Site icon Vistara News

AUS vs WI: ತವರಿನಲ್ಲೇ ಆಸೀಸ್​ ಸೊಕ್ಕಡಗಿಸಿದ ವಿಂಡೀಸ್​​; 27 ವರ್ಷಗಳ ಬಳಿಕ ಐತಿಹಾಸಿಕ ಗೆಲುವು

West Indies team pose after their first Test win in Australia in 27 years

ಬ್ರಿಸ್ಬೇನ್: ಬಲಿಷ್ಠ ಆಸ್ಟ್ರೇಲಿಯಾ(AUS vs WI) ತಂಡಕ್ಕೆ ತವರಿನಲ್ಲೇ ಭಾರೀ ಮುಖಭಂಗವಾಗಿದೆ. ವೆಸ್ಟ್​ ಇಂಡೀಸ್​ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ(Australia vs West Indies 2nd Test) ಆಘಾತಕಾರಿ ಸೋಲು ಕಂಡಿದೆ. ಬ್ಯಾಟಿಂಗ್​ ವೇಳೆ ಕಾಲಿನ ಬೆರಳು ಮುರಿತಕ್ಕೊಳಗಾದ ಶಮರ್ ಜೋಸೆಫ್(Shamar Joseph)​ ಅವರ ಘಾತಕ ಬೌಲಿಂಗ್​ ದಾಳಿಗೆ ಸರ್ವಪತನ ಕಂಡ ಆಸ್ಟ್ರೇಲಿಯಾ 8 ರನ್​ಗಳ ಸೋಲಿಗೆ ತುತ್ತಾಯಿತು. 2 ಪಂದ್ಯಗಳ ಟೆಸ್ಟ್​ ಸರಣಿ 1-1 ಸಮಬಲದೊಂದಿಗೆ ಡ್ರಾ ಗೊಂಡಿತು.

8 ರನ್​ಗಳ ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ಐತಿಹಾಸಿಕ ಗೆಲುವಿನ ಸಾಧನೆ ಮಾಡಿತು. ಇದು ವಿಂಡೀಸ್​ಗೆ 27 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಒಲಿದ ಗೆಲುವುವಾಗಿದೆ. ವೆಸ್ಟ್​ ಇಂಡೀಸ್​ ಕೊನೆಯ ಬಾರಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಗೆಲುವು ಕಂಡದ್ದು 1997 ರಲ್ಲಿ. ಇದು ಮಾತ್ರವಲ್ಲದೆ ಹಗಲು-ರಾತ್ರಿ(ಪಿಂಕ್​ ಬಾಲ್​ ಟೆಸ್ಟ್​) ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ವಿಶ್ವದ ಮೊದಲ ತಂಡ ಎಂಬ ಹಿರಿಮೆಗೂ ವಿಂಡೀಸ್​ ತಂಡ ಪಾತ್ರವಾಗಿದೆ.

60 ರನ್​ಗೆ 2 ವಿಕೆಟ್​ ಕಳೆದುಕೊಂಡು ನಾಲ್ಕನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಪಂದ್ಯ ಗೆಲ್ಲಲು 156 ರನ್​ಗಳ ಅತ್ಯವಿತ್ತು. ಕೈಯಲ್ಲಿ ಇನ್ನೂ 8 ವಿಕೆಟ್​ ಕೂಡ ಇತ್ತು. ಎಲ್ಲರ ನಿರೀಕ್ಷೆ ಕೂಡ ಆಸ್ಟ್ರೇಲಿಯಾ ತಂಡದ ಪರವಾಗಿಯೇ ಇತ್ತು. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳದೆ ಆಡಲಿಳಿದ ವಿಂಡೀಸ್​ ಆಟಗಾರರು ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ಸಂಘಟಿಸಿ ಆಸೀಸ್​ಗೆ ಸೋಲಿನ ಶಾಕ್​ ನೀಡುವಲ್ಲಿ ಯಶಸ್ವಿಯಾಗಿತು. 33 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಸ್ಟೀವನ್​ ಸ್ಮಿತ್ ನಾಲ್ಕನೇ ದಿನದಾಟದಲ್ಲಿಯೂ ಏಕಾಂಗಿಯಾಗಿ ಹೋರಾಡಿ ಅಜೇಯ 91 ರನ್​ ಬಾರಿಸಿದರು. ಮತ್ತೊಂದು ತುದಿಯಲ್ಲಿ ಅವರಿಗೆ ಯಾರು ಸಾಥ್​ ನೀಡಿದ ಕಾರಣ ಸೋಲು ಎದುರಾಯಿತು. 9 ರನ್​ ಗಳಿಸಿದ್ದ ಕ್ಯಾಮರೂನ್​ ಗ್ರೀನ್​ 42 ರನ್​ ಗಳಿಸಿ ಔಟಾದರು. ಅಂತಿಮವಾಗಿ ಕಾಂಗರೂ ಪಡೆ 207 ರನ್ ಗಳಿಗೆ ಆಲೌಟಾಗಿ ಸೋಲು ಕಂಡಿತು. ಮೊದಲ ಇನಿಂಗ್ಸ್​ನಲ್ಲಿ 311 ರನ್​ಗಳಿಸಿದ್ದ ವಿಂಡೀಸ್​ ದ್ವಿತೀಯ ಇನಿಂಗ್ಸ್​ನಲ್ಲಿ 193ರನ್​ ಬಾರಿಸಿತ್ತು.

ಇದನ್ನೂ ಓದಿ IND vs ENG: ಬೆನ್ ಸ್ಟೋಕ್ಸ್ ಕ್ಲೀನ್​ ಬೌಲ್ಡ್​ ಮಾಡಿ ಕಪಿಲ್​ ದೇವ್ ದಾಖಲೆ ಸರಿಗಟ್ಟಿದ ಅಶ್ವಿನ್

ಸೇಡು ತೀರಿಸಿಕೊಂಡ ಶಮರ್ ಜೋಸೆಫ್


ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶಮರ್ ಜೋಸೆಫ್ ಬ್ಯಾಟಿಂಗ್​ ನಡೆಸುವ ವೇಳೆ ಮಿಚೆಲ್​ ಸ್ಟಾರ್ಕ್​ ಅವರು ಎಸೆತ ಯಾರ್ಕರ್​ ಎಸೆತಕ್ಕೆ ಕಾಲಿನ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಗಾಯಗೊಂಡ ಜೋಸೆಫ್​ಗೆ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದರೂ ಕೂಡ ಗಾಯ ಗಂಭೀರವಾದ ಪರಿಣಾಮ ಅವರಿಂದ ಎದ್ದು ನಿಲ್ಲಲೂ ಆಗಿರಲಿಲ್ಲ. ಹೀಗಾಗಿ ಅವರು ರಿಟೈರ್ಡ್​ ಔಟ್​ ಆಗಿ ಕುಂಟುತಾ ಮೈದಾನ ತೊರೆದಿದ್ದರು. ಅವರನ್ನು ಸಹ ಆಟಗಾರರು ಭುಜದ ಬಲದಿಂದ ಮೈದಾನದಿಂದ ಡ್ರೆಸ್ಸಿಂಗ್​ ರೂಮ್​ಗೆ ಕರೆ ತಂದಿದ್ದರು. ನೋವಿನಿಂದ ನರಳಿದ್ದ ಅವರು ಈ ಸೇಡನ್ನು ಬೌಲಿಂಗ್​ ಮೂಲಕ ತೋರ್ಪಡಿಸಿ 7 ವಿಕೆಟ್​ ಕಿತ್ತು ಆಸೀಸ್​ ಸೊಕ್ಕಡಗಿಸಿದರು.

Shamar Joseph
Exit mobile version