ಲಂಡನ್: ಭಾರತದ ಹಿರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಅವರ ಕ್ರೊವೇಷಿಯಾದ ಜೋಡಿ ಮಾಟೆ ಪಾವಿಕ್, Wimbeldon ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ಸ್ ಹಂತಕ್ಕೇರಿದ್ದಾರೆ. ಇದು ಆಲ್‌ಇಂಗ್ಲೆಂಡ್ ಕ್ಲಬ್‌ನಲ್ಲಿ ಸಾನಿಯಾ ಮಿರ್ಜಾ ಅವರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೆನಡಾ- ಆಸ್ಟ್ರೇಲಿಯಾದ ಜೋಡಿ ಗ್ಯಾಬ್ರಿಯೆಲಾ ಡಾಬ್ರೊವ್‌ಸ್ಕಿ ಹಾಗೂ ಜಾನ್ ಪೀರ್ ವಿರುದ್ಧ 6-4, 3-6, 7- ಸೆಟ್‌ಗಳಿಂದ ಗೆಲುವು ದಾಖಲಿಸಿ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡರು.
ಸಾನಿಯಾ ಅವರು ೨೦೧೧, ೨೦೧೩ ಹಾಗೂ ೨೦೧೫ರಲ್ಲಿ ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್ಸ್ ಹಂತಕ್ಕೇರಿದ್ದೇ ಹುಲ್ಲಿನಂಗಣದಲ್ಲಿನ ಗರಿಷ್ಠ ಸಾಧನೆಯಾಗಿತ್ತು. ಆರು ಬಾರಿಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತರಾಗಿರುವ ಸಾನಿಯಾ ಅವರು ವಿಂಬಲ್ಡನ್‌ನಲ್ಲಿ ಇದುವರೆಗೂ ಪ್ರಶಸ್ತಿ ಗೆದ್ದಿರಲಿಲ್ಲ. ಅಂತೆಯೇ ಅವರು ಹಾಲಿ ಋತು ಮುಗಿದ ಬಳಿಕ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ : ಕ್ರಿಕೆಟಿಗ ವಿಲ್ಲಿಯರ್ಸ್ & ಟೆನಿಸ್ ತಾರೆ ಆಶ್ಲೇ ಈಗ ಗಾಲ್ಫ್ ಜೋಡಿ !