Site icon Vistara News

IND vs SA : ಮೊದಲ ಪಂದ್ಯಕ್ಕೆ ರವೀಂದ್ರ ಜಡೇಜಾ ಇಲ್ಲ; ಕಾರಣ ಹೇಳಿದ ರೋಹಿತ್​

Ravindra Jadeja

ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ (IND vs SA) ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಟಾಸ್ ಸೋತ ನಂತರ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ಅನ್ನು ಬಹಿರಂಗಪಡಿಸಿದ ನಾಯಕ ರೋಹಿತ್ ಶರ್ಮಾ, ಬೆನ್ನುನೋವಿನಿಂದ ಬಳಲುತ್ತಿರುವ ಜಡೇಜಾ ಬದಲಿಗೆ ಅಶ್ವಿನ್ ಆಡಲಿದ್ದಾರೆ ಎಂದು ಹೇಳಿದರು. ಅನುಭವಿ ಆಟಗಾರ ಪ್ಲೇಯಿಂಗ್​ ಇಲೆವೆನ್​ನಲ್ಲಿ ಗುಣಮಟ್ಟದ ಸ್ಪಿನ್ನರ್ ಎಂದು ಅವರು ಹೇಳಿಕೊಂಡರು.

ರವೀಂದ್ರ ಜಡೇಜಾ ಪಂದ್ಯದ ದಿನ ಬೆಳಿಗ್ಗೆ ಬೆನ್ನುನೋವಿನಿಂದ ಬಳಲುತ್ತಿದ್ದರು. ಅವರು ಮೊದಲ ಟೆಸ್ಟ್​​ ಆಯ್ಕೆಗೆ ಲಭ್ಯವಿರಲಿಲ್ಲ’ ಎಂದು ಬಿಸಿಸಿಐ ಟ್ವಿಟರ್​ನಲ್ಲಿ ತಿಳಿಸಿದೆ.

“ನಾವು ನಾಲ್ವರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್​ಗಳೊಂದಿಗೆ ಆಡುತ್ತಿದ್ದೇವೆ. ಜಡೇಜಾ ಬದಲಿಗೆ ಅಶ್ವಿನ್ ಆಡುತ್ತಿದ್ದಾರೆ. ಜಡ್ಡು ಸ್ವಲ್ಪ ಬೆನ್ನುನೋವಿನಿಂದ ಬಳಲುತ್ತಿದ್ದರು, ಆದ್ದರಿಂದ ಅಶ್ವಿನ್ ಬರುತ್ತಾರೆ . ಅಶ್ವಿನ್​​ ಗುಣಮಟ್ಟದ ಸ್ಪಿನ್ನರ್ “ಎಂದು ರೋಹಿತ್ ಶರ್ಮಾ ಟಾಸ್ ಸಮಯದಲ್ಲಿ ಹೇಳಿದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಡಿಸೆಂಬರ್ 26 ರಿಂದ ಸೆಂಚೂರಿಯನ್ನ ಸೂಪರ್ಸ್ಪೋರ್ಟ್ಸ್​ ಪಾರ್ಕ್​ನಲ್ಲಿ ಆರಂಭಗೊಂಡಿದೆ. ಪಂದ್ಯಕ್ಕೂ ಮುನ್ನ ಭಾರತ ಯಾವ ಪ್ಲೇಯಿಂಗ್ ಇಲೆವಿನ್​ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು ಎಂಬ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು.

ಭಾರತ ಯಾಕೆ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲುವುದಿಲ್ಲ, ಮಾಜಿ ಆಲ್​ರೌಂಡರ್​ ವಿವರಣೆ ಹೀಗಿದೆ

ಬೆಂಗಳೂರು: ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಡಿಸೆಂಬರ್ 26 ರಂದು ಸೆಂಚೂರಿಯನ್​​ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ (Ind vs SA) ವಿರುದ್ಧ ಸೆಣಸುವ ಮೂಲಕ ಹೊಸ ಟೆಸ್ಟ್ ಸವಾಲನ್ನು ಪ್ರಾರಂಭಿಸಲು ಸಜ್ಜಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಭಾರತೀಯ ತಂಡವು ಇದುವರೆಗೆ ಒಂದ ಬಾರಿಯೂ ಕಾಮನಬಿಲ್ಲ ರಾಷ್ಟ್ರದಲ್ಲಿ ಟೆಸ್ಟ್ ಸರಣಿ ಗೆಲ್ಲುವುದಿಲ್ಲ. ಇದುವರೆಗೆ ಎಂಟು ಪ್ರಯತ್ನಗಳಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. 2010-11ರ ಪ್ರವಾಸದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 1-1ರ ಸಮಬಲ ಸಾಧಿಸಿದ್ದೇ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ.

ಇದನ್ನೂ ಓದಿ : Year Ender 2023 : 5 ಭಾರತೀಯರು ಇರುವ ಈ ವರ್ಷದ ಅತ್ಯುತ್ತಮ ಕ್ರಿಕೆಟ್​ ತಂಡ ಇದು

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಬಗ್ಗೆ ಭಾರತದ ಮಾಜಿ ಕೋಚ್ ಸಂಜಯ್ ಬಂಗಾರ್ ಅವರು ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಉಪಖಂಡದಲ್ಲಿ ಭಾರತ ತಂಡ ಯಾಕೆ ಸರಣಿ ಗೆದ್ದಿಲ್ಲ ಎಂಬದನ್ನು ಅವರು ವಿವರಿಸಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಏಕೆ ಟೆಸ್ಟ್ ಗೆದ್ದಿಲ್ಲ ಎಂದು ಮಾಜಿ ಕೋಚ್ ಸಂಜಯ್ ಬಂಗಾರ್ ವಿವರಿಸಿದ್ದಾರೆ. ಮಾಜಿ ಕ್ರಿಕೆಟಿಗನ ಪ್ರಕಾರ, ದಕ್ಷಿಣ ಆಫ್ರಿಕಾ ವಿರುದ್ಧ ಅವರ ದೇಶದಲ್ಲಿ ಸರಣಿಯನ್ನು ಗೆಲ್ಲಲು ಭಾರತದ ಅಸಮರ್ಥತೆ ಕಾರಣವಲ್ಲ ಎಂದು ಅವರು ಹೇಳಿದ್ದಾರೆ. ಭಾರತ ತಂಡದ ಕ್ರಿಕೆಟ್ ಕೌಶಲ ಅಥವಾ ಅದರ ಕೊರತೆಯಿಂದಲ್ಲ, ಬದಲಾಗಿ ದಕ್ಷಿಣ ಆಫ್ರಿಕಾದಲ್ಲಿ ಪೂರ್ಣ ಪ್ರಮಾಣದ ಟೆಸ್ಟ್ ಸರಣಿಯನ್ನು ಭಾರತ ಎಂದಿಗೂ ಆಡಿಲ್ಲ. ಅದಕ್ಕೆ ಗೆದ್ದಿಲ್ಲ ಎಂದು ಹೇಳಿದ್ದಾರೆ.

“ಭಾರತವು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಏಕೆಂದರೆ ಅಲ್ಲಿ 2 ಅಥವಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಮಾತ್ರ ಆಡಲಾಗುತ್ತಿದೆ . ನಾಲ್ಕು ಅಥವಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಅವಕಾಶ ಸಿಕ್ಕರೆ, ಭಾರತದ ಪ್ರದರ್ಶನದಲ್ಲಿ ಪ್ರತಿಫಲಿಸಲಿದೆ “ಎಂದು ಬಂಗಾರ್ ಹೇಳಿದರು.

Exit mobile version