Site icon Vistara News

INDvsPAK | ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಆಡುವುದಿಲ್ಲ, ಬಿಸಿಸಿಐ ಸಭೆಯಲ್ಲಿ ಸ್ಪಷ್ಟನೆ

ಮುಂಬಯಿ : ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ತಟಸ್ಥ ಸ್ಥಳದಲ್ಲಿ ದ್ವಿಪಕ್ಷೀಯ ಸರಣಿಗಳು ನಡೆಯುತ್ತವೆ ಎಂಬ ನಿರೀಕ್ಷೆಗಳು ಸುಳ್ಳಾಗಿವೆ. ಭಾನುವಾರ (ಜನವರಿ 1ರಂದು) ನಡೆದ ಟೀಮ್​ ಇಂಡಿಯಾದ ಪ್ರದರ್ಶನ ಪರಾಮರ್ಶೆ ಸಭೆಯಲ್ಲಿ ಬಿಸಿಸಿಐ ಅಧಿಕಾರಿಗಳು ಈ ಯೋಜನೆಗೆ ಸಮ್ಮತಿ ಸೂಚಿಸಿಲ್ಲ.

ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಪರಸ್ಪರ ಉಭಯ ದೇಶಗಳಿಗೆ ಪ್ರವಾಸ ಮಾಡಲು ಸಾಧ್ಯವಾಗದ ಹೊರತಾಗಿಯೂ, ಯುಎಇ ಆಸ್ಟ್ರೇಲಿಯಾದಂಥ ತಟಸ್ಥ ತಾಣದಲ್ಲಿ ಪಂದ್ಯ ನಡೆಸಬಹುದು ಎಂದು ಕ್ರಿಕೆಟ್​ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಕ್ಲಬ್​ ಈ ಯೋಜನೆಯ ಬಗ್ಗೆ ಇತ್ತೀಚೆಗೆ ಪ್ರಸ್ತಾಪವೊಂದನ್ನು ಮಾಡಿತ್ತು. ಈ ವಿಚಾರ ಭಾನುವಾರ ನಡೆದ ಸಭೆಯಲ್ಲೂ ಚರ್ಚೆಗೆ ಬಂದಿತ್ತು ಎನ್ನಲಾಗಿದೆ. ಆದರೆ, ಬಿಸಿಸಿಐ ನೂತನ ಅಧ್ಯಕ್ಷ ರೋಜರ್​ ಬಿನ್ನಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಈ ಬಗ್ಗೆ ಉತ್ಸಾಹ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.

2007ರಿಂದ ಭಾರತ ಕ್ರಿಕೆಟ್​ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಿಲ್ಲ. ಎರಡೂ ದೇಶಗಳ ನಡುವೆ ಗಡಿ ತಂಟೆ ಹಾಗೂ ರಾಜಕೀಯ ಭಿನ್ನಾಭಿಪ್ರಾಯ ಇರುವ ಕಾರಣ ಸರಣಿ ಆಯೋಜನೆ ಸಾಧ್ಯವಾಗುತ್ತಿಲ್ಲ. ಆದರೆ, ಅತಿ ಹೆಚ್ಚು ಆದಾಯ ತಂದುಕೊಡುವ ಈ ಸರಣಿಯನ್ನು ನಡೆಸುವುದು ಹಲವರ ಅಭಿಪ್ರಾಯವಾಗಿದೆ. ಆದರೆ, ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.

ಇದನ್ನೂ ಓದಿ | BCCI Meeting | ಹೊಸ ವರ್ಷಕ್ಕೆ ಸಭೆ ಕರೆದ ಬಿಸಿಸಿಐ; ಕೋಚ್ ದ್ರಾವಿಡ್​, ನಾಯಕ ರೋಹಿತ್​ಗೆ ನಡುಕ!

Exit mobile version