಗಳಾದ ಮೊಯೀನ್​ ಅಲಿ ಹಾಗೂ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರ್​ಆರ್​ ತಂಡ ಪರವಾಗಿ ಸ್ಪಿನ್ನರ್​​ಗಳಾದ ಆರ್​. ಅಶ್ವಿನ್​ ಹಾಗೂ ಯಜ್ವೇಂದ್ರ ಚಹಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವೇಗಿಗಳಾದ ಸಂದೀಪ್​ ಶರ್ಮಾ ಹಾಗೂ ಟ್ರೆಂಟ್​ ಬೌಲ್ಟ್​ ಉತ್ತ ಪ್ರದರ್ಶನ ನೀಡುತ್ತಿದ್ದಾರೆ.

ಪಿಚ್​ ಹೇಗಿದೆ?

ಸವಾಯ್ ಮಾನ್ ಸಿಂಗ್ ಅಂಗಣದ ಪಿಚ್ ಕೂಡ ಬ್ಯಾಟಿಂಗ್ ಸ್ನೇಹಿ. ಸ್ಪಿನ್ನರ್‌ಗಳಿಗೆ ಸ್ವಲ್ಪ ನೆರವು ಸಿಗಲಿದೆ. ಟಾಸ್ ಗೆದ್ದ ನಾಯಕ ರನ್‌ ಚೇಸ್ ಮಾಡಬಹುದು. ಮತ್ತೊಂದು ದೊಡ್ಡ ಮೊತ್ತದ ಪಂದ್ಯ ನಡೆಯಲಿದೆ.

ಇದನ್ನೂ ಓದಿ : IPL 2023: ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ಆರ್​ಸಿಬಿ ತಂಡ ಸೋತ ಬಳಿಕ ಐಪಿಎಲ್​ ಅಂಕಪಟ್ಟಿ ಹೇಗಿದೆ?

ಸಂಭಾವ್ಯ ತಂಡಗಳು

ರಾಜಸ್ಥಾನ್ ರಾಯಲ್ಸ್​: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮಾಯೆರ್‌, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

ಚೆನ್ನೈ ಸೂಪರ್ ಕಿಂಗ್ಸ್: ಡೆವೋನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೇ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ಡ್ವೇನ್ ಪ್ರಿಟೋರಿಯಸ್, ಮತೀಶ ಪತಿರಾಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್.

Exit mobile version