Site icon Vistara News

Women’s Boxing Championship: ಭಾರತಕ್ಕೆ ನಾಲ್ಕನೇ ಚಿನ್ನದ ಪದಕ; 75 ಕೆಜಿ ವಿಭಾಗದಲ್ಲಿ ಸ್ವರ್ಣ ಗೆದ್ದ ಲವ್ಲಿನಾ ಬೊರ್ಗೊಹೈನ್

Women's Boxing Championship: fourth gold medal for India; Lovelina Borgohain won the gold in the 75 kg category

Women's Boxing Championship: fourth gold medal for India; Lovelina Borgohain won the gold in the 75 kg category

ನವದೆಹಲಿ: ಇಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ, ಭಾರತದ ಲವ್ಲಿನಾ ಬೊರ್ಗೊಹೈನ್​ ಅವರು ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಭಾರತ ಭಾನುವಾರ ಒಟ್ಟು 2 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಕೂಟದಲ್ಲಿ ಇದು ಭಾರತಕ್ಕೆ ಒಲಿದ ನಾಲ್ಕನೇ ಚಿನ್ನದ ಪದಕವಾಗಿದೆ.

ಲವ್ಲಿನಾ ಬೊರ್ಗೊಹೈನ್ ಅವರು ಈ ಬಾರಿ ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. 69 ಕೆಜಿ ವೆಲ್ಟರ್‌ವೆಟ್‌ನಿಂದ 75 ಕೆಜಿ ಮಿಡ್ಲ್ ವೇಟ್‌ಗೆ ಸ್ಪರ್ಧೆಯನ್ನು ಬದಲಿಸಿಕೊಂಡು ಸ್ಪರ್ಧಿಸಿದ್ದರು. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅವರು ವಿಶ್ವ ಚಾಂಪಿಯನ್ ಆಗಿ ಇದೀಗ ಇತಿಹಾಸ ನಿರ್ಮಿಸಿದ್ದಾರೆ. ಇದು ಅವರಿಗೆ ಈ ಟೂರ್ನಿಯಲ್ಲಿ ಒಲಿದ ಮೊದಲ ಪದಕವಾಗಿದೆ.

ಇದನ್ನೂ ಓದಿ Women’s Boxing Championship: ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಂಡ ನಿಖತ್ ಜರೀನ್

ಫೈನಲ್​ನಲ್ಲಿ ಲವ್ಲಿನಾ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ 5-2 ಅಂತರದಿಂದ ಗೆಲುವು ಸಾಧಿಸಿದರು. ಮೊಲದ ಸುತ್ತಿನ ಪಂದ್ಯವನ್ನು ಗೆದ್ದ ಲವ್ಲಿನಾ, ದ್ವಿತೀಯ ಸುತ್ತಿನಲ್ಲಿ ಸೋಲು ಕಂಡರು. ಆದರೆ ಆ ಬಳಿಕದ ಸುತ್ತಿನಲ್ಲಿ ಬಿರುಸಿನ ಪಂಚ್​ ಮೂಲಕ ಮತ್ತೆ ಪಂದ್ಯವನ್ನು ತಮ್ಮ ಹಿಡಿತಕ್ಕೆ ತಂದರು. ಅಂತಿಮವಾಗಿ ಗೆದ್ದು ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ತಂದುಕೊಟ್ಟರು.

ಇದಕ್ಕೂ ಮುನ್ನ ನಡೆದ 50 ಕೆಜಿ ವಿಭಾಗದಲ್ಲಿ ನಿಖತ್‌ ಜರೀನ್‌ ಅವರು ಚಿನ್ನಕ್ಕೆ ಮುತ್ತಿಕ್ಕಿದ್ದರು. ಶನಿವಾರ ನಡೆದ 48 ಕೆಜಿ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಗಂಗಾಸ್​ ಅವರು ಮಂಗೋಲಿಯಾದ ಲುತ್ಸಾಯಿಖಾನ್‌ ಅಲ್ಟಂಟ್‌ಸೆಟ್‌ಸೆಗ್‌ ವಿರುದ್ಧ ಚಿನ್ನ ಗೆದ್ದು ಭಾರತಕ್ಕೆ ಮೊದಲ ಪದಕದ ಖಾತೆ ತೆರೆದಿದ್ದರು. ಇದರ ಬೆನ್ನಲ್ಲೇ 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಚೀನಾದ ವಾಂಗ್‌ ಲೀನಾ ಅವರನ್ನು ಮಣಿಸಿದ್ದರು.

Exit mobile version