Site icon Vistara News

Team India : ಗಾಯದ ನಡುವೆ ಐಪಿಎಲ್ ಆಡುವವರು ಭಾರತ ತಂಡಕ್ಕೆ ಯಾಕೆ ಆಡುವುದಿಲ್ಲ; ಕಪಿಲ್​ದೇವ್​ ಪ್ರಶ್ನೆ

kapildev

ಮುಂಬಯಿ: ಏಕದಿನ ವಿಶ್ವ ಕಪ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ತವರಿನಲ್ಲಿ ನಡೆಯುವ ಟೀಮ್ ಇಂಡಿಯಾದ ಸಿದ್ಧತೆಗಳು ಇಲ್ಲಿಯವರೆಗೆ ತಂಡದ ಆತ್ಮವಿಶ್ವಾಸ ಹೆಚ್ಚಿಸಿಲ್ಲ. ಜನವರಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವುಗಳೊಂದಿಗೆ ಉತ್ತಮ ಆರಂಭವನ್ನು ಮಾಡಿತ್ತು. ಆದರೆ ಎರಡು ತಿಂಗಳ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನ ಏಕ ದಿನ ಸರಣಿಯಲ್ಲಿ 1-2 ಅಂತರದಿಂದ ಸೋಲನ್ನು ಎದುರಿಸಿತು. ಕ್ರಿಕೆಟ್ ಕ್ಯಾಲೆಂಡರ್​ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಆಟಗಾರರ ಪ್ರದರ್ಶನ ನಿರಾಶಾದಾಯಕ ಎನಿಸಿತತು. ಅದೇ ರೀತಿ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ.

ಮೊದಲ ಏಕದಿನ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ತಂಡವನ್ನು ಕೇವಲ 114 ರನ್​ಗಳಿಗೆ ಆಲೌಟ್ ಮಾಡಿದಾಗಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿದ್ದರು. ಹೀಗಾಗಿ ಭಾರತ ತಂಡ ಐದು ವಿಕೆಟ್​ ಕಳೆದುಕೊಂಡಿತು ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಹಿತ್ ಮತ್ತು ಕೊಹ್ಲಿ ಇಬ್ಬರಿಗೂ ವಿಶ್ರಾಂತಿ ನೀಡಿತು. ಹೀಗಾಗಿ ತಂಡ ಬ್ಯಾಟಿಂಗ್ ಕುಸಿತ ಎದುರಿಸಿತು. ಆರು ವಿಕೆಟ್​ಗಳ ಸೋಲಿಗೆ ಒಳಗಾಗುವ ಮೊದಲು 181 ರನ್​ಗಳಿಗೆ ಆಲ್​ಔಟ್ ಆಗಿತ್ತು.

ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಇನ್ನೂ ಗಾಯಗಳಿಂದ ಬಳಲುತ್ತಿದ್ದಾರೆ. ರಿಷಭ್ ಪಂತ್ ಕೂಡ ಕಳೆದ ವರ್ಷ ಡಿಸೆಂಬರ್​ನಲ್ಲಿ ತೀವ್ರ ಕಾರು ಅಪಘಾತದ ನಂತರ ತಂಡದಲ್ಲಿ ಇಲ್ಲ. ಹೀಗಾಗಿ ವಿಶ್ವ ಕಪ್​ಗೆ ತಂಡ ಸಜ್ಜುಗೊಳಿಸುವ ಮೊದಲು ಭಾರತ ತಂಡಕ್ಕೆ ಪ್ರದರ್ಶನವೇ ಹಿನ್ನಡೆಯಾಗಿದೆ. ಈ ಬಗ್ಗೆ 1983ರ ವಿಶ್ವ ಕಪ್​ ವಿಜೇತ ಭಾರತ ತಂಡದ ನಾಯಕ ಕಪಿಲ್​ ದೇವ್​ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಸಿದ್ಧತೆ ನಡುವೆ ಭಾರತ ತಂಡವು ಗಾಯದ ಸಮಸ್ಯೆ ನಿಭಾಯಿಸಿದ ಬಗ್ಗೆ ದಿ ವೀಕ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ ಕಪಿಲ್ ದೇವ್​. ಬುಮ್ರಾ ಮತ್ತು ಪಂತ್ ಅವರಂತಹ ಕೆಲವು ಪ್ರಮುಖ ಆಟಗಾರರ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ ಅವರು. ಇಂಡಿಯನ್ ಪ್ರೀಮಿಯರ್ ಲೀಗ್​ನ ಬಳಿಕ ಆಟಗಾರರಿಗೆ ತಮ್ಮನ್ನು ತಾವು ನೋಡಿಕೊಳ್ಳುವುದು ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇವರು ಕರುಣಾಮಯಿ. ನಾನು ಎಂದಿಗೂ ಗಾಯಗೊಂಡಿಲ್ಲ ಎಂಬ ಜಂಭವಲ್ಲ . ಆದರೆ ಇಂದು ಆಟಗಾರರು ವರ್ಷದಲ್ಲಿ 10 ತಿಂಗಳು ಆಡುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ತಮ್ಮನ್ನು ತಾವು ನೋಡಿಕೊಳ್ಳಬೇಕು. ಐಪಿಎಲ್ ಒಂದು ದೊಡ್ಡ ಟೂರ್ನಿ. ಆದರೆ ಐಪಿಎಲ್ ನಿಮ್ಮನ್ನು ಹಾಳುಮಾಡಬಹುದು. ಸ್ವಲ್ಪ ಗಾಯಗಳ ಹೊರತೂ ಆಟಗಾರರು ಐಪಿಎಲ್​ ಆಡುತ್ತಾರೆ. ಆದರೆ ಭಾರತಕ್ಕಾಗಿ ಆಡುವುದಿಲ್ಲ. ವಿರಾಮ ತೆಗೆದುಕೊಳ್ಳುತ್ತಾರೆ ಎಂದು ಕಪಿಲ್​ದೇವ್​ ಹೇಳಿದ್ದಾರೆ.

ಗಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮತ್ತು ಕ್ರಿಕೆಟ್ ಕ್ಯಾಲೆಂಡರ್​​ ನಿರ್ವಹಿಸುವಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಸಕ್ರಿಯವಾಗಿರಬೇಕು ಎಂದು ಕಪಿಲ್ ಇದೇ ವೇಳೆ ಒತ್ತಾಯಿಸಿದರು.

ಇದನ್ನೂ ಓದಿ : World Cup 2023 : ಭಾರತ, ಪಾಕಿಸ್ತಾನ ಪಂದ್ಯದ ತಾಣ ಬದಲು; ಜಯ್​ ಶಾ ಸ್ಪಷ್ಟನೆ ಏನು?

ಈ ತಿಂಗಳ ಆರಂಭದಲ್ಲಿ, ಬಿಸಿಸಿಐ ಬುಮ್ರಾ, ಅಯ್ಯರ್ ಮತ್ತು ರಾಹುಲ್ ಬಗ್ಗೆ ಸಕಾರಾತ್ಮಕ ಸುದ್ದಿ ಕೊಟ್ಟಿದ್ದಾರೆ. ಮೂವರೂ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಮಂಗಳವಾರ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ನಂತರ ಭಾರತವು ಏಷ್ಯಾ ಕಪ್​​ನಲ್ಲಿ ಏಕದಿನ ಪಂದ್ಯಗಳಲ್ಲಿ ಆಡಲು ಮರಳಲಿದೆ. ಅಲ್ಲಿ ತಂಡವು ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ನೇಪಾಳದೊಂದಿಗೆ ಸ್ಥಾನ ಪಡೆದಿದೆ.

Exit mobile version