Site icon Vistara News

ICC World Cup 2023 : ದಕ್ಷಿಣ ಆಫ್ರಿಕಾ- ನ್ಯೂಜಿಲ್ಯಾಂಡ್​ ನಡುವಿನ ಬಿಗ್ ಫೈಟ್​ನಲ್ಲಿ ಜಯ ಯಾರಿಗೆ?

South Africa Cricket team

ಪುಣೆ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್​​ನ (ICC World Cup 2023) 32ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ನವೆಂಬರ್ 01 ರ ಬುಧವಾರ ಮಧ್ಯಾಹ್ನ 2 ಗಂಟೆಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಬಿಗ್​ ಫೈಟ್​ ಆರಂಭವಾಗಲಿದೆ. ಸ್ಪರ್ಧೆಯ ನಾಕೌಟ್ ಹಂತಕ್ಕೆ ಪ್ರವೇಶ ಮಾಡುವ ಉದ್ದೇಶದಿಂದ ಎರಡೂ ತಂಡಗಳು ಗೆಲುವನ್ನು ಹೊರತುಪಡಿಸಿ ಬೇರೇನೂ ಎದುರು ನೋಡುತ್ತಿಲ್ಲ.

ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಕಿವೀಸ್ ಪ್ರಸಕ್ತ ಟೂರ್ನಿಯಲ್ಲಿ ಸ್ಥಿರ ತಂಡಗಳಲ್ಲಿ ಒಂದಾಗಿದೆ. ಆದಾಗ್ಯೂ, ಧರ್ಮಶಾಲಾದಲ್ಲಿ ನಡೆದ ರೋಮಾಂಚಕ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ನಾಲ್ಕು ವಿಕೆಟ್​ಗಳಿಂದ ಜಯಗಳಿಸುವ ಮೂಲಕ ಅವರ ಗೆಲುವಿನ ಹಾದಿಯನ್ನು ಕೊನೆಗೊಳಿಸಿತ್ತು. ಬಳಿಕ ಬ್ಲ್ಯಾಕ್ ಕ್ಯಾಪ್ಸ್ ಪುಟಿದೇಳಲು ಪ್ರಯತ್ನಿಸಿತು. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ವಿಫಲರಾದರು. ಇದರಿಂದಾಗಿ ಅವರು ಎರಡನೇ ಸೋಲನ್ನು ಅನುಭವಿಸಿದರು. 2019 ರ ಫೈನಲಿಸ್ಟ್​ ತಂಡ ಪ್ರಸ್ತುತ ಏಕದಿನ ವಿಶ್ವಕಪ್ ಪಾಯಿಂಟ್ಸ್ ಟೇಬಲ್​​ನಲ್ಲಿ ಎಂಟು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಪ್ರಸ್ತುತ ಆರು ಪಂದ್ಯಗಳಿಂದ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಭಾರತದ ನಂತರ ಎರಡನೇ ಸ್ಥಾನದಲ್ಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ತೆಂಬಾ ಬವುಮಾ ನೇತೃತ್ವದ ತಂಡ ಪಾಕಿಸ್ತಾನ ವಿರುದ್ಧ ಒಂದು ವಿಕೆಟ್ ಜಯ ಸಾಧಿಸಿದೆ. ಪಾಕಿಸ್ತಾನ ನೀಡಿದ್ದ 271 ರನ್​ಗಳ ಗುರಿ ದಾಟಿದ ದಕ್ಷಿಣ ಆಫ್ರಿಕಾ 5ನೇ ಗೆಲುವು ದಾಖಲಿಸಿದೆ. ಈ ತಂಡವು ಬಲಿಷ್ಠವಾಗಿದ್ದು ಬೌಲಿಂಗ್ ಹಾಗೂ ಬ್ಯಾಟಿಂಗ್​ ಮೂಲಕ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷೆ ಮಾಡಬಹುದು.

ಈ ಸುದ್ದಿಯನ್ನೂ ಓದಿ : Shaheen Afridi: ಒಂದು ವಿಕೆಟ್​ ಕಿತ್ತು ಹಲವು ದಾಖಲೆ ಬರೆದ ಶಾಹೀನ್​ ಅಫ್ರಿದಿ

ಹವಾಮಾನ ಹೇಗಿದೆ?

ಪುಣೆಯ ಹವಾಮಾನವು ತಿಳಿಯಾಗಿರಲಿದೆ. ಬಿಸಿಲು ಹೆಚ್ಚಾಗಿರುತ್ತದೆ. ಅಕ್ಯೂವೆದರ್ ಪ್ರಕಾರ, ಹವಾಮಾನ ಮುನ್ಸೂಚನೆಯು ಹಗಲಿನಲ್ಲಿ 32 ಡಿಗ್ರಿ ಸೆಲ್ಸಿಯಸ್ (ಹೆಚ್ಚಿನ) ಆಗಿರುತ್ತದೆ. ಆಟದ ಅಂತಿಮ ಹಂತಕ್ಕೆ ಹೋಗುವಾಗ ರಾತ್ರಿಯಲ್ಲಿ 23 ಡಿಗ್ರಿ ಸೆಲ್ಸಿಯಸ್ (ಕಡಿಮೆ) ಗೆ ತಾಪಮಾಣ ಇಳಿಯುವ ನಿರೀಕ್ಷೆಯಿದೆ. ಪುಣೆಯಲ್ಲಿ ಮಳೆಯ ಅಪಾಯವಿಲ್ಲ. ಇಬ್ಬನಿಯೂ ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ಹೇಗಿದೆ?

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿನ ಪಿಚ್ ಬ್ಯಾಟರ್​ಗಳಿಗೆ ಅನುಕೂಲಕರವಾಗಿದೆ. ಹೆಚ್ಚಿನ ಸ್ಕೋರಿಂಗ್ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ. ಮೊದಲು ಬೌಲಿಂಗ್ ಮಾಡಿ ರನ್​ ಚೇಸ್ ಮಾಡುವುದು ನಾಯಕನ ಬುದ್ಧಿವಂತ ನಿರ್ಧಾರವಾಗಿರಲಿದೆ.

ತಂಡಗಳ ವಿವರ

ನ್ಯೂಜಿಲ್ಯಾಂಡ್: ಟಾಮ್ ಲಾಥಮ್ (ನಾಯಕ/ ವಿಕೆಟ್​ಕೀಪರ್​​ ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಲುಂಗಿ ಎನ್ಗಿಡಿ.

ಇತ್ತಂಡಗಳ ಮುಖಾಮುಖಿ ವಿವರ

ಪಂದ್ಯ ಮತ್ತು ನೇರ ಪ್ರಸಾರ ವಿವರ

Exit mobile version