ಚೆನ್ನೈ: ಐಪಿಎಲ್ 2023ರಲ್ಲಿ ಇದುವರೆಗೆ 7 ಗೆಲುವುಗಳನ್ನು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ಲೇಆಫ್ಗೆ ಅರ್ಹತೆ ಪಡೆಯುವ ಅಂಚಿನಲ್ಲಿದೆ. ಅಹಮದಾಬಾದ್ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 28ರಂದು ನಡೆಯಲಿರುವ ಟೂರ್ನಿಯ ಫೈನಲ್ಗೆ ಅವಕಾಶ ಪಡೆಯಲು ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ಅವವಕಾಶ ಸಿಗಲಿದೆ.
ಏತನ್ಮಧ್ಯೆ, ಇದು ಐಪಿಎಲ್ನಲ್ಲಿ ಎಂಎಸ್ ಧೋನಿ ಅವರ ಆಟ ಮುಗಿಯಲಿದೆ, ಅವರು ವಿದಾಯ ಹೇಳಲಿದ್ದಾರೆ ಎಂಬುದಾಗಿ ವದಂತಿಗಳು ಹಬ್ಬುತ್ತಿವೆ. ವಿಶೇಷವಾಗಿ ಅವರು ಮೊಣಕಾಲು ನೋವಿನಿಂದಲೂ ಬಳಲುತ್ತಿದ್ದಾರೆ. ಈ ಕುರಿತು ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಅಭಿಮಾನಿಗಳ ಭಾವನೆಗಳಿಗೆ ಘಾಸಿ ಮಾಡಬಾರದು. ಧೋನಿ ಐಪಿಎಲ್ನಲ್ಲಿ ಆಡುವುದನ್ನು ಮುಂದುವರಿಬೇಕು ಎಂದು ಹೇಳಿದ್ದಾರೆ.
ಎಂಎಸ್ ಧೋನಿ ತಮ್ಮ ವಯಸ್ಸಿನ ಬಗ್ಗೆ ಚಿಂತೆಯೇ ನಡೆಸುತ್ತಿಲ್ಲ. ಅವರು ಇನ್ನೂ ಅದೇ ಹಳೆಯ ಧೋನಿಯಂತೆ ಕಾಣುತ್ತಾರೆ. ಅವರು ಆ ದೊಡ್ಡ ಶಾಟ್ ಗಳನ್ನು ಸುಲಭವಾಗಿ ಹೊಡೆಯುತ್ತಿದ್ದಾರೆ. ಸಿಂಗಲ್ಸ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವನು ತನ್ನ ಪೂರ್ಣ ವೇಗದಲ್ಲಿ ಓಡದಿದ್ದರೂ, ಅವರು ಸಿಕ್ಸರ್ಗಳನ್ನು ಸುಲಭವಾಗಿ ಹೊಡೆಯುತ್ತಿದ್ದಾರೆ. ಬ್ಯಾಟಿಂಗ್ನೊಂದಿಗೆ ಅಪಾಯಕಾರಿಯಾಗಿ ಕಾಣುತ್ತಿದ್ದಾರೆ. ನಮ್ಮೆಲ್ಲರ ಭಾವನೆಗಳನ್ನು ನೋಯಿಸಬೇಡಿ, ಎಂಎಸ್ ಧೋನಿ. ನೀವು ಆಡುವುದನ್ನು ಮುಂದುವರಿಸಬೇಕು ಎಂದು ಹರ್ಭಜನ್ ಸಿಂಗ್ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಧೋನಿ ಚಾಣಾಕ್ಷ ಆಟಗಾರ : ಮಿಥಾಲಿ ರಾಜ್
ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನವನ್ನು ವಿಶ್ಲೇಷಿಸಿದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್, ನಾಯಕ ಎಂಎಸ್ ಧೋನಿಯನ್ನು ಶ್ಲಾಘಿಸಿದ್ದಾರೆ. 41 ವರ್ಷದ ಧೋನಿ ಈ ಋತುವಿನಲ್ಲಿ ಚೆನ್ನೈಗೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅದಕ್ಕಾಗಿ ಚಾಣಾಕ್ಷ ನಡೆಗಳನ್ನು ಇಟ್ಟಿದ್ದಾರೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಸಕ್ತ ಋತುವಿನಲ್ಲಿ ಸಿಎಸ್ಕೆ ಪರ ಭಾರಿ ಪ್ರಭಾವ ಬೀರಿದ ಅಜಿಂಕ್ಯ ರಹಾನೆ ಅವರ ಉದಾಹರಣೆಯನ್ನು ಮಾಜಿ ಕ್ರಿಕೆಟ್ ಆಟಗಾರ್ತಿ ಉಲ್ಲೇಖಿಸಿದ್ದಾರೆ. 34 ವರ್ಷದ ರಹಾನೆ 10 ಪಂದ್ಯಗಳಲ್ಲಿ 171.61 ಸ್ಟ್ರೈಕ್ ರೇಟ್ನಲ್ಲಿ 266 ರನ್ ಗಳಿಸಿರುವುದೇ ಅದಕ್ಕೆ ಉದಾಹರಣೆ ಎಂದು ಹೇಳಿದ್ದಾರೆ.
“ಒಬ್ಬ ಆಟಗಾರನು ತನ್ನ ವೃತ್ತಿಜೀವನದ ಕೊನೇ ಹಂತವನ್ನು ಸಮೀಪಿಸಿದಾಗ ಹಲವಾರು ದಾಖಲೆಗಳನ್ನು ಸೃಷ್ಟಿಸುತ್ತಾರೆ. ಎಂಎಸ್ ಧೋನಿ ಈ ಋತುವಿನಲ್ಲಿ ಅಬ್ಬರಿಸುತ್ತಾರೆ. ಅವರು ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅವರು ಸಿಎಸ್ಕೆ ತಂಡ ಅಗ್ರ ನಾಲ್ಕರ ಸ್ಥಾನಕ್ಕೆ ಪೈಪೋಟಿ ಕೊಡುವಂತೆ ಮಾಡಿದ್ದಾರೆ. ಇದು ಅವರ ನಾಯಕತ್ವದ ಗುಣಮಟ್ಟಕ್ಕಿರುವ ಅತ್ಯದ್ಭುತ ಉದಾಹರಣೆ. ಹಾಳಿ ಟೂರ್ನಿಯಲ್ಲಿ ಹಲವಾರು ಉತ್ತಮ ನಡೆಗಳನ್ನು ತೆಗೆದುಕೊಂಡಿದ್ದಾರೆ. ಎಂದು ಮಿಥಾಲಿ ಹೇಳಿದರು.