Site icon Vistara News

ಟೆನಿಸ್‌ ಆಟಗಾರ್ತಿಗೆ ಕೋರ್ಟ್‌ನಲ್ಲೇ Bra ಬದಲಿಸಲು ಹೇಳಿದ ಆಯೋಜಕರು

bra

ಲಂಡನ್‌: ಪ್ರತಿಷ್ಠಿತ ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಟೂರ್ನಿಗಳನ್ನು ಆಡುವ ಆಟಗಾರರು ಪಂದ್ಯದ ವೇಳೆ ಧರಿಸುವ ಕೆಲವು ದಿರಿಸುಗಳು ಆಯೋಜಕರ ನಿಬಂಧನೆಗಳಿಗೆ ಒಳಪಟ್ಟಿರುತ್ತವೆ. ಒಂದು ವೇಳೆ ನಿಯಮ ಬದ್ಧವಾಗಿರದಿದ್ದರೆ ಮೇಲ್ವಿಚಾರಕರು ಆಕ್ಷೇಪ ವ್ಯಕ್ತಪಡಿಸಿ ಬದಲಿಸಲು ಸೂಚಿಸುತ್ತಾರೆ. ಅಂತೆಯ ಹಾಲಿ ವಿಂಬಲ್ಡನ್‌ನಲ್ಲಿ ಆಟಗಾರ್ತಿಯೊಬ್ಬರು ಕೋರ್ಟ್‌ನಲ್ಲೇ Bra ಬದಲಿಸಿದ ಪ್ರಸಂಗ ನಡೆದಿದೆ.

ಮಲ್ವಿಚಾರಕರ ಹದ್ದಿನ ಕಣ್ಣಿಗೆ ಸಿಕ್ಕಿ ಬಿದ್ದವರು ರೊಮೇನಿಯಾದ ಆಟಗಾರ್ತಿ ಮಿಹೇಲಾ ಬುಸರ್‌ನೆಸ್ಕು. ಅವರು ಪಂದ್ಯಕ್ಕೆ ಮೊದಲು ವಾರ್ಮ್‌ಅಪ್‌ ಮಾಡುವಾಗ ವಿಂಬಲ್ಡನ್‌ ನಿಯಮಕ್ಕೆ ವಿರುದ್ಧವಾಗಿದ್ದ ಬ್ರಾ ಧರಿಸಿದ್ದರು. ಹೀಗಾಗಿ ಮೇಲ್ವಿಚಾರಕರು ಬದಲಿಸುವಂತೆ ಸೂಚಿಸಿದ್ದಾರೆ. ತಪ್ಪು ಅರಿವಿಗೆ ಬಂದ ತಕ್ಷಣ ಕಿಟ್‌ ಬ್ಯಾಗ್‌ನಲ್ಲಿ ಹೊಸ ಬ್ರಾಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಅದು ಕೂಡ ನಿಯಮಕ್ಕೆ ಬದ್ಧವಾಗಿರಲಿಲ್ಲ. ಹೀಗಾಗಿ ಕೋಚ್‌ ಮೂಲಕ ಬೇರೊಂದನ್ನು ತರಿಸಿ ಹಾಕಿಕೊಂಡಿದ್ದಾರೆ.

ಪಂದ್ಯ ಮುಗಿದ ಬಳಿಕ ಈ ಕುರಿತು ಮಾತನಾಡಿದ ಮಿಹೇಲಾ “ನನ್ನ ದಿರಸು ಕಪ್ಪು ಬಣ್ಣದ್ದಾಗಿತ್ತು. ಅದಕ್ಕೆ ಮೇಲ್ವಿಚಾರಕರು ಆಕ್ಷೇಪ ಎತ್ತಿದರು. ಇನ್ನ ಬಳಿ ಇನ್ನೊಂದು ಬಿಳಿ ಬಣ್ಣದ ಬ್ರಾ ಇತ್ತು. ಆದರೆ, ಅದು ತುಂಬಾ ಪಾರದರ್ಶಕವಾಗಿತ್ತು. ಹೀಗಾಗಿ ಸಮರ್ಪಕವಾಗಿರುವ ಇನ್ನೊಂದು ಬಟ್ಟೆಯನ್ನು ಕೋಚ್‌ ಮೂಲಕ ತರಿಸಿಕೊಂಡು ಹಾಕಿದೆ,ʼʼ ಎಂದು ಹೇಳಿದ್ದಾರೆ.

೧೨೭ನೇ ರ‍್ಯಾಂಕ್‌ನ ಮಿಹೆಲಾ ಬುಸರ್‌ನೆಸ್ಕು ಈ ಗೊಂದಲದ ನಡುವೆಯೂ ಜರ್ಮನಿಯ ನಟಾಸ್ಜಾ ಶುಂಕ್‌ ವಿರುದ್ಧದ ಮೊದಲ ಸುತ್ತಿನ ಪಂದ್ಯವನ್ನು ಗೆದ್ದರು. ಆದರೆ ಎರಡನೇ ಸುತ್ತಿನಲ್ಲಿ ಅವರು ಅಮೆರಿಕದ ಯುವ ಆಟಗಾರ್ತಿ ಕೋಕೊ ಗಾಫ್‌ ವಿರುದ್ಧ 6-2, 6-3 ನೇರ ಸೆಟ್‌ಗಳಿಂದ ಸೋಲೊಪ್ಪಿಕೊಂಡರು.

ಇದನ್ನೂ ಓದಿ: Wimbeldon : ನಂಬರ್‌ 1 ಆಟಗಾರ್ತಿಗೆ 37ನೇ ರ‍್ಯಾಂಕ್‌ನ ಆಟಗಾರ್ತಿ ವಿರುದ್ಧ ಸೋಲು

Exit mobile version