Site icon Vistara News

Wimbledon 2023 : ವಿಂಬಲ್ಡನ್​ ಮಹಿಳೆಯರ ಸಿಂಗಲ್ಸ್​ನಲ್ಲಿ ಅಚ್ಚರಿಯ ಫಲಿತಾಂಶ!

Marketa Vondrousova

ಲಂಡನ್​: ಶನಿವಾರ ನಡೆದ ವಿಂಬಲ್ಡನ್​ (Wimbledon 2023) ಮಹಿಳೆಯರ ಸಿಂಗಲ್ಸ್​ನ ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೊವಾ 6-4, 6-4 ಸೆಟ್ ಗಳಿಂದ ಟುನೀಶಿಯಾದ ಓನ್ಸ್ ಜಬೀರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಟ್ರೋಫಿ ಗೆದ್ದರು. ಈ ಮೂಲಕ 60 ವರ್ಷಗಳ ನಂತರ ಶ್ರೇಯಾಂಕ ರಹಿತ ಆಟಗಾರ್ತಿ ವಿಂಬಲ್ಡನ್ ಟ್ರೋಫಿ ಗೆದ್ದ ವಿಶೇಷ ದಾಖಲೆ ಮಾಡಿದರು. ವೊಂಡ್ರೊಸೊವಾ ಆರನೇ ಶ್ರೇಯಾಂಕದ ಜಬೀರ್ ವಿರುದ್ಧ ಗೆಲುವು ಸಾಧಿಸುವ ನಿರೀಕ್ಷೆ ಇರಲಿಲ್ಲ. ಆದರೆ, 2019 ರ ಫ್ರೆಂಚ್ ಓಪನ್ ಫೈನಲ್​​ನಲ್ಲಿ ಆ್ಯಶ್ಲೇ ಬಾರ್ಟಿ ವಿರುದ್ಧ ಸೋತ ಬಳಿಕ ಇದೀಗ ಎರಡನೇ ಪ್ರಯತ್ನದಲ್ಲಿ ಅವರು ಗ್ರ್ಯಾನ್​ ಸ್ಲಾಮ್​ ಪ್ರಶಸ್ತಿ ಗೆದ್ದರು.

24 ವರ್ಷದ ಜೆಕ್​ ಗಣರಾಜ್ಯದ ಆಟಗಾರ್ತಿ ತಮ್ಮ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಅನುಭವಿಸಿದ ಎಲ್ಲ ನೋವಗಳ ಬಳಿಕ ಇದೀಗ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದೇನೆ. ಈಗ ನಾನು ಈ ಟ್ರೋಫಿಯನ್ನು ಹಿಡಿದಿದ್ದೇನೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. 2022ರ ಆವೃತ್ತಿಯಲ್ಲಿ ಮಾರ್ಕೆಟಾ ಮಂಡಿ ನೋವಿನ ಸಮಸ್ಯೆಯಿಂದಾಗಿ ಆಡಿರಲಿಲ್ಲ.

ಈಗ ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಎಂದು ಜಾನಾ ನೊವೊಟ್ನಾ ಮತ್ತು ಪೆಟ್ರಾ ಕ್ವಿಟೋವಾ ಬಳಿಕ ವಿಂಬಲ್ಡನ್ ಪ್ರಶಸ್ತಿ ಗೆದ್ದ ಜೆಕ್ ಟೆನಿಸ್​ ತಾರೆ ಹೇಳಿರು. ಮಾರ್ಕೆಟಾ ಗ್ರ್ಯಾನ್​ ಸ್ಲಾಮ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಒಂಬತ್ತನೇ ಶ್ರೇಯಾಂಕರಹಿತ ಆಟಗಾರ್ತಿ.

ಗಾಯದ ಸಮಸ್ಯೆಯಿಂದ ನರಳಿದ್ದ ಅವರು ವೃತ್ತಿಜೀವನವನ್ನು ಸ್ಥಗಿತಗೊಳಿಸಿದ್ದರು ಇದೀಗ ಟ್ರೋಫಿ ಗೆಲ್ಲುವ ಮೂಲಕ ಗಮನಾರ್ಹ ಪುನರಾಗಮನ ಮಾಡಿದ್ದಾರೆ. 12 ತಿಂಗಳ ಹಿಂದೆ, ಅವರು ವಿಂಬಲ್ಡನ್​​ನಲ್ಲಿ ಗಾಯಗೊಂಡಿದ್ದರು. ಇದೀಗ ಟ್ರೋಫಿ ಗೆದ್ದಿದ್ದಾರೆ.

ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೊಂಡ್ರೌಸೊವಾ ಅವರ ಎರಡನೇ ಮಣಿಕಟ್ಟಿನ ಚಿಕಿತ್ಸೆಯ ಕಾರಣಕ್ಕೆ ಆರು ತಿಂಗಳ ಕಾರಣ ಟೆನಿಸ್​ ಕೋರ್ಟ್​ನಿಂದ ಹೊರಗಿದ್ದರು. ಈ ಅವಧಿಯಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

2018ರಲ್ಲಿ ಸೆರೆನಾ ವಿಲಿಯಮ್ಸ್ 181ನೇ ಸ್ಥಾನದಲ್ಲಿದ್ದು ಚಾಂಪಿಯನ್ ಆಗಿದ್ದ ಈ ಹಿಂದಿನ ಸಾಧನೆಯಾಗಿತ್ತು. ಇತ್ತ ಸೋಲಿನ ಬಳಿಕ ಜಬೀರ್​ ಕಣ್ಣಿರಾದರು. ವಿಶ್ವದ ಆರನೇ ಶ್ರೇಯಾಂಕಿತ ಜಬೀರ್ ಫೈನಲ್​ನಲ್ಲಿ ಇದು ಎರಡನೇ ಸೋಲು. ಕಳೆದ ವರ್ಷ ವಿಂಬಲ್ಡನ್​​ ವೇಳೆ ಫೈನಲ್​ ತಲುಪಿದ ಮೊದಲ ಅರಬ್ ಮಹಿಳೆ ಎಂಬ ಹೆಗ್ಗಳಿಕೆ ಪಡೆದುಕೊಂಡು ಬಳಿಕ ಎಲೆನಾ ರಿಬಕಿನಾ ವಿರುದ್ಧ ಮೂರು ಸೋತಿದ್ದರು. ಅದಾದ ಕೆಲವು ವಾರಗಳ ನಂತರ ಯುಎಸ್ ಓಪನ್ ಫೈನಲ್​ನಲ್ಲಿ ಇಗಾ ಸ್ವಿಯಾಟೆಕ್ ವಿರುದ್ಧ ಸೋತಾಗ ದುಃಖ ಸಹಿಸಿಕೊಂಡಿದ್ದರು.

ಇದನ್ನೂ ಓದಿ : Wimbledon 2023: ಬೋಪಣ್ಣ ಭಾರತದ ಸೂಪರ್​ ಸ್ಟಾರ್​ ; ವಿಂಬಲ್ಡನ್​ನಲ್ಲಿ ಕಂಗೊಳಿಸಿದ ಕನ್ನಡದ ಕಂಪು

ಇದು ಕಠಿಣ ದಿನವಾಗಿದೆ. ಆದರೆ ನಾನು ಬಿಟ್ಟುಕೊಡಲು ಹೋಗುವುದಿಲ್ಲ” ಎಂದು ಅವರು ಕಣ್ಣೀರು ಒರೆಸುತ್ತಾ ಜಬೀರ್​ ಹೇಳಿದ್ದಾರೆ. ಇದು ನನ್ನ ವೃತ್ತಿಜೀವನದ ಅತ್ಯಂತ ನೋವಿನ ಕ್ಷಣ . ಆದರೆ ನಾವು ಒಂದು ದಿನ ಭರವಸೆ ಈಡೇರಿಸಲಿದ್ದೇನೆ. ನಾನು ಬಿಟ್ಟುಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಫ್ರಿಕನ್ ಮತ್ತು ಅರಬ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಜಬೀರ್ ಅವರ ಪ್ರಯತ್ನವು ಮತ್ತೊಮ್ಮೆ ವೈಫಲ್ಯದಲ್ಲಿ ಕೊನೆಗೊಂಡಿದೆ. ಫೈನಲ್​​ಗೆ ಹೋಗುವ ಹಾದಿಯಲ್ಲಿ ಅವರು ತೋರಿದ್ದ ಪ್ರದರ್ಶನಕ್ಕಿಂತ ಫೈನಲ್​ನಲ್ಲಿ ಕನಿಷ್ಠ ಪ್ರದರ್ಶನ ನೀಡಿದ್ದರು. ಜಬೀರ್ ಈಗಾಗಲೇ 2023ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಮಿಯಾಮಿಯಲ್ಲಿ ವೊಂಡ್ರೌಸೊವಾ ವಿರುದ್ಧ ಎರಡು ಬಾರಿ ಸೋತಿದ್ದರು.

Exit mobile version