Women’s Boxing Championships: ಜರೀನ್‌, ಸಾಕ್ಷಿ,ಪ್ರೀತಿ ಗೆಲುವಿನ ಶುಭಾರಂಭ - Vistara News

ಕ್ರೀಡೆ

Women’s Boxing Championships: ಜರೀನ್‌, ಸಾಕ್ಷಿ,ಪ್ರೀತಿ ಗೆಲುವಿನ ಶುಭಾರಂಭ

ಮಹಿಳಾ ಬಾಕ್ಸಿಂಗ್‌ ವಿಶ್ವ​ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ(Women’s Boxing Championships) ನಿಖತ್‌ ಜರೀನ್‌(Nikhat Zareen), ಸಾಕ್ಷಿ ಚೌಧರಿ(Sakshi Chaudhary) ಮತ್ತು ಪ್ರೀತಿ ಗೆಲುವು ದಾಖಲಿಸಿದ್ದಾರೆ.

VISTARANEWS.COM


on

Women's Boxing Championships: Zareen, Sakshi, Preeti win good start
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ​ದೆ​ಹ​ಲಿ: ಇಲ್ಲಿ ನಡೆಯುತ್ತಿರುವ 13ನೇ ಆವೃ​ತ್ತಿಯ ಮಹಿಳಾ ಬಾಕ್ಸಿಂಗ್‌ ವಿಶ್ವ​ಚಾಂಪಿ​ಯ​ನ್‌​ಶಿ​ಪ್‌​ನ(Women’s Boxing Championships) ಮೊದಲ ದಿನವೇ ಭಾರತೀಯ ಬಾಕ್ಸರ್‌ಗಳಾದ ನಿಖತ್‌ ಜರೀನ್‌(Nikhat Zareen), ಸಾಕ್ಷಿ ಚೌಧರಿ(Sakshi Chaudhary) ಮತ್ತು ಪ್ರೀತಿ ಗೆಲುವಿನ ಶುಭಾರಂಭ ಕಂಡಿದ್ದಾರೆ.

ಗುರುವಾರ ರಾತ್ರಿ ನಡೆದ 50 ಕೆ.ಜಿ. ವಿಭಾ​ಗದ ಸ್ಪರ್ಧೆಯ ಮೊದಲ ಸುತ್ತಿ​ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌ ಅವರು ಸತತ ಪಂಚ್​ಗಳ ಮೂಲಕ ಎದುರಾಳಿ ಅನಾ​ಕನೀಮ್‌ ವಿರುದ್ಧ ತಾಂತ್ರಿ​ಕ ಪ್ರಾಬಲ್ಯದೊಂದಿಗೆ ಗೆಲುವು ಸಾಧಿ​ಸಿ​ದರು. ಎದುರಾಳಿಯು ಜರೀನ್‌ ಅವರ ಸತತ ಪಂಚ್‌ಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ರೆಫ್ರಿ 2ನೇ ಸುತ್ತಿನಲ್ಲೇ ಪಂದ್ಯ ನಿಲ್ಲಿಸಿ ಜರೀನ್‌ ಅವರನ್ನು ವಿಜಯೀ ಎಂದು ಘೋಷಿಸಿದರು.

ಇದನ್ನೂ ಓದಿ ಮಹಿಳಾ ವಿಶ್ವ ಬಾಕ್ಸಿಂಗ್‌: ಲವ್ಲಿನಾ ಮೇಲೆ ನಿರೀಕ್ಷೆ

ದಿನದ ಮತ್ತೊಂದು ಪಂದ್ಯದಲ್ಲಿ ಪ್ರೀತಿ​ 54 ಕೆ.ಜಿ. ವಿಭಾಗದಲ್ಲಿ ಹಂಗೇ​ರಿಯದ ಹನ್ನಾ ವಿರುದ್ಧ ಮೇಲುಗೈ ಸಾಧಿಸಿದರು. 52 ಕೆ.ಜಿ. ವಿಭಾ​ಗ​ದಲ್ಲಿ ಸಾಕ್ಷಿ ಚೌಧರಿ ಕೊಲಂಬಿಯಾದ ಮಾರ್ಟಿ​ನೆಜ್‌ ಮರಿಯಾ ವಿರುದ್ದ 5-0 ಅಂತ​ರ​ದ​ಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ ಫೈನ​ಲ್‌​ಗೇ​ರಿ​ದರು. 81+ ಕೆ.ಜಿ. ವಿಭಾ​ಗದಲ್ಲಿ ನೂಪುರ್‌ ಗಯಾ​ನಾದ ಜ್ಯಾಕ್ಮನ್‌ ವಿರುದ್ಧ 5-0 ಅಂತ​ರ​ದಲ್ಲಿ ಗೆದ್ದು ಕ್ವಾರ್ಟರ್‌ ಫೈನ​ಲ್‌​ಗೆ ಲಗ್ಗೆ ಇಟ್ಟರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

ರಾಜಮಾರ್ಗ ಅಂಕಣ: ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತು ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ. ಆ ಹುಡುಗನ ಹೆಸರು ಡಿ.ಗುಕೇಶ್.

VISTARANEWS.COM


on

gukesh dommaraju rajamarga column
Koo

17ರ ಹರೆಯದ ಈ ಹುಡುಗನ ಸಾಧನೆಗೆ ವಿಶ್ವವೇ ತಲೆದೂಗುತ್ತಿದೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಚೆನ್ನೈ ಮೂಲದ ಗುಕೇಶ್ (Gukesh Dommaraju) ವಿಶ್ವ ಚಾಂಪಿಯನ್ (World Champion) ಆಗಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ! ಈತನ ವಯಸ್ಸು ಇನ್ನೂ 17 ವರ್ಷ. ಮೌನದ ಮೂಲಕ ಜಗತ್ತನ್ನು ಗೆಲ್ಲಲು ಹೊರಟ ಆತನ ತೀಕ್ಷ್ಣ ಕಣ್ಣುಗಳು ಈಗಲೇ ವಿಶ್ವ ವಿಜಯಿಯಾಗುವ ಕನಸಿನಿಂದ ತುಂಬಿವೆ. ಹಿಂದೊಮ್ಮೆ ವಿಶ್ವ ಚಾಂಪಿಯನ್ ಚೆಸ್ ಆಟಗಾರ (Chess) ಮ್ಯಾಗ್ನಸ್ ಕಾರ್ಲಸನ್ (Magnus Carlson) ಅವರನ್ನು ಇದೇ ಹುಡುಗ ಸೋಲಿಸಿದಾಗ ಇಡೀ ಜಗತ್ತು ನಿಬ್ಬೆರಗಾಗಿ ಆತನನ್ನು ಗಮನಿಸಿತ್ತು.

ಈಗ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತಾಗ ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ.

ಆ ಹುಡುಗನ ಹೆಸರು ಡಿ.ಗುಕೇಶ್

ಆತ ಚೆನ್ನೈಯ ಪ್ರತಿಭೆ. ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಆದ ನಂತರ ನಿವೃತ್ತಿ ಪಡೆದು ಚೆನ್ನೈಯಲ್ಲಿ ವಿಶ್ವನಾಥನ್ ಆನಂದ ಚೆಸ್ ಆಕಾಡೆಮಿ (WACA)ಯನ್ನು ಸ್ಥಾಪನೆ ಮಾಡಿದ್ದರು. ಅದರಿಂದ ಸ್ಫೂರ್ತಿ ಪಡೆದು ಚೆನ್ನೈಯಲ್ಲಿ ಈಗ 60ಕ್ಕಿಂತ ಅಧಿಕ ಚೆಸ್ ಅಕಾಡೆಮಿಗಳು ಇವೆ. ಅದರ ಪರಿಣಾಮವಾಗಿ ಇದೀಗ ಚೆನ್ನೈ ನಗರವು ಭಾರತದ ಚೆಸ್ ರಾಜಧಾನಿ ಆಗಿ ಬೆಳೆದಿದೆ. ಅತೀ ಸಣ್ಣ ವಯಸ್ಸಿನಲ್ಲಿ ಗ್ರಾನ್ ಮಾಸ್ಟರ್ ಆದ ಆರ್ ಪ್ರಜ್ಞಾನಂದ, ಆರ್ ವೈಶಾಲಿ, ಸುಬ್ಬರಾಮನ್ ವಿಜಯಲಕ್ಷ್ಮಿ ಇವರೆಲ್ಲರೂ ಚೆನ್ನೈಯವರು. ಈ ಪಟ್ಟಿಗೆ ಈಗ ಹೊಳೆಯುವ ಪ್ರತಿಭೆ ಸೇರ್ಪಡೆ ಆಗಿದೆ. ಆತ ಡಿ ಗುಕೇಶ್. ಭಾರತದ ಒಟ್ಟು ಚೆಸ್ ಗ್ರಾನ್ ಮಾಸ್ಟರಗಳಲ್ಲಿ 35% ಆಟಗಾರರು ಚೆನ್ನೈಗೆ ಸೇರಿದವರು ಅನ್ನುವಾಗ ಆ ನಗರದ ಬಗ್ಗೆ ಹೆಮ್ಮೆ ಮೂಡುತ್ತದೆ.

ಬಾಲ್ಯದಿಂದಲೇ ಚೆಸ್ ಆಟಕ್ಕೆ ಸಮರ್ಪಣೆ ಆಗಿ ಬೆಳೆದ ಹುಡುಗ ಆತ .ಅದಕ್ಕಾಗಿ ತನ್ನ ಬಾಲ್ಯದ ಆಟ, ಶಾಲೆ, ತುಂಟಾಟ ಎಲ್ಲವನ್ನೂ ಬದಿಗೆ ಇಟ್ಟು ಹೋರಾಟಕ್ಕೆ ಇಳಿದವನು.

ಮಗನಿಗಾಗಿ ಅಪ್ಪ, ಅಮ್ಮ ಮಾಡಿದ ತ್ಯಾಗ

ಅವನ ತಂದೆ ಡಾ.ರಜಿನಿಕಾಂತ್ ನಗರದ ಪ್ರಸಿದ್ಧ ENT ಸರ್ಜನ್. ತಾಯಿ ಡಾ. ಪದ್ಮಕುಮಾರಿ ಕೂಡ ಮೈಕ್ರೋಬಯೊಲಜಿ ತಜ್ಞರು. ಇಬ್ಬರೂ ತಮ್ಮ ಮಗನಿಗಾಗಿ ತಮ್ಮ ಪ್ರಾಕ್ಟೀಸ್ ಮರೆತು ಜಗತ್ತಿನಾದ್ಯಂತ ಓಡಾಡಿದ್ದಾರೆ. ತರಬೇತಿಗಾಗಿ ತುಂಬಾ ದುಡ್ಡು ಖರ್ಚು ಮಾಡಿದ್ದಾರೆ. ತುಂಬಾ ಸಮಯ ಕೊಟ್ಟಿದ್ದಾರೆ. ಮಗನ ಚೆಸ್ ಭವಿಷ್ಯಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಾಗಿ ನಿಂತಿದ್ದಾರೆ.

ಹುಡುಗನೂ ನಾಲ್ಕನೇ ತರಗತಿಯಿಂದ ಶಾಲೆಗೇ ಹೋಗದೇ ಚೆಸ್ ಆಟದಲ್ಲಿ ಮೈ ಮರೆತಿದ್ದಾನೆ. ಶಾಲಾ ಶಿಕ್ಷಣಕ್ಕೆ ಸಮಯ ದೊರೆಯದ ಬಗ್ಗೆ ಹೆತ್ತವರಿಗೆ ಬೇಸರ ಇದೆ. ಆದರೆ ಆತನು 12ನೆಯ ವಯಸ್ಸಿಗೇ ಚೆಸ್ ಗ್ರಾನ್ ಮಾಸ್ಟರ್ ಹುದ್ದೆಗೆ ಏರಿದಾಗ ಅವರು ಆನಂದ ಭಾಷ್ಪ ಸುರಿಸಿದ್ದಾರೆ. ಮುಂದೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲಸನ್ ಅವರನ್ನು ಆತನು ಸೋಲಿಸಿದಾಗ ತುಂಬಾ ಖುಷಿ ಪಟ್ಟಿದ್ದಾರೆ. ಮ್ಯಾಗ್ನೆಸನನ್ನು ಸೋಲಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಗುಕೇಶ್ ಅನ್ನುವುದು ಸದ್ಯಕ್ಕೆ ಅಳಿಸಲಾಗದ ದಾಖಲೆ!

ಸಾಂಪ್ರದಾಯಕ ಚೆಸ್ ಕಲಿಕೆ, ಅಹಂಕಾರದಿಂದ ದೂರ!

ಸಾಮಾನ್ಯವಾಗಿ ಇತ್ತೀಚಿನ ಚೆಸ್ ಕಲಿಯುವ ಮಕ್ಕಳು ಕಂಪ್ಯೂಟರ್ ಜೊತೆ ಕೂತು ಚೆಸ್ ಆಡುತ್ತಾರೆ. ಆದರೆ ಗುಕೇಶ್ ಚೆಸ್ ಕಲಿತದ್ದು ಸಾಂಪ್ರದಾಯಿಕ ವಿಧಾನದಲ್ಲಿ. ಗುರುಗಳು ಹೇಳಿದ್ದನ್ನು ನೂರಕ್ಕೆ ನೂರರಷ್ಟು ಪಾಲಿಸುವ ಅವನ ಶ್ರದ್ಧೆ, ಏಕಾಗ್ರತೆ, ಬದ್ಧತೆ ಅವನನ್ನು ಪ್ರತೀ ಹೆಜ್ಜೆಯಲ್ಲಿಯೂ ಗೆಲ್ಲಿಸುತ್ತಿವೆ. ಯಾರಾದರೂ ಸನ್ಮಾನಕ್ಕೆ, ಸಂವಾದಕ್ಕೆ ಕರೆದರೆ ಆತನು ನಯವಾಗಿ ನೋ ಅನ್ನುವುದನ್ನು ಕಲಿತಿದ್ದಾನೆ. ಪ್ರಚಾರದಿಂದ ಆತ ಗಾವುದ ದೂರ ಓಡುತ್ತಾನೆ. ತಾನಾಯಿತು, ತನ್ನ ಅಭ್ಯಾಸವಾಯಿತು ಎಂದು ಚೆಸ್ ಆಟದಲ್ಲಿ ಮುಳುಗಿ ಬಿಡುವ ನಾಚಿಕೆಯ ಹುಡುಗ ಗುಕೇಶ್.

ಪ್ರಶಸ್ತಿ ಗೆದ್ದಾಗ ನಿನಗೆ ಹೇಗನ್ನಿಸಿತು ಹುಡುಗ? ಎಂದು ಕೇಳಿದಾಗ “ನನ್ನ ಗೆಲುವಿಗಿಂತ ದೇಶವನ್ನು ರೆಪ್ರೆಸೆಂಟ್ ಮಾಡುವ ಅವಕಾಶ ದೊರೆತದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ” ಅನ್ನುತ್ತಾನೆ.

ನಿನ್ನ ಭವಿಷ್ಯದ ಗುರಿ ಏನು ಎಂದು ಯಾರೋ ಕೇಳಿದಾಗ “ನನಗೆ ವಿಶಿ ಸರ್ (ವಿಶ್ವನಾಥನ್ ಆನಂದ್) ಅವರು ಏನು ಹೇಳುತ್ತಾರೆಯೋ ಆ ಪ್ರಕಾರ ಮಾಡುತ್ತೇನೆ. ನನಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ” ಅನ್ನುತ್ತಾನೆ.

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತನಗೆ ಈಗ ಒಳ್ಳೆಯ ಶಿಷ್ಯ ದೊರೆತ ಖುಷಿಯಲ್ಲಿ ಇದ್ದಾರೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

Continue Reading

ಪ್ರಮುಖ ಸುದ್ದಿ

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

IPL 2024 : ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 210 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು.

VISTARANEWS.COM


on

IPL 2024
Koo

ಚೆನ್ನೈ: ಐಪಿಎಲ್​ 2024ನೇ (IPL 2024) 39ನೇ ಪಂದ್ಯದಲ್ಲಿ ತವರು ಅಭಿಮಾನಿಗಳ ಮುಂದೆಯೇ ಚೆನ್ನೈ ತಂಡವನ್ನು ಲಕ್ನೊ ಸೂಪರ್ ಜೈಂಟ್ಸ್ ತಂಡ 6 ವಿಕೆಟ್​ಗಳಿಂದ ಸೋಲಿಸಿದೆ. ಲಕ್ನೊ ತಂಡದ ಬ್ಯಾಟರ್​​ ಮಾರ್ಕಸ್​ ಸ್ಟೊಯ್ನಿಸ್​ 63 ಎಸೆತಕ್ಕೆ ಅಜೇಯ 124 ರನ್ (ಶತಕ) ಬಾರಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಸಂಕಷ್ಟದಲ್ಲಿದ್ದ ಸಮಯದಲ್ಲಿ ತಂಡಕ್ಕೆ ಏಕಾಂಗಿಯಾಗಿ ಹೋರಾಟ ನಡೆಸಿದ ಸ್ಟೊಯ್ನಿಸ್ ಗೆಲುವು ತಂದುಕೊಟ್ಟರು. ಈ ಮೂಲಕ ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರ (ಅಜೇಯ 108 ರನ್​) ಶತಕದ ಹೋರಾಟ ವ್ಯರ್ಥಗೊಂಡಿತು. ಇದು ಚೆನ್ನೈ ತಂಡಕ್ಕೆ ಆಡಿರುವ ಎಂಟು ಪಂದ್ಯಗಳಲ್ಲಿ ಐದನೇ ಸೋಲಾಗಿದ್ದು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಕಳೆದುಕೊಂಡು 5ನೇ ಸ್ಥಾನಕ್ಕೆ ಜಾರಿದೆ. ಅತ್ತ ಲಕ್ನೊ ಸೂಪರ್ ಜೈಂಟ್ಸ್​ ತಂಡ 4ನೇ ಸ್ಥಾನಕ್ಕೇರಿದೆ. ಈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 5 ನೇ ಗೆಲುವಾಗಿದೆ. ಹೀಗಾಗಿ 10 ಅಂಕಗಳನ್ನು ಪಡೆದುಕೊಂಡಿದೆ.

ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 210 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಲಕ್ನೊ ತಂಡ ಕ್ವಿಂಟನ್ ಡಿ ಕಾಕ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತ ಎದುರಿಸಿತು. ನಾಯಕ ಕೆ. ಎಲ್ ರಾಹುಲ್ ಕೂಡ 16 ರನ್​ಗೆ ಸೀಮಿತಗೊಂಡರು. ಈ ವೇಳೆ ಆಡಲು ಇಳಿದ ಡಿ ಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ಪಡೆದ ದೇವದತ್​ ಪಡಿಕ್ಕಲ್​ ಪೇಚಾರಿ 19 ಎಸೆತಕ್ಕೆ 13 ರನ್ ಮಾಡಿ ಔಟಾದರು. ಇದು ಲಕ್ನೊ ತಂಡಕ್ಕೆ ಹಿನ್ನಡೆ ಉಂಟು ಮಾಡಿತು.

ನಿಕೋಲಸ್​- ಸ್ಟೊಯ್ನಿಸ್​ ಜತೆಯಾಟ

88 ರನ್​ಗೆ 3 ವಿಕೆಟ್​ ಕಳೆದುಕೊಂಡ ಲಕ್ನೊ ತಂಡ ಅಪಾಯಕ್ಕೆ ಸಿಲುಕಿತು. ಆದರೆ ಈ ವೇಳೆ ಆಡಲು ಬಂದ ನಿಕೋಲಸ್ ಪೂರನ್ ಹಾಗೂ ಸ್ಪೊಯ್ನಿಸ್​ 70 ರನ್​ಗಳ ಜತೆಯಾಟ ಆಡಿದರು. ಆದರೆ, 15 ಎಸೆತಕ್ಕೆ 34 ರನ್ ಬಾರಿಸಿದ ಪೂರನ್​ ಔಟಾದ ಬಳಿಕ ಮತ್ತೆ ತೊಂದರೆ ಎದುರಾಯಿತು. ಆದರೆ ಯಾವುದಕ್ಕೂ ಕ್ಯಾರೆ ಎನ್ನದ ಸ್ಟೊಯ್ನಿಸ್​ 56 ಎಸೆತಕ್ಕೆ ಶತಕ ಪೂರೈಸಿದರು. ಕೊನೇ ತನಕ ನಿಂತು ಆಡಿ ಗೆಲ್ಲಿಸಿದರು. ಕೊನೆಯಲ್ಲಿ ದೀಪಕ್ ಹೂಡಾ 6 ಎಸೆತಕ್ಕೆ 17 ರನ್ ಬಾರಿಸಿದರು.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಋತುರಾಜ್ ಶತಕದ ಆಟ

ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡವೂ ಉತ್ತಮವಾಗಿ ಆಡಲಿಲ್ಲ. ಅಜಿಂಕ್ಯ ರಹಾನೆ1 ರನ್​ ಗೆ ನಿರ್ಗಮಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಋತುರಾಜ್ ಗಾಯಕ್ವಾಡ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ಡ್ಯಾರಿಲ್ ಮಿಚೆಲ್​ 11 ಹಾಗೂ ಜಡೇಜಾ 16 ರನ್​ ಬಾರಿಸಿ ಔಟಾದರು. ಆದರೆ, 27 ಎಸೆತಕ್ಕೆ 66 ರನ್ ಬಾರಿಸಿದ ಶಿವಂ ದುಬೆ ದೊಡ್ಡ ಮೊತ್ತ ಪೇರಿಸಲು ನೆರವಾದರು.

Continue Reading

ಪ್ರಮುಖ ಸುದ್ದಿ

Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

Virat kohli: ಕೆಕೆಆರ್​ನ ಹರ್ಷಿತ್ ರಾಣಾ ಅವರ ಹೈಫುಲ್​ಟಾಸ್​ಗೆ ಕೊಹ್ಲಿ ಔಟ್ ಆಗಿದ್ದರು. ಡಿಆರ್​ಎಸ್​​ ಕೋರಿದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮೂರನೇ ಅಂಪೈರ್​ಗೆ ಶಿಫಾರಸು ಮಾಡಲಾಯಿತು. ರಿಪ್ಲೇಗಳು ಅಪೂರ್ಣವಾಗಿದ್ದರೂ, ಮೈದಾನದಲ್ಲಿನ ನಿರ್ಧಾರಕ್ಕೆ ಅಂಪೈರ್​ ಬೆಂಬಲ ಕೊಟ್ಟರು. ಇದರ ಪರಿಣಾಮವಾಗಿ ಕೊಹ್ಲಿ ಏಳು ಎಸೆತಗಳಲ್ಲಿ 18 ರನ್ ಗಳಿಸಿದ ನಂತರ ಕ್ರೀಸ್​ನಿಂದ ನಿರ್ಗಮಿಸಬೇಕಾಯಿತು.

VISTARANEWS.COM


on

Virat Kohli
Koo

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (virat kohli))ವಿವಾದಕ್ಕೆ ಸಿಲುಕಿದ್ದಾರೆ. ಎರಡನೇ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ಸ್ಟಾರ್ ಬ್ಯಾಟ್ಸ್ಮನ್ ಔಟಾಗಿರುವ ರೀತಿ ಅಂಪೈರಿಂಗ್ ನಿರ್ಧಾರದ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿತು.

ಕೆಕೆಆರ್​ನ ಹರ್ಷಿತ್ ರಾಣಾ ಅವರ ಹೈಫುಲ್​ಟಾಸ್​ಗೆ ಕೊಹ್ಲಿ ಔಟ್ ಆಗಿದ್ದರು. ಡಿಆರ್​ಎಸ್​​ ಕೋರಿದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮೂರನೇ ಅಂಪೈರ್​ಗೆ ಶಿಫಾರಸು ಮಾಡಲಾಯಿತು. ರಿಪ್ಲೇಗಳು ಅಪೂರ್ಣವಾಗಿದ್ದರೂ, ಮೈದಾನದಲ್ಲಿನ ನಿರ್ಧಾರಕ್ಕೆ ಅಂಪೈರ್​ ಬೆಂಬಲ ಕೊಟ್ಟರು. ಇದರ ಪರಿಣಾಮವಾಗಿ ಕೊಹ್ಲಿ ಏಳು ಎಸೆತಗಳಲ್ಲಿ 18 ರನ್ ಗಳಿಸಿದ ನಂತರ ಕ್ರೀಸ್​ನಿಂದ ನಿರ್ಗಮಿಸಬೇಕಾಯಿತು.

ಈ ನಿರ್ಧಾರದಿಂದ ಅಸಮಾಧಾನಗೊಂಡ ಕೊಹ್ಲಿ ಆನ್ ಫೀಲ್ಡ್ ಅಂಪೈರ್ ಗಳೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ಅದೇ ಕೋಪವನ್ನು ಅವರು ಕೊನೇ ತನಕ ಇಟ್ಟುಕೊಂಡಿದ್ದರು. ಪಂದ್ಯ ಮುಗಿದ ಬಳಿಕ ಕೈಕುಲುಕಲು ನಿರಾಕರಿಸಿದ್ದರಯ. ಈ ಕ್ಷಣವನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು.

ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಿದ ಐಪಿಎಲ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸದೆ ಹೋಗಲಿಲ್ಲ.  ಐಪಿಎಲ್ ಹೇಳಿಕೆಯ ಪ್ರಕಾರ, ಕೊಹ್ಲಿಯ ಕ್ರಮಗಳು ನೀತಿ ಸಂಹಿತೆಯ ಆರ್ಟಿಕಲ್ 2.8 ರ ಅಡಿಯಲ್ಲಿ ಲೆವೆಲ್ 1 ಅಪರಾಧವಾಗಿದೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

ಕ್ರಿಕೆಟ್ ಜಗತ್ತಿನಲ್ಲಿ ವಿವಾದಗಳು ಅಸಾಮಾನ್ಯವಲ್ಲವಾದರೂ, ಕೊಹ್ಲಿಯ ಪ್ರತಿಕ್ರಿಯೆಯು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಟಗಾರರು ಅನುಭವಿಸುವ ತೀವ್ರ ಭಾವನೆಗಳನ್ನು ಒತ್ತಿಹೇಳುತ್ತದೆ.

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್​ನಲ್ಲಿ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿದ್ದರು. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್​ ಅವರ 49 ಏಕ ದಿನ ಶತಕಗಳ ಸಾಧನೆಯನ್ನು ಮುರಿದಿದ್ದರು. ಹೀಗಾಗಿ ಅದು ಕ್ರೀಡಾ ಇತಿಹಾಸದಲ್ಲಿ ಚಾರಿತ್ರಿಕ ಘಟನೆಯಾಗಿದೆ. ಅವರು ಶತಕ ಬಾರಿಸಿದ ಬಳಿಕ ದೇಶ ವಿದೇಶಗಳ ಅಥ್ಲೀಟ್​ಗಳಿಂದ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರ ಆ ಅವಿಸ್ಮರಣೀಯ ಶತಕಕ್ಕೆ ಅಂತಾರಾಷ್ಟ್ರೀಯ ಗೌರವವೊಂದು ದೊರಕಿದೆ ಎಂಬುದಾಗಿ ವರದಿಯಾಗಿದೆ. ಕೊಹ್ಲಿಯ ಅಭಿಮಾನಿ ಎಂಬ ಹೆಸರಲ್ಲಿ ಸೃಷ್ಟಿ ಮಾಡಿರುವ ಎಕ್ಸ್​ ಖಾತೆಯಲ್ಲಿ ಈ ಮಾಹಿತಿಹಂಚಿಕೊಳ್ಳಲಾಗಿದೆ.

ಸ್ಪೇನ್ ನ ಮ್ಯಾಡ್ರಿಡ್ ನ ಪಲಾಸಿಯೊ ಡಿ ಸಿಬೆಲೆಸ್ ನಲ್ಲಿ ಸೋಮವಾರ (ಏಪ್ರಿಲ್ 22) ನಡೆದ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ ನಲ್ಲಿ ಕೊಹ್ಲಿಯ ಈ ಅಸಾಧಾರಣ ಸಾಧನೆಯನ್ನು ಉನ್ನತ ಕ್ರೀಡಾ ಕ್ಷಣಗಳಲ್ಲಿ ಒಂದಾಗಿ ಗೌರವಿಸಲಾಗಿದೆ ಎಂದು ಎಕ್ಸ್​ನಲ್ಲಿ ಬರೆಯಲಾಗಿದೆ.

ಈ ಮನ್ನಣೆ ನಿಸ್ಸಂದೇಹವಾಗಿ ಅರ್ಹವಾಗಿದೆ. ಏಕೆಂದರೆ ಮುಂಬೈನ ಕ್ರಿಕೆಟ್​ ಪ್ರೇಕ್ಷಕರು ಕೊಹ್ಲಿ ಇತಿಹಾಸವನ್ನು ನಿರ್ಮಿಸುವುದಕ್ಕೆ ಸಾಕ್ಷಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಶತಕ ಬಾರಿಸುವ ಮೂಲಕ ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೊಹ್ಲಿ, ವಿಶ್ವಕಪ್​ನ ಮೊದಲ ಸೆಮಿಫೈನಲ್​​ನಲ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.

ಎರಡು ದಶಕಗಳ ಕಾಲ ರಾಷ್ಟ್ರದ ಭರವಸೆಗಳನ್ನು ಹೊತ್ತ ಬ್ಯಾಟಿಂಗ್ ದಂತಕಥೆ ಸಚಿನ್ ಅವರ ಹೆಜ್ಜೆಗಳನ್ನು ಅನುಸರಿಸಿ, ಸಚಿನ್ ತೆಂಡೂಲ್ಕರ್ ಅವರ ಸ್ಮರಣೀಯ ವಿಶ್ವಕಪ್ ವಿದಾಯದ 12 ವರ್ಷಗಳ ನಂತರ, ಕೊಹ್ಲಿ 50 ನೇ ಏಕದಿನ ಶತಕವನ್ನು ತಲುಪಿದರು.

Continue Reading

ಕ್ರೀಡೆ

Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

Fantasy Gaming: ನನಗೆ ತುಂಬಾ ಸಂತೋಷವಾಯಿತು. ನಂಬಲಾಗಲಿಲ್ಲ. ಆರಂಭದಲ್ಲಿ ಇದು ವಂಚನೆ ಎಂದು ಭಾವಿಸಿದೆ. ಅಪ್ಲಿಕೇಶನ್ ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಎಂದು ನಂಬಿದ್ದೆ .ನಾನು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತೇನೆ. ನಡುವೆ ನಾನು ಕಳೆದ ಆರು ತಿಂಗಳಿನಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ, ನನಗೆ ಯಾವುದೇ ಕೆಲಸವಿರಲಿಲ್ಲ ಎಂದು ಓಜಾ ಹೇಳಿದ್ದಾನೆ.

VISTARANEWS.COM


on

Fantasy Gaming
Koo

ಬೆಂಗಳೂರು: ಅದೃಷ್ಟ ಯಾವಾಗ ಬಾಗಿಲು ಬಡಿದು ಮನೆಯೊಳಗೆ ನುಗ್ಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅದು ಅನಿರೀಕ್ಷಿತ, ಅಚ್ಚರಿ ಮತ್ತು ಅಪರೂಪ. ಇಂಥದ್ದೇ ಒಬ್ಬ ಅದೃಷ್ಟ ಶಾಲಿಯ ಪರಿಚಯವನ್ನು ನಿಮಗೆ ಮಾಡಿಸಬೇಕಾಗಿದೆ. ಅವರೇ ಬಿಹಾರದ ದೀಪು ಓಜಾ. ಭಾನುವಾರ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್​ನಲ್ಲಿ (Fantasy Gaming) ಐಪಿಎಲ್ ಫ್ಯಾಂಟಸಿ ಗೇಮಿಂಗ್ (Fantasy Gaming) ಆಡುವ ಮೂಲಕ ಬಿಹಾರದ ಅರ್ರಾ ಜಿಲ್ಲೆಯ ಕೊಹ್ಡಾ ಗ್ರಾಮದ ಈತ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾನೆ. ಅವರು ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಅದೃಷ್ಟಶಾಲಿ ಎನಿಸಿಕೊಂಡಿದ್ದಾರೆ. ಅಂದ ಹಾಗೆ ಓಜಾ 8 ನೇ ತರಗತಿಯಲ್ಲಿ ಫೇಲ್​, ಹಾಗೂ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾನೆ. ಕ್ರಿಕೆಟ್​ನ ಗಂಧ ಗಾಳಿ ಗೊತ್ತಿಲ್ಲ.

ಕ್ರಿಕೆಟ್ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂಬುದಾಗಿ ಓಜಾ ಹೇಳಿದ್ದಾನೆ. ನನಗೆ ಬೇರೆ ಕೆಲಸವಿಲ್ಲದ ಕಾರಣ ಆಕಸ್ಮಿಕವಾಗಿ ತಂಡವನ್ನು ಆಯ್ಕೆ ಮಾಡಿದೆ ಎಂದಿದ್ದಾನೆ. “ನನಗೆ ತುಂಬಾ ಸಂತೋಷವಾಯಿತು. ನಂಬಲಾಗಲಿಲ್ಲ. ಆರಂಭದಲ್ಲಿ ಇದು ವಂಚನೆ ಎಂದು ಭಾವಿಸಿದೆ. ಅಪ್ಲಿಕೇಶನ್ ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಎಂದು ನಂಬಿದ್ದೆ .ನಾನು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತೇನೆ. ನಡುವೆ ನಾನು ಕಳೆದ ಆರು ತಿಂಗಳಿನಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ, ನನಗೆ ಯಾವುದೇ ಕೆಲಸವಿರಲಿಲ್ಲ. ಹೀಗಾಗಿ ತಂಡವನ್ನು ರಚಿಸಿದೆ. ಇದು ಕೆಕೆಆರ್ ಮತ್ತು ಆರ್​​ಸಿಬಿ ನಡುವಿನ ಪಂದ್ಯ ಎಂದು ಎಂದು ಓಜಾ ಹೇಳಿದ್ದಾನೆ.

ಇದನ್ನೂ ಓದಿ: Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

ಸಿಕ್ಕಿರುವ ದುಡ್ಡನ್ನು ಏನು ಮಾಡಬೇಕೆಂದು ಆತ ಇನ್ನೂ ನಿರ್ಧರಿಸಿಲ್ಲವಂತೆ. ಅಂದ ಹಾಗೆ ಫ್ಯಾಂಟಿಸಿ ಗೇಮ್​ಗಳು ಲೀಗ್​ ಕ್ರಿಕೆಟ್​ ಬೆಳವಣಿಗೆ ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕ್ರಿಕೆಟ್​ ನೋಡುವ ಜತೆಗೆ ಆಟ ಆರಂಭಕ್ಕೆ ಮೊದಲು ತಂಡಗಳನ್ನು ರಚಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಾರೆ. ಫ್ಯಾಂಟಸಿ ಗೇಮ್​ಗಳು ಒಂದರ್ಥದಲ್ಲಿ ಬದಲಾದ ಜಗತ್ತಿನಲ್ಲಿ ಹೊಸ ಸ್ಪರ್ಧಾ ವೇದಿಕೆಯಾಗಿದೆ. ಆದರೆ, ಅಪಾಯಕಾರಿಯೂ ಹೌದು. ಆ್ಯಪ್​​ಗಳಲ್ಲಿ ಆಡುವಾಗ ಅದಕ್ಕಾಗಿ ನಿರ್ದಿಷ್ಟ ಮೊತ್ತವನ್ನು ಕಷ್ಟಬೇಕಾಗುತ್ತದೆ. ಒಂದರ್ಥದಲ್ಲಿ ಕಾನೂನುಬದ್ಧ ಜೂಜು. ಹಣದಾಸೆಗೆ ಬೀಳುವ ಕೆಲವರು ಇದೇ ವೇದಿಕೆಗಳ ಮೂಲಕ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಆಗಿವೆ. ಮದ್ಯಪಾನದ ರೀತಿಯಲ್ಲಿಯೇ ಫ್ಯಾಂಟಸಿ ಗೇಮ್​ಗಳ ಜಾಹೀರಾತು ನೀಡುವಾಗ ಮುಂದಾಗುವ ಅಪಾಯಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

Rohit Sharma : ಇಶಾನ್​ ಕಿಶನ್ ಜತೆ ಮಗುವಿನಂತೆ ಕ್ರಿಕೆಟ್​ ಆಡಿದ ರೋಹಿತ್​ ಶರ್ಮಾ

ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajastan Royals ) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಬಹುನಿರೀಕ್ಷಿತ ಐಪಿಎಲ್​ 2024ರ (IPL 2024) ಮುಖಾಮುಖಿಗೆ ಸಿದ್ಧತೆ ನಡೆಸುವ ವೇಳೆ ರೋಹಿತ್ ಶರ್ಮಾ (Rohit Sharma) ಅವರ ಬ್ಯಾಟಿಂಗ್​ ನೆಟ್ಟಿಗರ ಗಮನ ಸೆಳೆದಿದೆ. ಅವರ ಇಶಾನ್ ಕಿಶನ್​ಗೆ ವಿಕೆಟ್​ಕೀಪಿಂಗ್​ ಅಭ್ಯಾಸ ಮಾಡಲು ಮಕ್ಕಳಂತೆ ಬ್ಯಾಟ್ ಹಿಡಿದು ಬೀಸಿದ ಪ್ರಸಂಗ ನಡೆಯಿತು. ಏಪ್ರಿಲ್ 22 ರ ಸೋಮವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮುಖಾಮುಖಿಗೆ ಮುಂಚಿತವಾಗಿ ಇವರಿಬ್ಬರು ಕ್ಯಾಚಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಅದು ಸಣ್ಣ ಮಕ್ಕಳು ಆಡುವಂತೆ ಕಂಡು ಬಂತು.

ಮುಂಬೈ ಇಂಡಿಯನ್ಸ್ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರೋಹಿತ್ ಶರ್ಮಾ ಇಶಾನ್ ಕಿಶನ್ ಅವರ ವಿಕೆಟ್ ಕೀಪಿಂಗ್ ಕೌಶಲವನ್ನು ಹೆಚ್ಚಿಸಲು ಬ್ಯಾಟ್​ನಿಂದ ಸಣ್ಣ ಸಣ್ಣ ಹೊಡೆತಗಳನ್ನು ಹೊಡೆಯುತ್ತಿದ್ದರು. ಅದನ್ನು ಇಶಾನ್​ ಹಿಡಿಯುತ್ತಿದ್ದರು. ಈ ಅಭ್ಯಾಸದಿಂದ ಇಬ್ಬರಿಗೂ ಸಾಕಷ್ಟು ಲಾಭವಾಗುತ್ತದೆ.

ಇಶಾನ್ ರೋಹಿತ್ ಕಡೆಗೆ ಚೆಂಡುಗಳನ್ನು ಎಸೆದಾಗ ಇಬ್ಬರು ಆಟಗಾರರ ನಡುವಿನ ಸ್ನೇಹವು ಸ್ಪಷ್ಟವಾಯಿತು. ರೋಹಿತ್ ಶರ್ಮಾ ಕಿಶನ್​​ಗೆ ಕಡಿಮೆ ಅಂತರ ಕ್ಯಾಚ್​ಗಳನ್ನು ನೀಡುವಲ್ಲಿ ಅತಿ ಹೆಚ್ಚು ಉತ್ಸಾ ಹ ತೋರಿದ್ದರು. ಹಿರಿಯ ಆಟಗಾರರು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ನಿದರ್ಶನಗಳು ಮುಂಬೈ ಇಂಡಿಯನ್ಸ್ ನಂಥ ತಂಡಗಳಲ್ಲಿ ಮಾತ್ರ ಕಾಣಿಸುತ್ತದೆ. ಉಳಿದಂತೆ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿ ಇಂಥದ್ದಕ್ಕೆಲ್ಲ ನೆರವಾಗುತ್ತಾರೆ.

Continue Reading
Advertisement
Rajkumar Birth Anniversary TOP 10 Movies
ಸಿನಿಮಾ3 mins ago

Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು!

jai sriram slogan koppal crime news
ಕ್ರೈಂ35 mins ago

Jai Sriram Slogan: ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

ಪ್ರಮುಖ ಸುದ್ದಿ1 hour ago

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

bhagavanth khuba poster lok sabha election 2024
ಬೀದರ್‌1 hour ago

Lok Sabha Election 2024: ಪೋಸ್ಟರ್‌ ಮೂಲಕ ಸಚಿವ ಭಗವಂತ ಖೂಬಾ ಅವಹೇಳನ, ದೂರು

dashamukha column madness
ಅಂಕಣ2 hours ago

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

bengaluru karaga in darga
ಬೆಂಗಳೂರು2 hours ago

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

gukesh dommaraju rajamarga column
ಅಂಕಣ2 hours ago

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

, Dr. Rajkumar's birthday
ಪ್ರಮುಖ ಸುದ್ದಿ2 hours ago

Rajkumar Birthday : ಇಂದು ಡಾ. ರಾಜ್​ಕುಮಾರ್ ಜನುಮದಿನ; ವರನಟನಿಗೆ ಕನ್ನಡಿಗರ ನಮನ

Karnataka Weather Forecast
ಮಳೆ2 hours ago

Karnataka Weather : ಸುಳಿಗಾಳಿ ಪ್ರಭಾವ; ರಭಸ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಎಚ್ಚರಿಕೆ

Benefits of Bamboo Shoots
ಆರೋಗ್ಯ3 hours ago

Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌