ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ (ind vs wi) ಪ್ರವಾಸದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ತಂಡ ಪ್ರತಿರೋಧ ಒಡ್ಡುತ್ತಿದೆ. ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ ಪೇರಿಸಿದ್ದ 438 ರನ್ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡುತ್ತಿರುವ ವೆಸ್ಟ್ ಇಂಡೀಸ್ ತಂಡ 80 ಓವರ್ಗಳಲ್ಲಿ 169 ರನ್ ಬಾರಿಸಿದೆ. ವೆಸ್ಟ್ ಇಂಡೀಸ್ ತಂಡ ಅತ್ಯಂತ ನಿಧಾನಗತಿಯಲ್ಲಿ ಆಡುತ್ತಿದ್ದು ಆತಿಥೇಯ ತಂಡ ಗೆಲುವಿಗಿಂತ ಸೋಲು ತಪ್ಪಿಸಲು ಯತ್ನಿಸುವಂತಿದೆ. ವೆಸ್ಟ್ ಇಂಡೀಸ್ ತಂಡ ಇನ್ನೂ 269 ರನ್ಗಳ ಹಿನ್ನಡೆಯಲ್ಲಿದ್ದು ಭಾರತ ತಂಡ ಇನಿಂಗ್ಸ್ ಮುನ್ನಡೆ ಪಡೆಯಲು ಅದರೊಳಗೆ ಉಳಿದ ವಿಕೆಟ್ಗಳನ್ನು ಕಬಳಿಸಬೇಕಾಗಿದೆ.
Unplayable! A classic off-spinner's dismissal from Ashwin 🔥 #INDvWIonFanCode #WIvIND pic.twitter.com/dPcUucA0xQ
— FanCode (@FanCode) July 22, 2023
ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಬಾರಿಸಿರುವ ದೊಡ್ಡ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಲು ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡ ಎರಡನೇ ದಿನದಾಟದ ಕೊನೆಯಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಬಾರಿಸಿತ್ತು. ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಬಳಗ ನಿಧಾನಗತಿಯಲ್ಲಿ ಆಡಿ ವಿಕೆಟ್ ಉಳಿಸಿಕೊಳ್ಳುವ ಯತ್ನವನ್ನು ಮಾಡುತ್ತಿದೆ.
ಮೂರನೇ ದಿನ ಬೆಳಗ್ಗಿನಿಂದಲೇ ಮಳೆ ಸುರಿದ ಕಾರಣ ಪಂದ್ಯ ನಡೆಯಲಿಲ್ಲ. ಮೊದಲ ಸೆಷನ್ ಮಳೆಯಿಂದಾಗಿ ಸಂಪೂರ್ಣ ಹಾಳಾಯಿತು. ಭೋಜನ ವಿರಾಮದ ಬಳಿಕ ಪಂದ್ಯ ಆರಂಭಗೊಂಡರೂ ವೆಸ್ಟ್ ಇಂಡೀಸ್ ನಿಧಾನಗತಿಯ ಆಟಮ್ಕೆ ಮೊರೆ ಹೋಯಿತು. ಕ್ರೆಗ್ ಬ್ರಾಥ್ವೇಟ್ 235 ಎಸೆತಗಳನ್ನು ಎದುರಿಸಿ 75 ರನ್ ಬಾರಿಸಿದರು. ಆದರೆ ಅಶ್ವಿನ್ ಎಸೆತಕ್ಕೆ ಬೌಲ್ಡ್ ಆಗಿ ನಿರ್ಗಮಿಸಿದರು. ಕಿರ್ಕ್ ಮೆಕೆಂಜಿ ಸ್ವಲ್ಪ ವೇಗವಾಗಿ ಆಡಿದರೂ 57 ಎಸೆತಕ್ಕೆ 32 ರನ್ ಬಾರಿಸಿ ಔಟಾದರು.
ಇದನ್ನೂ ಓದಿ : IND vs WI: ಬ್ಯಾಟಿಂಗ್ನಲ್ಲೂ ನೂತನ ದಾಖಲೆ ಬರೆದ ಅಶ್ವಿನ್; ದಿಗ್ಗಜ ಆಟಗಾರನ ರೆಕಾರ್ಡ್ ಪತನ
ಜರ್ಮೈನ್ ಬ್ಲ್ಯಾಕ್ವುಡ್ 13 ರನ್ ಬಾರಿಸಿದ್ದರೆ ಅಲಿಕ್ ಅಥಾನೆಜ್ 11 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ. ಭಾರತ ತಂಡದ ಪರವಾಗಿ ರವಿಚಂದ್ರನ್ ಅಶ್ವಿನ್, ಮುಕೇಶ್ ಕುಮಾರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.