ಜೊಹಾನ್ಸ್ಬರ್ಗ್ : ದಕ್ಷಿಣ ಆಫ್ರಿಕಾ ತಂಡದ ಪರ ಎರಡು ವಿಶ್ವ ಕಪ್ ಆಡಿರುವ ಆಲ್ರೌಂಡರ್ ಡ್ವೇನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸೋಮವಾರ (ಜನವರಿ 9ರಂದು) ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಈ ಮಾಹಿತಿಯನ್ನು ಪ್ರಕಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ಅವರು ಐಪಿಎಲ್ನಲ್ಲಿ ಆಟ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಜತೆಗೆ ಬೇರೆ ಕ್ರಿಕೆಟ್ ಲೀಗ್ಗಳಲ್ಲೂ ಪಾಲ್ಗೊಳ್ಳಲಿದ್ದಾರೆ.
ಪ್ರಿಟೋರಿಯಸ್ 2016ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಪದಾರ್ಪಣೆ ಮಾಡಿರುವ ಅವರು 30 ಟಿ20 ಪಂದ್ಯಗಳು, 27 ಏಕದಿನ ಪಂದ್ಯಗಳು ಹಾಗೂ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ನಿವೃತ್ತಿ ಹೇಳಿಕೆ ಪ್ರಕಟಿಸಿದ ಅವರು, ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಎಂಬುದಾಗಿ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಾನು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರವೊಂದನ್ನು ಕೈಗೊಂಡೆ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದೆ. ಟಿ20 ಹಾಗೂ ಇನ್ನಿತರ ಚುಟುಕು ಕ್ರಿಕೆಟ್ ಕಡೆಗೆ ಗಮನ ಹರಿಸುವುದೇ ಈ ನಿರ್ಧಾರದ ಹಿನ್ನೆಲೆ ಎಂಬುದಾಗಿ ಅವರು ಹೇಳಿದ್ದಾರೆ.
ಇದೇ ವೇಳೆ ಅವರು ವೃತ್ತಿ ಕ್ರಿಕೆಟ್ನಲ್ಲಿ ತಮ್ಮ ನೆರವಿಗೆ ನಿಂತಿರುವ ಕೋಚ್ಗಳು, ತಂಡದ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ. ಅಂದಾಜಿನ ಪ್ರಕಾರ ಅವರ ಲೀಗ್ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದಾರೆ. ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವುದು ಅವರ ಉದ್ದೇಶವಾಗಿದೆ.
ಇದನ್ನೂ ಓದಿ | Hardik Pandya | ವಿಜಯದ ಶ್ರೇಯಸ್ಸನ್ನು ಐಪಿಎಲ್ ಕೋಚ್ ಆಶೀಶ್ ನೆಹ್ರಾಗೆ ಅರ್ಪಿಸಿದ ನಾಯಕ ಪಾಂಡ್ಯ