Site icon Vistara News

Mohammad Rizwan : ಆಸೀಸ್​ ಪ್ರವಾಸದ ವೇಳೆಯೂ ಧರ್ಮಾಂಧತೆ ಪ್ರದರ್ಶಿಸಿದ ಪಾಕಿಸ್ತಾನದ ರಿಜ್ವಾನ್​

Mohammed Rizwan

ಬೆಂಗಳೂರು: ಪಾಕಿಸ್ತಾನದ ವಿಕೆಟ್​ಕೀಪರ್ ಬ್ಯಾಟರ್​ ಮೊಹಮ್ಮದ್ ರಿಜ್ವಾನ್​ ಕ್ರಿಕೆಟ್ ಮೈದಾನದಲ್ಲಿ ತಮ್ಮ ಧರ್ಮಾಂಧತೆಯನ್ನು ಪ್ರದರ್ಶಿಸುವುದು ಆಗಾಗ ವರದಿಯಾಗುತ್ತಿದೆ. ಇಸ್ಲಾಮ್​ನಲ್ಲಿ ಕಡ್ಡಾಯ ಅಥವಾ ವಿರುದ್ಧ ಎಂಬ ಯೋಚನೆಯಲ್ಲಿ ಅವರು ಮಾಡುವ ಕೆಲವು ಕ್ರಿಯೆಗಳು ಜಾಗತಿಕವಾಗಿ ಕ್ರಿಕೆಟ್​ ಕ್ಷೇತ್ರದ ಬೇಸರಕ್ಕೆ ಕಾರಣವಾಗಿದೆ. ಅವರ ಅಂಥದ್ದೇ ಒಂದು ನಡತೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅವರ ತಮ್ಮ ಸಣ್ಣತವನ್ನು ತೋರಿದ್ದಾರೆ.

ಪ್ರವಾಸದ ವೇಳೆ ಎಸ್​​ಜಿ ಬಾರ್ ಒನ್ ಪ್ಲೇಯರ್​ನಲ್ಲಿ ನಡೆದ ನ್ಯೂ ಇಯರ್ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಪಾಕಿಸ್ತಾನದ ಕ್ರಿಕೆಟಿಗರಿಗೆ ಆಸ್ಟ್ರೇಲಿಯಾದ ದಂತಕಥೆ ಗ್ಲೆನ್ ಮೆಕ್​ಗ್ರಾತ್​ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಆತ್ಮೀಯ ಶುಭಾಶಯ ಕೋರಿದ್ದರು. ಈ ವೇಳೆ ರಿಜ್ವಾನ್​ ಅವರ ಕುಟುಂಬದ ಮಹಿಳೆಯರ ಕೈ ಕುಲುಕಲು ನಿರಾಕರಿಸುವ ಮೂಲಕ ತಮ್ಮ ಧಾರ್ಮಿಕ ನಂಬಿಕೆಗಳನ್ನು ಮತ್ತೊಮ್ಮೆ ಪ್ರದರ್ಶಿಸಿ ಟೀಕೆಗೆ ಒಳಗಾಗಿದ್ದಾರೆ.

ವಿಶೇಷ ‘ಪಿಂಕ್ ಟೆಸ್ಟ್’ ನ ಮೊದಲ ದಿನದಂದು ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದ ಮೆಕ್​ಗ್ರಾತ್​​ ಕುಟುಂಬ ಪಾಕ್​​ ತಂಡವನ್ನು ಸ್ವಾಗತಿಸಿತ್ತು. ಆದರೆ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಮೆಕ್ಗ್ರಾತ್ ಕುಟುಂಬದ ಮಹಿಳಾ ಸದಸ್ಯರೊಂದಿಗೆ ಕೈಕುಲುಕಲು ನಿರಾಕರಿಸಿದರು. ಉಳಿದವರು ಕೈ ಕುಲುಕಿದ ಹೊರತಾಗಿಯೂ ರಿಜ್ವಾನ್ ನಿರಾಕರಿಸಿದ್ದರು.

ಶಾನ್ ಮಸೂದ್ ನೇತೃತ್ವದ ತಂಡದ ಇತರ ಎಲ್ಲಾ ಸದಸ್ಯರು ಮಹಿಳೆಯರೊಂದಿಗೆ ಸೌಜನ್ಯದಿಂದ ಕೈಕುಲುಕಿದ್ದರು. ಆದರೆ ರಿಜ್ವಾನ್ ಅವರು ಹಾಗೆ ಮಾಡಲಿಲ್ಲ, ಏಕೆಂದರೆ ಕ್ರಿಕೆಟಿಗ ಮತ್ತೊಮ್ಮೆ ತಮ್ಮ ಅತಿಯಾದ ಧಾರ್ಮಿಕ ನಿಲುವನ್ನು ಬಹಿರಂಗಪಡಿಸಿದರು. ಆದರೆ, ಗೌರವದ ಸಂಕೇತವಾಗಿ ಕೈಮುಗಿದರು.

ರಿಜ್ವಾನ್ ಹಾಗೆ ಮಾಡಿದ್ದು ಯಾಕೆ?

2008 ರಲ್ಲಿ ಲೆಜೆಂಡ್ ಕ್ರಿಕೆಟರ್​ ಮೆಕ್​ಗ್ರಾತ್​ ಪತ್ನಿ ಜೇನ್ ಅವರ ಅಕಾಲಿಕ ನಿಧನದ ನೆನಪಿಗಾಗಿ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಆಯೋಜಿಸಲಾದ ಸಾಂಪ್ರದಾಯಿಕ ‘ಪಿಂಕ್ ಟೆಸ್ಟ್’ ಆಯೋಜಿಸಲಾಗುತ್ತಿದೆ. ಟೆಸ್ಟ್​​ ಪಂದ್ಯದ ಆರಂಭಿಕ ದಿನದಂದು ರಿಜ್ವಾನ್​ ಅವಮಾನ ಮಾಡಿದ ಘಟನೆ ನಡೆದಿದೆ.

ಆಸ್ಟ್ರೇಲಿಯಾದ ಕ್ರಿಕೆಟ್ ಬೇಸಿಗೆಯ ಈ ವಿಶೇಷ ಸಂದರ್ಭದಲ್ಲಿ ಎಸ್​​ಸಿಜಿ ಮೈದಾನವು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ತಂಡಗಳು ಮತ್ತು ಅಭಿಮಾನಿಗಳಿಗೆ ಮೆಕ್​ಗ್ರಾತ್​ ಫೌಂಡೇಶನ್​ಗೆ ದೇಣಿಗೆ ನೀಡಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : Ravindra Jadeja : ಹಳ್ಳಿಯಲ್ಲಿ ಎತ್ತಿನ ಗಾಡಿಯಲ್ಲಿ ತಿರುಗಾಡಿದ ಜಡೇಜಾ; ವಿಡಿಯೊ ಇಲ್ಲಿದೆ

ರಿಜ್ವಾನ್ ಕ್ರಿಕೆಟ್ ಮೈದಾನದಲ್ಲಿ ತನ್ನ ಇಸ್ಲಾಮಿಕ್ ನಂಬಿಕೆಯನ್ನು ಬಲಪಡಿಸುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ತನ್ನ ಸಂದರ್ಶನಗಳಲ್ಲಿ ಮಹಿಳಾ ನಿರೂಪಕರು ಮತ್ತು ಪ್ರಸಾರ ತಂಡದ ಸದಸ್ಯರೊಂದಿಗೆ ಸಂವಹನ ನಡೆಸಲು ಮತ್ತು ಮುಖಾಮುಖಿಯಾಗಿ ಭೇಟಿಯಾಗಲು ನಿರಾಕರಿಸಿದ್ದರು.

ಧರ್ಮ ಮತ್ತು ನಂಬಿಕೆ ಕ್ರಿಕೆಟಿಗನಿಗೆ ಸಂಪೂರ್ಣವಾಗಿ ವೈಯಕ್ತಿಕವಾಗಿದ್ದರೂ, ಅದರ ಅಭಿವ್ಯಕ್ತಿಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಅವರ ಧಾರ್ಮಿಕ ಮಾರ್ಗಗಳಿಗೆ ಅಂಟಿಕೊಂಡಿದ್ದಕ್ಕಾಗಿ ಕೆಲವರು ಅವರನ್ನು ಶ್ಲಾಘಿಸಿದರೆ, ಒಂದು ವರ್ಗವು ಅವರನ್ನು ಉಗ್ರಗಾಮಿ ಎಂದು ಆರೋಪಿಸಿದೆ.

ಆಸ್ಟ್ರೇಲಿಯಾದಲ್ಲಿ ನಡೆದ 3-0 ಟೆಸ್ಟ್ ಸರಣಿಯ ವೈಟ್​​ವಾಷ್​​ ಟೆಸ್ಟ್​​ನಲ್ಲಿ ರಿಜ್ವಾನ್ ಪಾಕಿಸ್ತಾನ ಪರ ಮಿಂಚಿದ ಆಟಗಾರರಾಗಿದ್ದಾರೆ. 42, 35, 88 ಮತ್ತು 28 ಸ್ಕೋರ್​ಗಳನ್ನು ಅವರು ಬಾರಿಸಿದ್ದರು. ತಂಡದ ಆದ್ಯತೆಯ ವಿಕೆಟ್ ಕೀಪರ್-ಬ್ಯಾಟರ್​ ಆಗಿ ಪ್ರಭಾವ ಬೀರಿದ್ದರು.

Exit mobile version