Site icon Vistara News

Wimbledon 2023: ಬೋಪಣ್ಣ ಭಾರತದ ಸೂಪರ್​ ಸ್ಟಾರ್​ ; ವಿಂಬಲ್ಡನ್​ನಲ್ಲಿ ಕಂಗೊಳಿಸಿದ ಕನ್ನಡದ ಕಂಪು

Bopanna, Ebden storm into men’s doubles Round 3 with straight sets win

ಲಂಡನ್​: ಭಾರತದ ಖ್ಯಾತ ಅನುಭವಿ ಟೆನಿಸ್​ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ(Rohan Bopanna) ಮತ್ತು ಅವರ ಜತೆಗಾರ ಮ್ಯಾಥ್ಯೂ ಎಬ್ಡೆನ್‌(Matthew Ebden) ವಿಂಬಲ್ಡನ್(wimbledon 2023)​ ಟೆನಿಸ್​ ಟೂರ್ನಿಯ ಪುರುಷರ ಡಬಲ್ಸ್​ನಲ್ಲಿ ಪ್ರಿ-ಕ್ವಾರ್ಟರ್​​ ಫೈನಲ್​ ಪ್ರವೇಶಿಸಿದ್ದಾರೆ. ಇದಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ಪ್ರತಿಷ್ಠಿತ ವಿಂಬಲ್ಡನ್‌ ಕನ್ನಡದಲ್ಲೇ ಟ್ವೀಟ್‌ ಮಾಡಿ ಗೌರವಿಸಿದೆ. ಈ ಟ್ವೀಟ್​ ಇದೀಗ ವೈರಲ್​(viral news) ಆಗಿದೆ. ಗೌರವ ಸೂಚಿಸಿದ ವಿಂಬಲ್ಡನ್​ಗೆ ಧನ್ಯವಾದ ಎಂದು ಬೋಪಣ್ಣ ಕನ್ನಡದಲ್ಲೇ ರೀಪ್ಲೆ ನೀಡಿದ್ದಾರೆ.

ವಿಂಬಲ್ಡನ್ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕನ್ನಡದಲ್ಲೇ ರೋಹನ್ ಬೋಪಣ್ಣ ಅವರನ್ನು ʼಭಾರತದ ಸೂಪರ್ ಸ್ಟಾರ್ʼ ಎಂದು ಟ್ವೀಟ್ ಮಾಡುವ ಮೂಲಕ ಗೌರವ ಸೂಚಿಸಿದೆ. ಇದು ಕನ್ನಡಿಗರ ಗಮನ ಸೆಳೆದಿದೆ. ಸೋಮವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಜೇಕಬ್‌-ಜೊಹನ್ನಸ್‌ ಮಂಡೇ ವಿರುದ್ಧ ಇಂಡೋ-ಆಸ್ಟ್ರೇಲಿಯನ್​ ಜೋಡಿ 7-5, 6-3 ನೇರ ಸೆಟ್‌ಗಳಿಂದ ಗೆದ್ದು ಫ್ರೀ ಕ್ವಾರ್ಟರ್​ ಪ್ರವೇಶ ಪಡೆಯಿತು. ಇಂದು ನಡೆಯುವ ಪ್ರಿ ಕ್ವಾರ್ಟರ್‌ನಲ್ಲಿ ಬೋಪಣ್ಣ ಜೋಡಿ ನೆದರ್‌ಲೆಂಡ್ಸ್‌ನ ಡೇವಿಡ್‌ ಪೆಲ್‌ ಮತ್ತು ಅಮೆರಿಕದ ರೀಸ್‌ ಸ್ಟಾಲ್ಡರ್‌ ಸವಾಲು ಎದುರಿಸಲಿದೆ.

ಡೇವಿಸ್‌ ಕಪ್​ ವಿದಾಯಕ್ಕೆ ಬೋಪಣ್ಣ ನಿರ್ಧಾರ

ಬೋಪಣ್ಣ(Rohan Bopanna) ಅವರು ಮುಂದಿನ ಸೆಪ್ಟಂಬರ್‌ನಲ್ಲಿ ಡೇವಿಸ್‌ ಕಪ್‌(Davis Cup) ಟೆನಿಸ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಮೂಲತಃ ಕೊಡಗಿನವರಾದ 43 ವರ್ಷದ ಬೋಪಣ್ಣ ಭಾರತದ ಟೆನಿಸ್​ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 2002ರಲ್ಲಿ ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ ಅವರು ಎಟಿಪಿ ಟೂರ್‌ಗಳಲ್ಲಿ ಸಕ್ರಿಯರಾಗಿದ್ದು, ಭಾರತವನ್ನು 32 ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ 12 ಸಿಂಗಲ್ಸ್‌ ಮತ್ತು 10 ಡಬಲ್ಸ್‌ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ದಿಗ್ಗಜ ಲಿಯಾಂಡರ್‌ ಪೇಸ್‌ ಅವರು 58 ಪಂದ್ಯಗಳಲ್ಲಿ ಆಡುವ ಮೂಲಕ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ Rohan Bopanna: ಡೇವಿಸ್‌ ಕಪ್​ ವಿದಾಯಕ್ಕೆ ರೋಹನ್‌ ಬೋಪಣ್ಣ ನಿರ್ಧಾರ

ಕೆಲ ದಿನಗಳ ಹಿಂದೆ ಡೇವಿಸ್‌ ಕಪ್‌ ನಿವೃತ್ತಿಯ ಕುರಿತು ಮಾತನಾಡಿದ್ದ ಬೋಪಣ್ಣ ,“ಸೆಪ್ಟಂಬರ್‌ನಲ್ಲಿ ನಾನು ಕೊನೆಯ ಡೇವಿಸ್‌ ಕಪ್‌ ಪಂದ್ಯವನ್ನು ಆಡಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಬಯಕೆಯೆಂದರೆ ತವರಾದ ಬೆಂಗಳೂರಿನಲ್ಲಿ ವಿದಾಯ ಪಂದ್ಯವನ್ನು ಆಡುವುದು. ಭಾರತದ ಎಲ್ಲ ಆಟಗಾರರೊಂದಿಗೆ ಈ ಕುರಿತು ಮಾತಾಡಿದ್ದೇನೆ. ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಶನ್‌ ಕೂಡ ಸಕರಾತ್ಮಕವಾಗಿ ಸ್ಪಂದಿಸಿದೆ. ಆದರೆ ಭಾರತೀಯ ಟೆನಿಸ್‌ ಅಸೋಸಿಯೇಶನ್‌ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕು. ಒಂದೊಮ್ಮೆ ನನ್ನ ಮನವಿಯನ್ನು ಸ್ವೀಕರಿಸಿ ತವರಿನಲ್ಲಿ ಟೂರ್ನಿ ನಡೆದರೆ ಇದಂಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ” ಎಂದು ಹೇಳಿದ್ದಾರೆ.

Exit mobile version