Dwaine Pretorius | ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ದ. ಆಫ್ರಿಕಾದ ಆಲ್​ರೌಂಡರ್​, ಐಪಿಎಲ್​ನಲ್ಲಿ ಆಡುವರೇ ಅವರು? - Vistara News

ಕ್ರಿಕೆಟ್

Dwaine Pretorius | ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ದ. ಆಫ್ರಿಕಾದ ಆಲ್​ರೌಂಡರ್​, ಐಪಿಎಲ್​ನಲ್ಲಿ ಆಡುವರೇ ಅವರು?

ಟಿ20 ಕ್ರಿಕೆಟ್​ ಲೀಗ್​ಗಳ ಕಡೆಗೆ ಗಮನ ಹರಿಸುವ ಉದ್ದೇಶದಿಂದ ಡ್ವೆನ್​ ಪ್ರಿಟೋರಿಯಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

VISTARANEWS.COM


on

pretorious
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೊಹಾನ್ಸ್​ಬರ್ಗ್​​ : ದಕ್ಷಿಣ ಆಫ್ರಿಕಾ ತಂಡದ ಪರ ಎರಡು ವಿಶ್ವ ಕಪ್​ ಆಡಿರುವ ಆಲ್​ರೌಂಡರ್​ ಡ್ವೇನ್​ ಪ್ರಿಟೋರಿಯಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಸೋಮವಾರ (ಜನವರಿ 9ರಂದು) ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆ ಈ ಮಾಹಿತಿಯನ್ನು ಪ್ರಕಟಿಸಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಭಾಗವಾಗಿರುವ ಅವರು ಐಪಿಎಲ್​ನಲ್ಲಿ ಆಟ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಜತೆಗೆ ಬೇರೆ ಕ್ರಿಕೆಟ್​ ಲೀಗ್​ಗಳಲ್ಲೂ ಪಾಲ್ಗೊಳ್ಳಲಿದ್ದಾರೆ.

ಪ್ರಿಟೋರಿಯಸ್​ 2016ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಪದಾರ್ಪಣೆ ಮಾಡಿರುವ ಅವರು 30 ಟಿ20 ಪಂದ್ಯಗಳು, 27 ಏಕದಿನ ಪಂದ್ಯಗಳು ಹಾಗೂ ಮೂರು ಟೆಸ್ಟ್​ ಪಂದ್ಯಗಳಲ್ಲಿ ಆಡಿದ್ದಾರೆ. ನಿವೃತ್ತಿ ಹೇಳಿಕೆ ಪ್ರಕಟಿಸಿದ ಅವರು, ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಎಂಬುದಾಗಿ ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ನಾನು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರವೊಂದನ್ನು ಕೈಗೊಂಡೆ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದೆ. ಟಿ20 ಹಾಗೂ ಇನ್ನಿತರ ಚುಟುಕು ಕ್ರಿಕೆಟ್​ ಕಡೆಗೆ ಗಮನ ಹರಿಸುವುದೇ ಈ ನಿರ್ಧಾರದ ಹಿನ್ನೆಲೆ ಎಂಬುದಾಗಿ ಅವರು ಹೇಳಿದ್ದಾರೆ.

ಇದೇ ವೇಳೆ ಅವರು ವೃತ್ತಿ ಕ್ರಿಕೆಟ್​ನಲ್ಲಿ ತಮ್ಮ ನೆರವಿಗೆ ನಿಂತಿರುವ ಕೋಚ್​ಗಳು, ತಂಡದ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ. ಅಂದಾಜಿನ ಪ್ರಕಾರ ಅವರ ಲೀಗ್ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದಾರೆ. ಐಪಿಎಲ್​ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳುವುದು ಅವರ ಉದ್ದೇಶವಾಗಿದೆ.

ಇದನ್ನೂ ಓದಿ | Hardik Pandya | ವಿಜಯದ ಶ್ರೇಯಸ್ಸನ್ನು ಐಪಿಎಲ್​ ಕೋಚ್​ ಆಶೀಶ್​ ನೆಹ್ರಾಗೆ ಅರ್ಪಿಸಿದ ನಾಯಕ ಪಾಂಡ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಬೈರ್​ಸ್ಟೋವ್​ ಸ್ಫೋಟಕ ಶತಕ; ಕೆಕೆಆರ್​ ವಿರುದ್ಧ ಪಂಜಾಬ್​​ಗೆ ವಿಶ್ವ ದಾಖಲೆಯ ವಿಜಯ

IPL 2024 : ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೋಲ್ಕೊತಾ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 261 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 18.4 ಓವರ್​ಗಳಲ್ಲಿ ಕೇವಲ 2 ವಿಕೆಟ್ ನಷ್ಟ ಮಾಡಿಕೊಂಡು 262 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
Koo

ಕೋಲ್ಕೊತಾ: ಇಲ್ಲಿನ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮತ್ತೊಂದು ಐಪಿಎಲ್ (IPL 2024)​ ದಾಖಲೆ ಸೃಷ್ಟಿಯಾಗಿದೆ. ಐಪಿಎಲ್​ ಇತಿಹಾಸದಲ್ಲಿ ಗರಿಷ್ಠ ರನ್​ಗಳನ್ನು ಚೇಸ್ ಮಾಡಿದ ಖ್ಯಾತಿಯನ್ನು ಪಂಜಾಬ್ ಕಿಂಗ್ಸ್​​ ತಂಡ ತನ್ನದಾಗಿಸಿಕೊಂಡಿದೆ. ಆತಿಥೇಯ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ನೀಡಿದ್ದ 262 ರನ್​​ಗಳನ್ನು ಗುರಿಯನ್ನು ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಮೀರಿದ ಪಂಜಾಬ್ ತಂಡ 8 ವಿಕೆಟ್​ಗಳ ವಿಶ್ವ ದಾಖಲೆಯ ವಿಜಯವನ್ನು ತನ್ನದಾಗಿಸಿಕೊಂಡಿದೆ. ಆರಂಭಿಕ ಬ್ಯಾಟರ್​ ಜಾನ್​ ಬೈರ್​ಸ್ಟೋವ್ 49 ಎಸೆತಗಳಲ್ಲಿ ಅಜೇಯ 108 ರನ್​ (ಶತಕ) ಬಾರಿಸಿದರೆ ಶಶಾಂಕ್ ಸಿಂಗ್ ಮತ್ತೊಂದು ಬಾರಿ ಅಬ್ಬರದ ಪ್ರದರ್ಶನ ನೀಡಿ 28 ಎಸೆತಕ್ಕೆ 68 ರನ್ ಬಾರಿಸಿ ​ (ಅರ್ಧ ಶತಕ) ತಂಡಕ್ಕೆ ಗೆಲುವು ತಂದುಕೊಟ್ಟರು. ಪಂದ್ಯಾವಳಿಯ ಅತ್ಯಂತ ಬಲಿಷ್ಠ ತಂಡ ಎನಿಸಿಕೊಂಡಿದ್ದ ಕೋಲ್ಕೊತಾ ಇದೀಗ ದುರ್ಬಲ ಎಂದು ಕರೆಸಿಕೊಂಡಿದ್ದ ಪಂಜಾಬ್ ವಿರುದ್ಧ ಹೀನಾಯ ಸೋಲಿಗೆ ಒಳಗಾಗಿದೆ.

ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೋಲ್ಕೊತಾ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 261 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 18.4 ಓವರ್​ಗಳಲ್ಲಿ ಕೇವಲ 2 ವಿಕೆಟ್ ನಷ್ಟ ಮಾಡಿಕೊಂಡು 262 ರನ್ ಬಾರಿಸಿ ಗೆಲುವು ಸಾಧಿಸಿತು. ಇದು ಪಂಜಾಬ್ ತಂಡಕ್ಕೆ ಹಾಲಿ ಆವೃತ್ತಿಯ 9 ಪಂದ್ಯಗಳಲ್ಲಿ ದೊರಕಿದ ಮೂರನೇ ಗೆಲುವಾಗಿದೆ. ಇದೇ ವೇಳೆ ಕೆಕೆಆರ್​ ತಂಡಕ್ಕೆ 8 ರಲ್ಲಿ ಮೂರು ಸೋಲು ಎದುರಾಯಿತು.

2020ರ ಆವೃತ್ತಿಯ ಐಪಿಎಲ್​ನಲ್ಲಿ ಪಂಜಾಬ್ ತಂಡ ನೀಡಿದ್ದ 224 ರನ್​ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್​ ತಂಡ ಮೀರಿದ್ದು ಇದುವರೆಗಿನ ಗರಿಷ್ಠ ರನ್​ಗಳ ಚೇಸಿಂಗ್​ ದಾಖಲೆಯಾಗಿತ್ತು. ತನ್ನ ವಿರುದ್ಧ ಮಾಡಿದ್ದ ದಾಖಲೆಯನ್ನು ಪಂಜಾಬ್ ಬೇರೊಂದು ತಂಡವನ್ನು ಸೋಲಿಸುವ ಮೂಲಕ ತನ್ನ ಹೆಸರು ಬರೆದುಕೊಂಡಿತು. ಆ ಪಂದ್ಯವು ಯುಎಇನ ಶಾರ್ಜಾದಲ್ಲಿ ನಡೆದಿತ್ತು.

ಅನಿರೀಕ್ಷಿತ ಫಲಿತಾಂಶ

ಬ್ಯಾಟಿಂಗ್​ನಲ್ಲಿ ಅಷ್ಟೇನೂ ಬಲಿಷ್ಠ ಎನಿಸಕೊಳ್ಳದ ಪಂಜಾಬ್ ಈ ಪಂದ್ಯವನ್ನು ಗೆಲ್ಲುವುದು ಅಸಾಧ್ಯ ಎಂದು ಅಂದುಕೊಳ್ಳಲಾಗಿತ್ತು. ಆದರೆ, ಆರಂಭದಲ್ಲಿಯೇ ಪಂಜಾಬ್ ತಂಡದ ಆಟಗಾರರು ಅಬ್ಬರಿಸಿದರು. ಪ್ರಭ್ ಸಿಮ್ರಾನ್ ಸಿಂಗ್​ 20 ಎಸೆತಗಳಲ್ಲಿ 54 ರನ್ ಬಾರಿಸಿ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟರೆ ಬೈರ್​ಸ್ಟೋವ್ ಅದನ್ನು ಮುಂದುವರಿಸಿದರು. ಪ್ರಭ್​ ಸಿಮ್ರಾನ್ ಸಿಂಗ್​ ಅನಗತ್ಯ ರನ್​ಔಟ್​ಗೆ ಬಲಿಯಾದ ಬಳಿಕ ಬಂದ ರೀಲೀ ರೊಸ್ಸೊ 26 ರನ್ ಬಾರಿಸಿ ನಿರ್ಗಮಿಸಿದರು.

ಎರಡು ವಿಕೆಟ್​ಗಳು ಪತನಗೊಂಡ ಬಳಿಕ ರನ್​ ಗಳಿಕೆ ಕುಗ್ಗಬಹುದು ಎಂಬ ಅಂದಾಜು ಕೂಡ ಸರಿಯಾಗಲಿಲ್ಲ .ಪಂಜಾಬ್​ ಪರ ಆಪತ್ಬಾಂಧವ ಎನಿಸಿಕೊಂಡಿರುವ ಶಶಾಂಕ್ ಸಿಂಗ್ ಮತ್ತೊಂದು ಸೂಪರ್ ಇನಿಂಗ್ಸ್ ಆಡಿದರು. 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದಾಗ ಪಂಜಾಬ್​ ಗೆಲುವಿನ ಸನಿಹಕ್ಕೆ ಬಂತು. ಶಶಾಂಕ್ 8 ಸಿಕ್ಸರ್​ಗಳನ್ನು ಬಾರಿಸಿ ಪ್ರೇಕ್ಷಕರನ್ನು ರಂಜಿಸಿದರು. ಅದಕ್ಕಿಂತ ಮೊದಲು 45 ಎಸೆತಗಳಲ್ಲಿ ಶತಕ ಬಾರಿಸಿ ಬೈರ್​ಸ್ಟೋವ್ ಗೆಲುವಿನ ರೂವಾರಿ ಎನಿಸಿಕೊಂಡರು. ಅವರ ಇನಿಂಗ್ಸ್​ನಲ್ಲಿ 9 ಸಿಕ್ಸರ್ ಹಾಗೂ 8 ಫೋರ್​ಗಳಿದ್ದವು. ಇಬ್ಬರೂ ಅಜೇಯರಾಗಿ ಉಳಿದರು.

ಇದನ್ನೂ ಓದಿ: Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

ಕೋಲ್ಕೊತಾದ ಅಬ್ಬರ

ಮೊದಲು ಬ್ಯಾಟ್​ ಮಾಡಿದ ಕೋಲ್ಕತಾ ತಂಡವೂ ಎಕ್ಸ್​ಪ್ರೆಸ್​ ವೇಗದಲ್ಲಿ ರನ್ ಗಳಿಸಿತು. ಫಿಲ್ ಸಾಲ್ಟ್​ 37 ಎಸೆತಕ್ಕೆ 75 ರನ್ ಗಳಿಸಿದರೆ ಸುನಿಲ್ ನರೈನ್​ 32 ಎಸೆತಕ್ಕೆ 71 ರನ್ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್​​ಗೆ 138 ರನ್ ಬಾರಿಸಿತು. ವೆಂಕಟೇಶ್ ಅಯ್ಯರ್​ 39, ಆ್ಯಂಡ್ರೆ ರಸೆಲ್​ 24 ಹಾಗೂ ಶ್ರೇಯಸ್​ ಅಯ್ಯರ್​ 28 ರನ್ ಹೊಡೆದರು. ದೊಡ್ಡ ಮೊತ್ತವು ಕೋಲ್ಕೊತಾ ತಂಡಕ್ಕೆ ಬಹುತೇಕ ಜಯನ್ನು ನೀಡಿತ್ತು. ಆದರೆ, ಅದು ಸುಳ್ಳಾಯಿತು.

Continue Reading

ಕ್ರೀಡೆ

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

VISTARANEWS.COM


on

Pandya brothers
Koo

ಬೆಂಗಳೂರು: ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಐಪಿಎಲ್​ನ ಸ್ಟಾರ್ ಸಹೋದರರು (Pandya Brothers). ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದರೆ, ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಸ್ಪಿನ್ ಆಲ್ರೌಂಡರ್ ಆಗಿದ್ದಾರೆ. ಸಹೋದರರು ಒಟ್ಟಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ಬಹುತೇಕ ಏಕ ಕಾಲಕ್ಕೆ ಖ್ಯಾತಿ ಗಳಿಸಿದರು. ಇಬ್ಬರೂ ಒಂದು ಕಾಲದಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದರು. ನಂತರ ವಿವಿಧ ಫ್ರಾಂಚೈಸಿಗಳಿಗೆ ಹೋದರು. 2024 ರ ಋತುವಿಗೆ ಮುಂಚಿತವಾಗಿ, ಹಾರ್ದಿಕ್ ಮುಂಬೈ ಇಂಡಿಯನ್ಸ್​ಗೆ ನಾಯಕನಾಗಿ ಮರಳಿದರು. ಈ ಸಹೋದರರ ಮನೆಗೆ ಹೊಸ ಅತಿಥಿಯೊಬ್ಬ ಆಗಮಿಸಿದ್ದಾನೆ.

ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಕುರಿ ಶರ್ಮಾ ಅವರ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅದಕ್ಕೆ ವಾಯು ಎಂಬ ಹೆಸರಿಟ್ಟಿದ್ದಾರೆ. ಹೊಸ ಸದಸ್ಯನನ್ನು ಪಾಂಡ್ಯ ಕುಟುಂಬ ಶುಕ್ರವಾರ ಅದ್ಧೂರಿಯಿಂದ ಸ್ವಾಗತಿಸಿದೆ. ಆ ಚಿತ್ರಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಆಲ್​ರೌಂಡರ್​ ಕೃನಾಲ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ತಮ್ಮ ಫ್ರಾಂಚೈಸಿಗಾಗಿ ಹೆಚ್ಚು ಎಕಾನಮಿಕಲ್​ ಆಗಿರುವ ನಾಲ್ಕು ಓವರ್​ಗಳನ್ನು ಎಸೆದಿದ್ದಾರೆ. ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 33ರ ಹರೆಯದ ಪಾಂಡ್ಯ ಈ ಸಾಧನೆ ಮಾಡಿದ್ದಾರೆ.

ಪಾಂಡ್ಯ ನಾಲ್ಕು ಓವರ್​ಗಳಲ್ಲಿ 2.75 ಎಕಾನಮಿ ರೇಟ್​​ನಲ್ಲಿ 11 ರನ್​ ನೀಡಿ 3 ವಿಕೆಟ್​ ಪಡೆದಿದ್ದಾರೆ. ಸಾಯಿ ಸುದರ್ಶನ್, ಬಿ.ಆರ್.ಶರತ್ ಮತ್ತು ದರ್ಶನ್ ನಲ್ಕಂಡೆ ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಇದನ್ನೂ ಓದಿ: Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

ಇದು ಐಪಿಎಲ್​​ನಲ್ಲಿ ಎಲ್ಎಸ್ಜಿ ಬೌಲರ್ ಗಳಿಸಿದ ನಾಲ್ಕು ಓವರ್ಗಳ ಅತ್ಯಂತ ಎಕಾನಮಿ ಸ್ಪೆಲ್ ಆಗಿದೆ. 2022ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್​ಗಳಲ್ಲಿ 11 ರನ್ಗೆ 2 ವಿಕೆಟ್ ಪಡೆದ ತಮ್ಮದೇ ದಾಖಲೆಯನ್ನು ಪಾಂಡ್ಯ ಮುರಿದರು. ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್​​ಗಳಲ್ಲಿ 14 ರನ್​ಗೆ 5 ವಿಕೆಟ್ ಪಡೆದಿದ್ದರು.

ಕೃನಾಲ್ ಗುಜರಾತ್​​ ವಿರುದ್ಧ ಆಡಲು ಇಷ್ಟಪಡುತ್ತಾರೆ ಅಂಕಿ ಅಂಶಗಳು ಅದನ್ನು ಸಾಬೀತುಪಡಿಸುತ್ತವೆ. ಐದು ಪಂದ್ಯಗಳಲ್ಲಿ, ಅವರು ಫ್ರಾಂಚೈಸಿ ವಿರುದ್ಧ 17.66 ಸರಾಸರಿಯಲ್ಲಿ ಮತ್ತು 5.3 ಎಕಾನಮಿ ರೇಟ್​​ನಲ್ಲಿ ಆರು ವಿಕೆಟ್​ ಪಡೆದಿದ್ದಾರೆ. ಜಿಟಿ ವಿರುದ್ಧ ಅವರು 20 ಸ್ಟ್ರೈಕ್ ರೇಟ್ ಸಹ ಕಾಯ್ದುಕೊಂಡಿದ್ದಾರೆ. ಜಿಟಿ ವಿರುದ್ಧ ಐದು ಇನ್ನಿಂಗ್ಸ್​ಗಳಲ್ಲಿ 17.00 ಸರಾಸರಿಯಲ್ಲಿ 51 ರನ್ ಗಳಿಸಿದ್ದಾರೆ. ಅಜೇ 23 ಅತ್ಯುತ್ತಮ ಸ್ಕೋರ್.

Continue Reading

ಪ್ರಮುಖ ಸುದ್ದಿ

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Mohammad Shami: ಮೊಹಮ್ಮದ್ ಶಮಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್​ಡಮ್​​​ಗೆ ಕಳುಹಿಸಲಾಗಿತ್ತು. ಇದೀಗ ಹೆಚ್ಚಿನ ಪುನಶ್ಚೇತನಕ್ಕಾಗಿ ಶಮಿ ಭಾರತಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಗಾಯವು ಸರಿಯಾಗಿ ಗುಣವಾಗಲು ಕನಿಷ್ಠ 4-5 ತಿಂಗಳುಗಳು ಬೇಕಾಗುವುದರಿಂದ ವೇಗಿ ಮುಂಬರುವ ಟಿ 20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

VISTARANEWS.COM


on

Mohammad Shami
Koo

ಲಖನೌ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammad Shami) ಶುಕ್ರವಾರ (ಏಪ್ರಿಲ್​ 26ರಂದು) ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದರು. 2023 ರ ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮೊಹಮ್ಮದ್ ಶಮಿ, ಪಂದ್ಯಾವಳಿಯ ಸಮಯದಲ್ಲಿ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದರು. ಇದೀಗ ಸರ್ಜರಿಗೆ ಒಳಗಾಗಿದ್ದು ಅದರ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಅವರು ಮತದಾನ ಮಾಡಿದ್ದಾರೆ.

ಮೊಹಮ್ಮದ್ ಶಮಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್​ಡಮ್​​​ಗೆ ಕಳುಹಿಸಲಾಗಿತ್ತು. ಇದೀಗ ಹೆಚ್ಚಿನ ಪುನಶ್ಚೇತನಕ್ಕಾಗಿ ಶಮಿ ಭಾರತಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಗಾಯವು ಸರಿಯಾಗಿ ಗುಣವಾಗಲು ಕನಿಷ್ಠ 4-5 ತಿಂಗಳುಗಳು ಬೇಕಾಗುವುದರಿಂದ ವೇಗಿ ಮುಂಬರುವ ಟಿ 20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

ಮೊಹಮ್ಮದ್ ಶಮಿ ಮೈದಾನದಿಂದ ಹೊರಗಿರುವುದರಿಂದ ಅವರು ಭಾರತೀಯ ಪ್ರಜೆಯಾಗಿ ತಮ್ಮ ಕರ್ತವ್ಯವನ್ನು ಪೂರೈಸಲು ಮರೆಯಲಿಲ್ಲ. ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದರು.

ಇದನ್ನೂ ಓದಿ: IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

ಶಮಿ ಅವರ ಕ್ಷೇತ್ರವಾದ ಅಮ್ರೋಹಾ ಸೇರಿದಂತೆ ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು. , ಅವರು ಗಾಯದ ಹಿನ್ನಡೆಯಿಂದ ಬಳಲುತ್ತಿದ್ದರೂ ಮತ ಚಲಾಯಿಸಲು ಬಂದರು. ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಆಯ್ಕೆಯ ಸರ್ಕಾರವನ್ನು ಆಯ್ಕೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು ಎಂದು ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟರು.

ವಿಶೇಷವೆಂದರೆ, ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಿಗದಿಯಾಗಿರುವ ತವರು ಸರಣಿಯ ಸಮಯದಲ್ಲಿ ಶಮಿ ಈ ವರ್ಷದ ಕೊನೆಯಲ್ಲಿ ಮೈದಾನಕ್ಕೆ ಮರಳುವ ನಿರೀಕ್ಷೆಯಿಲ್ಲ. ಅವರ ಅನುಪಸ್ಥಿತಿಯು ಮುಂಬರುವ ಟಿ 20 ವಿಶ್ವಕಪ್​​ಗೆ ಭಾರತೀಯ ಸಂಯೋಜನೆಗೆ ಖಂಡಿತವಾಗಿಯೂ ಹಾನಿ ಮಾಡುತ್ತದೆ. ಏಕೆಂದರೆ ಆಯ್ಕೆದಾರರು ವೇಗದ ಬೌಲಿಂಗ್ ಆಯ್ಕೆಗಳ ಕೊರತೆಯನ್ನು ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದ್ದರೆ, ಅವರ ಉಳಿದ ಪಡೆಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ.

Continue Reading

ಕ್ರೀಡೆ

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

IPL 2024: ರಾಜಸ್ಥಾನ್ ರಾಯಲ್ಸ್ ಅತ್ಯಂತ ವಿನಾಶಕಾರಿ ಬ್ಯಾಟಿಂಗ್ ಲೈನ್ಅಪ್ ಹೊಂದಿರುವುದರಿಂದ ಕೆಎಲ್ ರಾಹುಲ್​​ಗೆ ತಮ್ಮ ಬೌಲರ್​ಗಳಿಂದ ಬಲವಾದ ನೆರವು ಬೇಕಾಗಿದೆ. ರವಿ ಬಿಷ್ಣೋಯ್ ಮತ್ತು ಕೃಣಾಲ್ ಪಾಂಡ್ಯ ಪಿಚ್​ನ ನಿಧಾನಗತಿಯ ಸ್ವರೂಪವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು.

VISTARANEWS.COM


on

IPL 2024
Koo

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 44 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lacknow super Gaints) ಮತ್ತು ರಾಜಸ್ಥಾನ್ ರಾಯಲ್ಸ್ (Rajastan Royals) ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಪಂದ್ಯವು ರೋಚಕ ಫಲಿತಾಂಶನೀ ಭರವಸೆ ನೀಡುತ್ತಿದೆ. ಸೂಪರ್ ಜೈಂಟ್ಸ್ ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಹೀಗಾಗಿ ಆತ್ಮವಿಶ್ವಾಸದಿಂದ ಸಾಗಲಿದೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಆಡಿದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದೆ ಮತ್ತು ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ.

ರಾಜಸ್ಥಾನ್ ತಮ್ಮ ಖಾತೆಗೆ ಮತ್ತೊಂದು ಗೆಲುವನ್ನು ಸೇರಿಸುವ ಮೂಲಕ ಮುಂಚೂಣಿ ಸ್ಥಾನ ಉಳಿಸಿಕೊಳ್ಳಲು ನೋಡಲಿದೆ. ಈ ಋತುವಿನ ಆರಂಭದಲ್ಲಿ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿರುವ ರಾಯಲ್ಸ್ ಆತ್ಮವಿಶ್ವಾಸದಲ್ಲಿದೆ. ಆದಾಗ್ಯೂ, ಲಕ್ನೋ ತವರಿನ ಅನುಕೂಲ ಹೊಂದಿರುತ್ತದೆ ಮತ್ತು ಪಾಯಿಂಟ್ಸ್ ಟೇಬಲ್​ನಲ್ಲಿ ತಮ್ಮ ಶ್ರೇಯಾಂಕ ಸುಧಾರಿಸಲು ಪ್ರಯತ್ನಿಸುತ್ತದೆ. ಎರಡೂ ಶಿಬಿರಗಳಲ್ಲಿನ ಬ್ಯಾಟರ್​ಗಳು ಉತ್ತಮ ಫಾರ್ಮ್​ನಲ್ಲಿರುವುದರಿಂದ ಇಲ್ಲಿ ಏಕಪಕ್ಷೀಯ ಫಲಿತಾಂಶದ ನಿರೀಕ್ಷೆ ಕಡಿಮೆ.

ಕಳೆದ ಪಂದ್ಯದಲ್ಲಿ, ಲಕ್ನೊ ತಂಡವು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು ಹಾಗೂ ಆರು ವಿಕೆಟ್​​ಗಳಿಂದ ಗೆದ್ದಿತು. ಬ್ಯಾಟಿಂಗ್ ಲೈನ್ಅಪ್ ಉತ್ತಮ ಸ್ಥಿತಿಯಲ್ಲಿರುವಂತೆ ತೋರುತ್ತಿದ್ದರೂ ರಾಜಸ್ಥಾನ್ ರಾಯಲ್ಸ್ ಅತ್ಯಂತ ವಿನಾಶಕಾರಿ ಬ್ಯಾಟಿಂಗ್ ಲೈನ್ಅಪ್ ಹೊಂದಿರುವುದರಿಂದ ಕೆಎಲ್ ರಾಹುಲ್​​ಗೆ ತಮ್ಮ ಬೌಲರ್​ಗಳಿಂದ ಬಲವಾದ ನೆರವು ಬೇಕಾಗಿದೆ. ರವಿ ಬಿಷ್ಣೋಯ್ ಮತ್ತು ಕೃಣಾಲ್ ಪಾಂಡ್ಯ ಪಿಚ್​ನ ನಿಧಾನಗತಿಯ ಸ್ವರೂಪವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು.

ಇದನ್ನೂ ಓದಿ: IPL 2024 : ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದ ಅಫಘಾನಿಸ್ತಾನ ತಂಡದ ಆಟಗಾರ

ರಾಜಸ್ಥಾನ್​ ತಂಡ ಬ್ಯಾಟಿಂಗ್ ಪ್ರದರ್ಶನವು ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಹಾಯ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಹಿಂದಿನ ಪಂದ್ಯವನ್ನು ಒಂಬತ್ತು ವಿಕೆಟ್​​ಗಳಿಂದ ಗೆದ್ದಿದ್ದ ಅವರು ಪ್ರಸ್ತುತ ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಂದಿನ ಸುತ್ತಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರಿಗೆ ಇನ್ನೂ ಒಂದು ಜಯದ ಅಗತ್ಯವಿದೆ. ಸ್ಯಾಮ್ಸನ್ ಬಳಗವು ತಮ್ಮ ಗೆಲುವಿನ ಓಟ ಮುಂದುವರಿಸಬಹುದು. ಮುಂಬರುವ ಪಂದ್ಯದಲ್ಲೂ ಅವರು ತಮ್ಮ ಎದುರಾಳಿಗಳನ್ನು ಸೋಲಿಸುವ ಗುರಿ ಹೊಂದಿದ್ದಾರೆ.

ಎಕಾನಾ ಕ್ರಿಕೆಟ್ ಕ್ರೀಡಾಂಗಣ ಪಿಚ್ ವರದಿ

ತಮ್ಮ ಉತ್ತಮ ಸ್ಟ್ರೋಕ್​ಗಳನ್ನು ಆಯ್ಕೆ ಮಾಡುವ ಬ್ಯಾಟ್ಸ್ ಮನ್ ಗಳಿಗೆ ಪಿಚ್​ ಸೂಕ್ತವಾಗಿದೆ. ವಿಕೆಟ್ ಬ್ಯಾಟಿಂಗ್​ ಆರಂಭಕ್ಕೆ ಪ್ರಾರಂಭಿಸಲು ಕಠಿಣವಾಗಿರಬಹುದು. ಆದರೆ ಆಟವು ಮುಂದುವರಿದಂತೆ ಬ್ಯಾಟಿಂಗ್ ಪರಿಸ್ಥಿತಿಗಳು ಸುಧಾರಿಸುತ್ತವೆ. ಕೆಲವೊಮ್ಮೆ, ಚೆಂಡು ಬ್ಯಾಟರ್​ಗಳ ನಿರೀಕ್ಷೆಗಿಂತ ವೇಗದಲ್ಲಿ ಪುಟಿದೇಳುತ್ತದೆ. ಸ್ಪಿನ್ನರ್​ಗಳು ಈ ಸ್ಥಳದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನೇರ ಬೌಂಡರಿಗಳು ದೂರವಿರುವುದರಿಂದ, ಬ್ಯಾಟರ್​ಗಳು ತಮ್ಮ ಶಾಟ್​​ಗಳನ್ನು ಸರಿಯಾಗಿ ನಿರ್ಧರಿಬೇಕಾಗುತ್ತದೆ. ಲಕ್ನೋದಲ್ಲಿ ಮಳೆ ಸೂಚನೆ ಇಲ್ಲ. ಇದು ಸಂಪೂರ್ಣ ಮತ್ತು ನ್ಯಾಯಯುತ ಸ್ಪರ್ಧೆಗೆ ಪರಿಸ್ಥಿತಿಗಳನ್ನು ಸೂಕ್ತವಾಗಿಸುತ್ತದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮೇಯರ್, ರೋವ್ಮನ್ ಪೊವೆಲ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಯಜುವೇಂದ್ರ ಚಾಹಲ್.

ಮುಖಾಮುಖಿ ದಾಖಲೆಗಳು

ಆಡಿದ ಪಂದ್ಯಗಳು- 4

  • ಲಕ್ನೋ ಸೂಪರ್ ಜೈಂಟ್ಸ್ ಗೆ ಜಯ- 1
  • ರಾಜಸ್ಥಾನ್ ರಾಯಲ್ಸ್ ಗೆಲುವು- 3

ಪಂದ್ಯದ ವಿವರ

  • ದಿನಾಂಕ ಶನಿವಾರ, ಏಪ್ರಿಲ್ 27, ಪಂದ್ಯ 44
  • ಸಮಯ: ಸಂಜೆ 7:30
  • ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್​ಸೈಟ್​
Continue Reading
Advertisement
Drought Relief
ಕರ್ನಾಟಕ3 mins ago

Drought Relief: ಕಡಿಮೆ ಬರ ಪರಿಹಾರ; ಕೇಂದ್ರದ ವಿರುದ್ಧ ನಾಳೆ ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ!

Lok sabha election 2024
Lok Sabha Election 20243 mins ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

car accident USA
ದೇಶ39 mins ago

Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

Lok sabha election 2024
Lok Sabha Election 202444 mins ago

Lok Sabha Election 2024 : ಜೆಡಿಎಸ್‌ಗೆ ವೋಟ್‌ ಹಾಕಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಮಚ್ಚೇಟು!

ವೈರಲ್ ನ್ಯೂಸ್46 mins ago

Viral Video: ಅರೇ..! ಇವ್ರು ನಮ್ಮ ಪ್ರಧಾನಿ ಮೋದಿ ಅಲ್ಲ; ಪಾನಿಪುರಿ ಮಾರೋ ಈ ಮೋದಿ ಫುಲ್‌ ಫೇಮಸ್‌

Job News
ಉದ್ಯೋಗ1 hour ago

Job News: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಎಚ್‌ಸಿಎಲ್‌ ಟೆಕ್‌ನಿಂದ 15 ಸಾವಿರಕ್ಕೂ ಹೆಚ್ಚು ಫ್ರೆಶರ್‌ಗಳ ನೇಮಕ

Lok Sabha
ಕರ್ನಾಟಕ1 hour ago

ಮೊದಲ ಹಂತದ ಮತದಾನ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿ ಅಲರ್ಟ್;‌ ‘ಉತ್ತರ’ದತ್ತ ಚಿತ್ತ, 13 ಸಚಿವರಿಗೆ ಟಾಸ್ಕ್!

assault case in anekla
ಬೆಂಗಳೂರು ಗ್ರಾಮಾಂತರ2 hours ago

Assault Case : ಕುಡಿದ ನಶೆಯಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ ಮಿತ್ರ ದ್ರೋಹಿಗಳು ಅರೆಸ್ಟ್‌

shilpa shetty visits shibaruru sri kodamanittaya
ಸಿನಿಮಾ2 hours ago

Shilpa Shetty: ಪೂಜಾ ಕಾರ್ಯಕ್ಕೆ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ಶಿಲ್ಪಾ ಶೆಟ್ಟಿ

mamata banerjee helicopter
ಪ್ರಮುಖ ಸುದ್ದಿ2 hours ago

Mamata Banerjee: ಹೆಲಿಕಾಪ್ಟರ್‌ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20243 mins ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ5 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ12 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌