Site icon Vistara News

IND vs AUS | ಟಾಸ್‌ ಗೆದ್ದ ಭಾರತ ತಂಡದಿಂದ ಫೀಲ್ಡಿಂಗ್ ಆಯ್ಕೆ, ಆಡುವ ಬಳಗದಲ್ಲಿ ಜಸ್‌ಪ್ರಿತ್‌ ಬುಮ್ರಾ

ind vs aus

ನಾಗ್ಪುರ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ೨೦ ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಟಾಸ್‌ ಗೆದ್ದಿದ್ದು, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿದ್ದು, ತಲಾ ಎಂಟು ಓವರ್‌ಗಳ ಪಂದ್ಯ ನಡೆಯಲಿದೆ. ಪಂದ್ಯ ೯.೩೦ಕ್ಕೆ ಶುರುವಾಗಲಿದೆ.

ಎರಡು ಓವರ್‌ ಪವರ್‌ ಪ್ಲೇ ಇಡಲಾಗಿದ್ದು, ಬೌಲರ್‌ ಒಬ್ಬರು ಗರಿಷ್ಠ ೨ ಓವರ್‌ ಮಾಡಲು ಸಾಧ್ಯವಿದೆ. ಪಂದ್ಯ ತಡವಾದರೆ ಯಾವುದೆ ಪೆನಾಲ್ಟಿ ಇರುವುದಿಲ್ಲ ಹಾಗೂ ಪಂದ್ಯದ ನಡುವೆ ಪಾನೀಯ ವಿರಾಮವೂ ಇಲ್ಲ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ರೋಹಿತ್‌ ಶರ್ಮ ಬಳಗ ಸರಣಿಯಲ್ಲಿ ೦-೧ ಹಿನ್ನಡೆಗೆ ಒಳಗಾಗಿರುವ ಕಾರಣ, ಸರಣಿ ಗೆಲುವಿನ ಭರವಸೆ ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕು.

ನಾಗ್ಪುರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಇಲ್ಲಿ ಒಟ್ಟಾರೆ ೧೨ ಪಂದ್ಯಗಳು ನಡೆದಿದೆ. ೨೦೧೯ರಲ್ಲಿ ಬಾಂಗ್ಲಾದೇಶ ಹಾಗೂ ಭಾರತ ನಡುವೆ ಕೊನೇ ಟಿ೨೦ ಪಂದ್ಯ ನಡೆದಿತ್ತು. ಒಟ್ಟಾರೆ ನಡೆದಿರುವ ೧೨ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿರುವ ತಂಡ ೯ ಬಾರಿ ಜಯ ಸಾಧಿಸಿದೆ.

ಸಂಭಾವ್ಯ ತಂಡಗಳು

ಭಾರತ:  ರೋಹಿತ್ ಶರ್ಮ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯಜ್ವೇಂದ್ರ ಚಹಲ್‌, ಜಸ್‌ಪ್ರಿತ್‌ ಬುಮ್ರಾ.

ಆಸ್ಟ್ರೇಲಿಯಾ : ಆರೋನ್ ಫಿಂಚ್, ಕೆಮೆರಾನ್‌ ಗ್ರೀನ್‌, ಸ್ಟ್ರೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಶ್‌ ಇಂಗ್ಲಿಸ್‌, ಟಿಮ್‌ ಡೇವಿಡ್‌, ಮ್ಯಾಥ್ಯೂ ವೇಡ್‌, ಪ್ಯಾಟ್‌ ಕಮಿನ್ಸ್, ನಥಾನ್‌ ಎಲ್ಲಿಸ್‌, ಆಡಂ ಜಂಪಾ, ಜೋಶ್‌ ಹೇಜಲ್‌ವುಡ್‌.

ಇದನ್ನೂ ಓದಿ | IND VS AUS | ಬುಮ್ರಾ ಬರುವರೇ? ಡೆತ್‌ ಓವರ್‌ ಬೌಲಿಂಗ್ ಸಮಸ್ಯೆ ಸುಧಾರಿಸುವುದೇ?

Exit mobile version