ನವದೆಹಲಿ: ಇಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್ ವಿಶ್ವಚಾಂಪಿಯನ್ಶಿಪ್ನ(Women’s Boxing Championships) ಮೊದಲ ದಿನವೇ ಭಾರತೀಯ ಬಾಕ್ಸರ್‌ಗಳಾದ ನಿಖತ್ ಜರೀನ್(Nikhat Zareen), ಸಾಕ್ಷಿ ಚೌಧರಿ(Sakshi Chaudhary) ಮತ್ತು ಪ್ರೀತಿ ಗೆಲುವಿನ ಶುಭಾರಂಭ ಕಂಡಿದ್ದಾರೆ.
ಗುರುವಾರ ರಾತ್ರಿ ನಡೆದ 50 ಕೆ.ಜಿ. ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ನಿಖಾತ್ ಜರೀನ್ ಅವರು ಸತತ ಪಂಚ್ಗಳ ಮೂಲಕ ಎದುರಾಳಿ ಅನಾಕನೀಮ್ ವಿರುದ್ಧ ತಾಂತ್ರಿಕ ಪ್ರಾಬಲ್ಯದೊಂದಿಗೆ ಗೆಲುವು ಸಾಧಿಸಿದರು. ಎದುರಾಳಿಯು ಜರೀನ್ ಅವರ ಸತತ ಪಂಚ್‌ಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ರೆಫ್ರಿ 2ನೇ ಸುತ್ತಿನಲ್ಲೇ ಪಂದ್ಯ ನಿಲ್ಲಿಸಿ ಜರೀನ್ ಅವರನ್ನು ವಿಜಯೀ ಎಂದು ಘೋಷಿಸಿದರು.
ಇದನ್ನೂ ಓದಿ ಮಹಿಳಾ ವಿಶ್ವ ಬಾಕ್ಸಿಂಗ್: ಲವ್ಲಿನಾ ಮೇಲೆ ನಿರೀಕ್ಷೆ
ದಿನದ ಮತ್ತೊಂದು ಪಂದ್ಯದಲ್ಲಿ ಪ್ರೀತಿ 54 ಕೆ.ಜಿ. ವಿಭಾಗದಲ್ಲಿ ಹಂಗೇರಿಯದ ಹನ್ನಾ ವಿರುದ್ಧ ಮೇಲುಗೈ ಸಾಧಿಸಿದರು. 52 ಕೆ.ಜಿ. ವಿಭಾಗದಲ್ಲಿ ಸಾಕ್ಷಿ ಚೌಧರಿ ಕೊಲಂಬಿಯಾದ ಮಾರ್ಟಿನೆಜ್ ಮರಿಯಾ ವಿರುದ್ದ 5-0 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ಗೇರಿದರು. 81+ ಕೆ.ಜಿ. ವಿಭಾಗದಲ್ಲಿ ನೂಪುರ್ ಗಯಾನಾದ ಜ್ಯಾಕ್ಮನ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟರು.