Site icon Vistara News

KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

KL Rahul

ನವದೆಹಲಿ: ಅಮರಿಕೆ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ಆಯೋಜನೆಗೊಂಡಿರುವ ಮುಂಬರುವ ಟಿ 20 ಐ (T20 World Cup) ವಿಶ್ವಕಪ್​​ ತಂಡವನ್ನು ಪ್ರಕಟಿಸುವಾಗ ಬಿಸಿಸಿಐ ಆಯ್ಕೆ ಮಂಡಳಿ ಅನುಭವಿ ಬ್ಯಾಟರ್​ ಕೆಎಲ್ ರಾಹುಲ್ (KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​ (Ajit Agarkar) ಅವರನ್ನು ಕೈ ಬಿಟ್ಟಿರುವುದು ಚರ್ಚೆಗೆ ಕಾರಣವಾಗಿತ್ತು. ವಿದೇಶಿ ನೆಲದಲ್ಲಿ ಅವರ ಸಾಮರ್ಥ್ಯದ ಹೊರತಾಗಿಯೂ ತಂಡಕ್ಕೆ ಆಯ್ಕೆಯಾಗದಿರುವುದು ಸರಿಯಲ್ಲ ಎಂಬ ದೂಷಣೆಗಳನ್ನು ಆಯ್ಕೆ ಮಂಡಳಿ ಎದುರಿಸಿತ್ತು. ಗುರುವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಗರ್ಕರ್ ಕನ್ನಡಿಗ ಕ್ರಿಕೆಟಿಗನನ್ನು ಯಾಕೆ ಸೇರಿಸಿಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ. ಇದೇ ವೇಳೆ ಹಲವಾರು ಮಾಹಿತಿಗಳನ್ನೂ ನೀಡಿದ್ದಾರೆ.

ಇತ್ತೀಚೆಗೆ ಭಾರತವು ನಾಲ್ಕು ಮೀಸಲು ಆಟಗಾರರು ಸೇರಿದಂತೆ 19 ಸದಸ್ಯರ ಬಲವಾದ ತಂಡವನ್ನು ಆಯ್ಕೆಗಾರರು ಪ್ರಕಟಿಸಿದ್ದರು. ಆದಾಗ್ಯೂ, ಕರ್ನಾಟಕದ ಸ್ಟೈಲಿಶ್ ಬ್ಯಾಟ್ಸ್ಮನ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲಗೊಂಡಿದ್ದರು. ಆಯ್ಕೆದಾರರು ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಅವರನ್ನು ಎರಡು ವಿಕೆಟ್ ಕೀಪಿಂಗ್ ಸ್ಥಾನಗಳಿಗೆ ಆದ್ಯತೆ ನೀಡಿದರು.

ಆಯ್ಕೆಯ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಗರ್ಕರ್, ರಾಹುಲ್ ವಿಶ್ವಕಪ್​ನಿಂದ ವಂಚಿತರಾಗಿರುವುದು ದುರದೃಷ್ಟಕರ ಎಂದು ಬಹಿರಂಗಪಡಿಸಿದ್ದಾರೆ. ಏಕೆಂದರೆ ಭಾರತೀಯ ಥಿಂಕ್ ಟ್ಯಾಂಕ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಕೀಪರ್​ಗಳನ್ನು ಬಯಸಿತ್ತು. ಅದಕ್ಕಾಗಿ ಭಾರತದ ಮಾಜಿ ವೇಗದ ಬೌಲರ್ ಬಹಿರಂಗಪಡಿಸಿದಂತೆ ಸ್ಯಾಮ್ಸನ್ ಮತ್ತು ಪಂತ್ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳಾಗಿ ಆಡಿದ್ದಾರೆ.

“ಕೆಎಲ್ ಅದ್ಭುತ ಆಟಗಾರ. ನಾವು ನೋಡುತ್ತಿದ್ದ ವಿಷಯವೆಂದರೆ ಮಧ್ಯದಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಟಗಾರ. ಡಿಸಿ ಪರ ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಇಬ್ಬರು (ಸ್ಯಾಮ್ಸನ್ ಮತ್ತು ಪಂತ್) ಉತ್ತಮ ಎಂದು ನಾವು ಭಾವಿಸಿದ್ದೇವೆ. ಕೆ.ಎಲ್. ರಾಹುಲ್ ಉತ್ತಮವೋ ಅಥವಾ ರಿಷಭ್ ಪಂತ್ ಉತ್ತಮವೋ ಅಥವಾ ಸಂಜು ಸ್ಯಾಮ್ಸನ್ ಉತ್ತಮವೋ ಎಂಬುದು ಮುಖ್ಯವಲ್ಲ. ಇದು ಬ್ಯಾಟಿಂಗ್ ಸ್ಲಾಟ್​​ಗಳ ಬಗ್ಗೆ (ಆದ್ದರಿಂದ ಪಂತ್ ಮತ್ತು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಯಿತು), “ಎಂದು ಅಗರ್ಕರ್ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ರಾಹುಲ್ ಈ ಐಪಿಎಲ್​ನಲ್ಲಿ 40.60 ಸರಾಸರಿಯಲ್ಲಿ 406 ರನ್ ಗಳಿಸಿದ್ದಾರೆ. 142.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದಾಗ್ಯೂ, ಅವರ ಎಲ್ಲಾ ರನ್​​ಗಳ ಅಗ್ರ ಕ್ರಮಾಂಕದ ಬ್ಯಾಟರ್​​ಗಳಾಗಿ ಆಗಿ ಬಂದಿರುವುದರಿಂದ ಡೈನಾಮಿಕ್ ಬ್ಯಾಟರ್​​ ಅಂತಿಮ ಹದಿನೈದರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

2024ರ ಟಿ20 ವಿಶ್ವಕಪ್​​ಗೆ ಭಾರತ ತಂಡ ಹೀಗಿದೆ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅರ್ಶ್​​ದೀಪ್​ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಮೀಸಲು ಆಟಗಾರರು: ರಿಂಕು ಸಿಂಗ್, ಶುಭ್ಮನ್ ಗಿಲ್, ಖಲೀಲ್ ಅಹ್ಮದ್, ಅವೇಶ್ ಖಾನ್

ವಿಶ್ವ ಕಪ್​ ಗೆಲ್ಲುವುದು ಭಾರತ; ವಿಶ್ವ ಕಪ್​ ವಿಜೇತ ಲಂಕಾ ಆಟಗಾರನ ಸ್ಪಷ್ಟ ನುಡಿ

ನವದೆಹಲಿ: ಜೂನ್ 1 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಟಿ20 ವಿಶ್ವಕಪ್ 2024ಕ್ಕೆ (T20 World Cup) ಭಾರತವು ಪ್ರಬಲ ಸ್ಪರ್ಧಿ ಎಂದು ಶ್ರೀಲಂಕಾದ ಮಾಜಿ ನಾಯಕ ಮತ್ತು ರಾಜಸ್ಥಾನ್ ರಾಯಲ್ಸ್ (Rajasthan Royals​ ) ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಹೇಳಿದ್ದಾರೆ. 2024 ರ ಟಿ 20 ವಿಶ್ವಕಪ್ ಭಾರತದ ತಂಡವನ್ನು ಶ್ಲಾಘಿಸಿದ ಸಂಗಕ್ಕಾರ, ಇದು ಅಸಾಧಾರಣವಾಗಿ ಬಲಿಷ್ಠ ಮತ್ತು ಸಮತೋಲಿತವಾಗಿದೆ ಎಂದು ಬಣ್ಣಿಸಿದರು. ಶ್ರೀಲಂಕಾದ ದಂತಕಥೆ ಟೀಮ್ ಇಂಡಿಯಾದ ಅಸಾಧಾರಣ ಬ್ಯಾಟಿಂಗ್ ಮತ್ತು ಬಹುಮುಖ ಆಲ್​ರೌಂಡರ್​ಗಳ ಶಕ್ತಿಯನ್ನು ಎತ್ತಿ ತೋರಿಸಿದರು. ಜೊತೆಗೆ ಅವರ ಉತ್ತಮ ಗುಣಮಟ್ಟದ ಸ್ಪಿನ್ ಆಯ್ಕೆಗಳಿವೆ. ಇದು ಮೆಗಾ ಈವೆಂಟ್​​ನ ಸಂದರ್ಭಗಳನ್ನು ಅವಲಂಬಿಸಿ ತಂತ್ರಗಾರಿಕೆಯ ಹೊಂದಾಣಿಕೆ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಿವಿಧ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ತಂಡದ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸಂಗಕ್ಕಾರ, ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಕಾರ್ಯತಂತ್ರದ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಟಿ 20 ವಿಶ್ವಕಪ್ ತಂಡದಲ್ಲಿನ ಹೊಸತವನ್ನು ಲೆಜೆಂಡರಿ ಬ್ಯಾಟ್ಸ್ಮನ್ ಎತ್ತಿ ತೋರಿಸಿದರು. ಇದು ಅಪೇಕ್ಷಿತ ಬ್ಯಾಟಿಂಗ್ ಅಥವಾ ಬೌಲಿಂಗ್ ಶಕ್ತಿ ಅವಲಂಬಿಸಿ ವಿಭಿನ್ನ ಸಂಯೋಜನೆಗಳೊಂದಿಗೆ ಆಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಇದು ಬಲಿಷ್ಠ ತಂಡ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಸಂಗಕ್ಕಾರ, “ಇದು ಅತ್ಯಂತ ಬಲಿಷ್ಠ ತಂಡ. ಅವರು ತಮ್ಮ ಬ್ಯಾಟಿಂಗ್ ಬಲ ಹೊಂದಿದ್ದಾರೆ. ಅತ್ಯುತ್ತಮ ಆಲ್​ರೌಂಡರ್​ಗಳನ್ನು ಹೊಂದಿದ್ದಾರೆ. ಅವರು ಉತ್ತಮ ಗುಣಮಟ್ಟದ ಸ್ಪಿನ್ ಹೊಂದಿದ್ದಾರೆ ಮತ್ತು ಅವರು ಆಡಬಹುದಾದ ಉತ್ತಮ ಸಂಯೋಜನೆಗಳನ್ನು ಹೊಂದಿದ್ದಾರೆ. ಅಲ್ಲಿನ ಪರಿಸ್ಥಿತಿಗಳನ್ನು ತಿಳಿದಿರುವ ರಾಹುಲ್ ಮತ್ತು ರೋಹಿತ್, ವಿಶ್ವಕಪ್​ನಲ್ಲಿ ಅವರು ಬಯಸುವ ಕ್ರಿಕೆಟ್ ಆಡಲು ತಂಡ ಹೇಗಿರಬೇಕು ಎಂಬುದರ ಬಗ್ಗೆ ಉತ್ತಮ ಕಲ್ಪನೆಯನ್ನು ಹೊಂದಿದ್ದಾರೆ ಎಂದು ನನಗೆ ಖಾತ್ರಿಯಿದೆ.

Exit mobile version